International news
4 ಸಾವಿರ ಕೋಟಿಯ ಮನೆ..8 ಖಾಸಗಿ ಜೆಟ್..700 ಹೈಎಂಡ್ ಕಾರುಗಳು..! ಯಾರು ಈ ಶ್ರೀಮಂತ..?
Published
7 months agoon
By
NEWS DESK4ಮಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಎಲೋನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲರೂ ಹುಬ್ಬೇರುವಷ್ಟು ಆಸ್ತಿ, ಪಾಸ್ತಿ ಹೊಂದಿದ್ದಾರೆ. ಆದರೆ, ಅವರಿಗಿಂತಲೂ ಶ್ರೀಮಂತರಿದ್ದಾರೆ ಗೊತ್ತಾ!? ಅಬ್ಬಾ! ಹೌದಾ! ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ನೀವು ಹುಬ್ಬೇರಿಸುತ್ತಿರಬಹುದು. ಇಲ್ಲಿದೆ ಆ ಕುಟುಂಬದ ಸಂಪೂರ್ಣ ವಿವರ.
ಬ್ಲೂಮ್‌ಬರ್ಗ್ ವರದಿ ಮಾಡಿರೋ ಶ್ರೀಮಂತರು
ಎಲೋನ್ ಮಸ್ಕ್ ಮನೆ ಬರೋಬ್ಬರಿ 4 ಸಾವಿರ ಕೋಟಿ ಬೆಲೆ ಬಾಳಿದ್ರೆ, ಈ ಕುಟುಂಬ 8 ಖಾಸಗಿ ಜೆಟ್ ಗಳನ್ನು ಹೊಂದಿದೆ. 700 ಹೈ ಎಂಡ್ ಕಾರುಗಳು ಇವರಲ್ಲಿದೆ. ಬ್ಲೂಮ್ ಬರ್ಗ್ ಇತ್ತೀಚಿಗೆ ಮಾಡಿದ ವರದಿಯಂತೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವ ಎಲೋನ್ ಮಸ್ಕ್ ಆಸ್ತಿ 14,87,360 ಕೋಟಿ(ಹದಿನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಮುನ್ನೂರ ಅರುವತ್ತು ಕೋಟಿ)ಯಾಗಿದೆ.
ಆದ್ರೆ, ಆ ಕುಟುಂಬದ ಒಟ್ಟು ಆಸ್ತಿ ಕನಿಷ್ಟ ಅಂದ್ರೂ 25,33,113 ಕೋಟಿ (ಇಪ್ಪತೈದು ಲಕ್ಷದ ಮೂವತ್ತಮೂರು ಸಾವಿರದ ನೂರ ಹದಿಮೂರು ಕೋಟಿ) ಎಂದು ಅಂದಾಜಿಸಿದೆ. ಆದ್ರೆ, ಎಲೋನ್ ಮಸ್ಕ್ ಆಸ್ತಿ ವೈಯಕ್ತಿಕವಾಗಿದ್ದರೆ, ಇವರದ್ದು ಕುಟುಂಬದ ಆಸ್ತಿಯಾಗಿದೆ. ಆದ್ರೆ ಜಗತ್ತಿನಲ್ಲೇ ಅತ್ಯಂತ ಐಶಾರಾಮಿ ಜೀವನ ನಡೆಸ್ತಾ ಇದೆ ಈ ಕುಟುಂಬ.
ಯಾವುದು ಆ ಕುಟುಂಬ?
ಅಂದಹಾಗೆ ಅತ್ಯಂತ ಐಷಾರಾಮಿ ಜೀವನ ಸಾಗಿಸುತ್ತಿರುವ ಆ ಕುಟುಂಬ ‘ಅಬುಧಾಬಿಯ ರಾಜಮನೆತನ‘. ಇದನ್ನು ಅಲ್-ನಯನ್ ಕುಟುಂಬ ಎಂದೂ ಕೂಡಾ ಕರೆಯಲಾಗುತ್ತದೆ. ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಇವರೇ ಅತ್ಯಂತ ಐಶಾರಾಮಿ ಜೀವನ ಸಾಗಿಸುತ್ತಿರುವ ಕುಟುಂಬ. ಇವರು ವಾಸವಾಗಿರುವ ಅರಮನೆಯ ಅಂದಾಜು ಮೌಲ್ಯ 4000 ಕೋಟಿಯದ್ದಾಗಿದೆ. ಇನ್ನು 700 ಐಶಾರಾಮಿ ಕಾರುಗಳು, ಗಾಲ್ಫ್ ಆಡಬಹುದಾದ ದೊಡ್ಡದಾದ ವಿಹಾರ ನೌಕೆ, ಇನ್ನು ತಿರುಗಾಡಲು 8 ಖಾಸಗಿ ಜೆಟ್‌ಗಳು ಇವರ ಬಳಿ ಇದೆ.
