Connect with us

DAKSHINA KANNADA

ಅಕ್ರಮ ಗಾಂಜಾ ಸಾಗಾಟ; 40 ಸಾವಿರ ಮೌಲ್ಯದ ಗಾಂಜಾದೊಂದಿಗೆ ಒಂದು ಬೈಕ್  ವಶಕ್ಕೆ ..!

Published

on

ಅಕ್ರಮ ಗಾಂಜಾ ಸಾಗಾಟ; 40 ಸಾವಿರ ಮೌಲ್ಯದ ಗಾಂಜಾದೊಂದಿಗೆ ಒಂದು ಬೈಕ್  ವಶಕ್ಕೆ ..!

ಪುತ್ತೂರು:  ಅಕ್ರಮ ಗಾಂಜಾ ಸಾಗಾಟ ಪ್ರಕರಣವನ್ನು ಪುತ್ತೂರು ನಗರ ಠಾಣಾ ಪೊಲೀಸರು ಭೇದಿಸಿದ್ದಾರೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಓರ್ವ ಆರೋಪಿಯನ್ನು  ಬಂಧಿಸಿದ್ದಾರೆ.

ಕಡಬ ಸವಣೂರು ಗ್ರಾಮದ ನಿವಾಸಿ ನವಾಜ್ ಬಂಧಿತ ಆರೋಪಿಯಾಗಿದ್ದಾನೆ.ಆರೋಪಿಯು ಪುತ್ತೂರು ತಾಲೂಕು ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ತಿರುವಿನ ಬಳಿ ಬೈಕ್‍ನಲ್ಲಿ ಬಂದು  ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನಿಂದ ಸುಮಾರು 4 0,000 ಮೌಲ್ಯದ ಎರಡು ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ 12,000 ರೂ ಮೌಲ್ಯದ  ಮೋಟಾರು ಸೈಕಲ್  ಮತ್ತು  ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ..

Click to comment

Leave a Reply

Your email address will not be published. Required fields are marked *

DAKSHINA KANNADA

ಪ್ರತಿಭಾವಂತೆ ವಿದ್ಯಾರ್ಥಿನಿಯನ್ನು ಬಲಿ ಪಡೆದ ಮೆದುಳು ಜ್ವರ

Published

on

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿರ್ತಾಡಿ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ನ 10ನೇ ತರಗತಿಯ ಸ್ವಸ್ತಿ ಶೆಟ್ಟಿ (15) ಮೃತ ವಿದ್ಯಾರ್ಥಿನಿ. ಸ್ವಸ್ತಿ ಶೆಟ್ಟಿ ಮೆದುಳು ಜ್ವರ ಉಲ್ಬಣಗೊಂಡ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Swasthi

ಉತ್ತಮ ತ್ರೋಬಾಲ್ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದಳು.ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

DAKSHINA KANNADA

ಬಿಜೆಪಿಗೆ ಸವಾಲಾದ ಬಿರುವೆರ್..! ವರ್ಕೌಟ್‌ ಆಗಿಲ್ಲ ನಮೋ ಪ್ಲ್ಯಾನ್‌…!

Published

on

ಮಂಗಳೂರು : 33 ವರ್ಷದ ಬಳಿಕ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪ್ರಚಾರದ ವೈಖರಿ ಹಾಗೂ ಪಡೆದುಕೊಳ್ಳುತ್ತಿರುವ ಜನಪ್ರೀಯತೆ ಒಂದು ಕಾರಣವಾದ್ರೆ. ಬಿಜೆಪಿಯಲ್ಲಿದ್ದ ಬಿಲ್ಲವ ಸಮೂದಾಯದ ಬಹುದೊಡ್ಡ ಮತದಾರರು ಪದ್ಮರಾಜ್ ಕಡೆ ವಾಲಿರುವುದು ಮತ್ತೊಂದು ಕಾರಣ . ಈ ಎರಡು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಯಿಸಿ ಅವರ ಮೂಲಕ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಮಾಡಿಸಲಾಗಿದೆ.

ಎಚ್ಚರಿಕೆ ನೀಡಿದ್ದ ನಾರಾಯಣಗುರು ವಿಚಾರ ವೇದಿಕೆ..!

ಬಿಲ್ಲವರನ್ನು ಓಲೈಸಿಕೊಳ್ಳಲು ಬಿಜೆಪಿಗೆ ಇದ್ದ ಒಂದೇ ಮಾರ್ಗ ಅಂದ್ರೆ ಅದು ನಾರಾಯಣಗುರು.  ಆ ಒಂದು ಕಾರಣ ಇಟ್ಟುಕೊಂಡು ಕಾರಣಾಂತರದಿಂದ ಸಮಾವೇಶ ರದ್ಧು ಮಾಡಿ ರೋಡ್‌ ಶೋ ನಡೆಸಲಾಗಿತ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿ ಬಳಿಕ ರೋಡ್‌ ಶೋ ಮಾಡುವ ಬಗ್ಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಆದ್ರೆ ಈ ವಿಚಾರ ತಿಳಿಯುತ್ತಿದ್ದಂತೆ ನಾರಾಯಣಗುರು ವಿಚಾರ ವೇದಿಕೆ ಮೂಲಕ ಸತ್ಯಜಿತ್‌ ಸುರತ್ಕಲ್‌ ಬಿಜೆಪಿ ನಾಯಕರಿಗೆ ಹಲವು ಸವಾಲು ಎಸೆದಿದ್ದರು.  ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ, ರಾಜ್ಯದಲ್ಲಿ ಪಠ್ಯದಿಂದ ನಾರಾಯಣಗುರುಗಳ ಪಾಠ ತೆಗೆದು ಹಾಕಿರುವುದು ಹಾಗೂ ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಉತ್ತರ ನೀಡಿ ಎಂದು ಆಗ್ರಹಿಸಿದ್ದರು.  ಇಷ್ಟೆಲ್ಲಾ ಮಾಡಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಬಿಜೆಪಿಯ ನಿರ್ಧಾರವನ್ನು ಟೀಕಿಸಿದ್ದರು.

 

ಬಿಲ್ಲವರ ಕಡೆಗಣನೆ ಮಾಡಿದ ಬಿಜೆಪಿ ನಾಯಕರು…!

ಪ್ರಧಾನಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ್ರೆ ಎಲ್ಲವೂ ಸರಿಯಾಗಲಿದೆ ಅಂದುಕೊಂಡಿದ್ದರು. ಆದ್ರೆ ಬಹುತೇಕ ಬಿಲ್ಲವರು ಮೋದಿ ಕಾರ್ಯಕ್ರಮದ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಧಾನಿ ಮೋದಿ ಗುರುಗಳಿಗೆ ಹಾರ ಹಾಕುವಾಗ ಮಾಡಿದ ಆ ಒಂದು ತಪ್ಪು ಬಿಲ್ಲವ ಸಮೂದಾಯದ ಜನರ ಮನಸಿಗೆ ನೋವುಂಟು ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ ನಾರಾಯಣ ಗುರು ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಬಿರುವೆರ ಕುಡ್ಲದ ಮುಖಂಡ ಉದಯ ಪೂಜಾರಿಯನ್ನು ಕಡೆಗಣಿಸಿದ್ದೂ ಬಿಲ್ಲವ ಯುವಕರಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಗುರು ಪೀಠದ ಮೇಲೆ ಕಾಲಿರಿಸಿದ ಪ್ರಧಾನಿ..!

ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲಿರಿಸಿದ್ದರು. ಇದು ಬಿಲ್ಲವರ ಸ್ವಾಭಿಮಾನದ ಮೇಲೆ ಸ್ಥಳಿಯ ಬಿಜೆಪಿಯ ನಾಯಕರು ಇಟ್ಟ ಕಾಲು ಎಂದು ಟೀಕೆ ವ್ಯಕ್ತವಾಗಿದೆ. ಬಿರುವೆರ ಕುಡ್ಲದ ಉದಯ ಪೂಜಾರಿಯನ್ನು ಕಡೆಗಣಿಸಿದ್ದಲ್ಲದೆ, ಮೋದಿಯವರಿಗೆ ಸರಿಯಾದ ಮಾರ್ಗದರ್ಶನ ನೀಡದೆ ಈ ಪ್ರಮಾದ ಆಗಿದೆ. ಪ್ರಧಾನಿ ಮೋದಿಯ ಮೇಲೆ ಇರುವ ಅಭಿಮಾನ ಬಿಟ್ಟು ಕೊಡದ ಬಿಲ್ಲವ ಯುವಕರು ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲು ಇರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಕಾಂಗ್ರೆಸ್‌ ಪಕ್ಷ ಕೂಡಾ ಅಸ್ತ್ರವಾಗಿ ಬಳಸಿಕೊಂಡಿದೆ.