ಜಗತ್ತಿನಾದ್ಯಂತ ಸಾವಿರಾರು ಕೋಟಿ ಹೂಡಿಕೆ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮತ್ತು ಮುಖ್ಯಸ್ಥ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯಾನ್ ಅವರ ಕುಟುಂಬವು ಪ್ರಪಂಚದಾದ್ಯಂತ ಸಾವಿರಾರು ಹೂಡಿಕೆಗಳನ್ನು ಹೊಂದಿದೆ. ಅಲ್ಲದೇ, ಜಗತ್ತಿನಾದ್ಯಂತ ಸಾಕಷ್ಟು ಆಸ್ತಿಗಳನ್ನು ಈ ಕುಟುಂಬ ಖರೀದಿಸಿದೆ. ಪ್ಯಾರಿಸ್‌ನಲ್ಲಿರುವ ಚಟೌ ಡಿ ಬೈಲೊ ಮತ್ತು ಯುಕೆಯಲ್ಲಿನ ಅನೇಕ ಆಸ್ತಿಗಳ ಮಾಲೀಕತ್ವದ ಕಾರಣ ಶೇಖ್ ಖಲೀಫಾ ಅವರನ್ನು ಲಂಡನ್‌ನ ಜಮೀನುದಾರ ಎಂದು ಕರೆಯಲಾಗುತ್ತದೆ. ಈ ಕುಟುಂಬವು ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಹೂಡಿಕೆ ಮಾಡಿದೆ. ಇದು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್ ಎಕ್ಸ್ ಮತ್ತು ರಿಹಾನ್ನಾ ಅವರ ಐಷಾರಾಮಿ ಕಂಪನಿ ಸ್ಯಾವೇಜ್ ಎಕ್ಸ್‌ನ ಹೆಸರುಗಳನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ : ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?
ರಾಯಲ್ ವಿಹಾರ ನೌಕೆ :
ರಾಯಲ್ ಫ್ಯಾಮಿಲಿ ಅಂದ್ರೆ ಕೇಳ್ಬೇಕಾ..! ಎಲ್ಲವೂ ರಾಯಲ್ ಆಗೇ ಇರುತ್ತದೆ. ಈ ಕುಟುಂಬ ಪ್ರಪಂಚದ ಅತಿದೊಡ್ಡ ವಿಹಾರ ನೌಕೆಯನ್ನು ಹೊಂದಿದೆ, ಅದರ ಮೇಲೆ ಗಾಲ್ಫ್ ಕೋರ್ಸ್ ಅನ್ನು ನಿರ್ಮಿಸಲಾಗಿದೆ. ನೀಲಿ ಸೂಪರ್‌ಯಾಚ್‌ನ ಉದ್ದವು ಸುಮಾರು 591 ಅಡಿಗಳು, ಇದರ ಬೆಲೆ ಸುಮಾರು 4,991 ಕೋಟಿ ರೂ. ಜೊತೆಗೆ ಹಲವು ಐಶಾರಾಮಿ ಕಾರುಗಳೂ ಇವೆ. ಬುಗಾಟಿ, ಫೆರಾರಿ, ಮೆಕ್ಲಾರೆನ್, ಮರ್ಸಿಡಿಸ್-ಬೆನ್ಜ್ ಮತ್ತು ಲಂಬೋರ್ಘಿನಿ ಸೇರಿದಂತೆ ಹಲವು ಕಾರುಗಳಿವೆ.
BIG BOSS
ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ
Published
35 minutes agoon
23/11/2024ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.
ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
BIG BOSS
ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್
Published
3 hours agoon
23/11/2024ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.
ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.
ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .
ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.
ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
LATEST NEWS
ಕರ್ನಾಟಕ ಉಪಚುನಾವಣೆ : ‘ಕೈ’ ಹಿಡಿದ ಮತದಾರ…ಕಮಲಕ್ಕೆ ಶಾಕ್
ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200+ ಕ್ಷೇತ್ರಗಳಲ್ಲಿ ಮುನ್ನಡೆ
ಬಾಗಲಕೋಟೆ ಹೇರ್ ಡ್ರೈಯರ್ ಸ್ಫೋಟಕ್ಕೆ ಬಿಗ್ ಟ್ವಿಸ್ಟ್: ಪ್ರಕರಣದ ಹಿಂದಿದೆ ಪ್ರೇಮ ಪುರಾಣ
ಪತಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನು ಕೊಂ*ದ ಪಾಪಿ ತಾಯಿ!
ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !
ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್..! 6 ಕೋಟಿ ಮೌಲ್ಯದ ಡ್ರ*ಗ್ಸ್ ಜಪ್ತಿ..!
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- Baindooru22 hours ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!