 

ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಹೋಗಿ ಬಿಜೆಪಿ ಯಡವಟ್ಟು…!

ಪದ್ಮರಾಜ್‌ ಪೂಜಾರಿ ಅವರಿಗೆ ಟಿಕೇಟ್‌ ಸಿಕ್ಕ ಸಮಯದಲ್ಲಿ ಭಾಷಣ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಪದ್ಮರಾಜ್‌ ಪೂಜಾರಿ ದೇಶ ದ್ರೋಹಿ ಎಂದು ಕರೆದಿದ್ದರು . ಆ ಒಂದು ಹೇಳಿಕೆಯ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಬಿಜೆಪಿ ನಾಯಕರು ಹಲವಾರು ಸರ್ಕಸ್‌ ಮಾಡಿದ್ದಾರೆ. ಜನಾರ್ಧನ ಪೂಜಾರಿ ಕಾಲಿಗೆ ಬಿದ್ದ ಬೃಜೇಶ್‌ ಚೌಟ ಒಂದು ರೀತಿಯಲ್ಲಿ ಬಿಲ್ಲವರ ಮನ ಒಲಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಆದರೆ ಅದಾಗಲೇ ಬಿಲ್ಲವ ಯುವಕರು ಅದೇನೇ ಆದ್ರೂ ಈ ಬಾರಿ ಪದ್ಮರಾಜ್‌ ಪೂಜಾರಿ ಗೆಲ್ಲಿಸುವ ಪಣತೊಟ್ಟಿದ್ದಾರೆ. ಬಿಜೆಪಿ ಮತಗಳು ಕೇವಲ ಜಾತಿ ಹೆಸರಿನಲ್ಲಿ ಕಾಂಗ್ರೆಸ್‌ ಪಾಲಾಗಲಿದೆ ಅನ್ನೋ ಆತಂಕದಲ್ಲಿ ಬಿಲ್ಲವರ  ಓಲೈಕೆಗೆ ಪ್ರಧಾನಿ ಮೋದಿಯವರನ್ನು ಕರೆಸಲಾಗಿದೆ. ಆದ್ರೆ ಈಗ ಪ್ರಧಾನಿ ಮೋದಿ ಅವರಿಂದ ಆದ ಪ್ರಮಾದ ಹಾಗೂ ಸ್ಥಳೀಯ ನಾಯಕರಿಂದ ಬಿರುವೆರ ಕುಡ್ಲದ ನಾಯಕನ ಕಡೆಗಣನೆ ಬಿಜೆಪಿಗೆ ಮುಳುವಾಗುವ ಲಕ್ಷಣ ಕಾಣಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ಬಂದು ಹೋದಾಗಿನಿಂದ ಈ ಚರ್ಚೆ ಜೋರಾಗಿ ನಡೆಯುತ್ತಿದೆ.

Continue Reading

DAKSHINA KANNADA

ನಿರ್ಮಾಣ ಹಂತದ ಸೇತುವೆ ಕುಸಿದು 7 ಮಂದಿಗೆ ಗಾಯ

Published

on

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಪಿಪ್ಪಾಡಿ ಎಂಬಲ್ಲಿ ನಡೆದಿದೆ.

ಈ ಸೇತುವೆಯ ಕೊನೆಯ ಕ್ಷಣದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಕಾಂಕ್ರಿಟ್ ಕಾಮಗಾರಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದು ಬಿದ್ದಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿ ಗಾಯಗೊಂಡವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒರ್ವ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Continue Reading

LATEST NEWS

Trending