Connect with us

DAKSHINA KANNADA

ಪ್ರತಿಭಟನಾಕಾರರ ಉದ್ರೇಕಕಾರಿ ವರ್ತನೆಗೆ ಲಾಠಿಚಾರ್ಜ್‌: ದ.ಕ ಎಸ್ಪಿ ಸ್ಪಷ್ಟನೆ

Published

on

ಪುತ್ತೂರು: ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಪಿಎಫ್ಐ ಪ್ರತಿಭಟನೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ವಿಸ್ತೃತ ಮಾಹಿತಿ ಮಾಧ್ಯಮಗಳಿಗೆ ನೀಡಿದ್ದಾರೆ.


ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿ.13 ರಂದು ಸಿನಾನ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಬಂಥಿತ ಸಿನಾನ್ ನೀಡಿದ ಮಾಹಿತಿ ಪ್ರಕಾರ ಮುಸ್ತಫಾ, ಹಮೀದ್, ಝಕಾರಿಯಾ ಎಂಬ ಮೂವರನ್ನು ವಶಕ್ಕೆ‌ ಪಡೆಯಲಾಗಿದೆ.

ಈ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಪಿಎಫ್ಐ ಸಂಘಟನೆ ಕಾರ್ಯಕರ್ತರಿಂದ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಪರಿಣಾಮ ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು.

ಆದರೂ ರಾತ್ರಿ 9.30 ಕ್ಕೆ ಮತ್ತೆ ಠಾಣೆಗೆ ಮುತ್ತಿಗೆ ಹಾಕಿ ಠಾಣೆಯ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಈ ಸಂದರ್ಭ ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಲಾಗಿದೆ ಎಂದರು.

ಈ ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

DAKSHINA KANNADA

ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ವರ್ಗಾವಣೆ

Published

on

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್‌ ಸಿ.ಎಲ್‌. ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ತತ್‌ಕ್ಷಣ ಜಾರಿಗೆ ಬರುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅವರನ್ನು ಹಿಂಪಡೆಯಲಾಗಿದೆ.

ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್‌ ಅವರನ್ನು ನೂತನ ಆಯುಕ್ತರಾಗಿ ಸರಕಾರ ನೇಮಕ ಮಾಡಿದೆ.

ಇದನ್ನೂ ಓದಿ : ಬಸ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್; ಕಥೆ ಹಾಗಲ್ಲ ಹೀಗೆ ಎಂದ ವಿದೇಶದಲ್ಲಿರುವ ಮಾಲಕ

ರವಿಚಂದ್ರ ನಾಯಕ್‌ ಅವರು ಈ ಮೊದಲು ಮಂಗಳೂರಿನಲ್ಲಿ ತಹಶೀಲ್ದಾರ್‌ ಹಾಗೂ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

Continue Reading

DAKSHINA KANNADA

ನಾಳೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಹಾರಕ್ಕೆ

Published

on

ಮಂಗಳೂರು : ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜ. 20 ಮತ್ತು 21ರಂದು ಬಿಹಾರಕ್ಕೆ ತೆರಳಿದ್ದಾರೆ.

ಪಾಟ್ನಾದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಪೀಠಾಸೀನಾ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿರುವ ಅವರು “ಸಂವಿಧಾನದ 75ನೇ ವಾರ್ಷಿಕೋತ್ಸವ: ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಸಂಸತ್ತು ಮತ್ತು ಶಾಸಕಾಂಗ ಸಂಸ್ಥೆಗಳ ಕೊಡುಗೆ” ಎಂಬ ವಿಷಯದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ.

ಇದನ್ನೂ ಓದಿ: ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

ಈ ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

 

Continue Reading

DAKSHINA KANNADA

ಮಾಟಮಂತ್ರದ ಹೆಸರು ಹೇಳಿ ವೃದ್ಧೆಗೆ ಮೂತ್ರ ಕುಡಿಸಿದ ಗ್ರಾಮಸ್ಥರು

Published

on

ಮಂಗಳುರು/ಅಮರಾವತಿ: ಮಾಟಮಂತ್ರ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ 77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ್ದು ಮಾತ್ರವಲ್ಲದೆ ಬಳಿಕ ಕಬ್ಬಿಣದ ರಾಡ್‌ನಿಂದ ಹೊಡೆದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಡಿಸೆಂಬರ್ 30ರಂದು ಈ ಘಟನೆ ನಡೆದಿದ್ದರೂ ಈ ತಿಂಗಳ ಆರಂಭದಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ಶುಕ್ರವಾರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಚಿಕಲ್ದಾರಾ ತಾಲೂಕಿನ ರೆತ್ಯಾಖೇಡ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಡಿಸೆಂಬರ್ 30ರಂದು ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ನೆರೆಹೊರೆಯವರು ಆಕೆಯನ್ನು ಹಿಡಿದು ಆಕೆ ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಕಟ್ಟಿಹಾಕಿದ್ದಾರೆ. ಬಳಿಕ, ಗ್ರಾಮಸ್ಥರು ಸಂತ್ರಸ್ತೆಯನ್ನು ಮರದ ಕೋಲಿನಿಂದ ಹೊಡೆದು, ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ. ಆಕೆಯ ಕೈ ಮತ್ತು ಕಾಲುಗಳ ಮೇಲೆ ಬಿಸಿ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಲಾಗಿದೆ. ಆ ಮಹಿಳೆಗೆ ಮೂತ್ರ ಕುಡಿಯಲು ಮತ್ತು ನಾಯಿಯ ಮಲ ಸೇವಿಸಲು ಒತ್ತಾಯಿಸಲಾಯಿತು. ನಂತರ ಆಕೆಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು. ಕೆಲಸಕ್ಕೆ ಹೋಗಿದ್ದ ಆ ಮಹಿಳೆಯ ಮಗ ಮತ್ತು ಸೊಸೆ ಮನೆಗೆ ಬಂದಾಗ ಈ ವಿಷಯ ತಿಳಿದು ಅವರು ಜನವರಿ 5ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

Continue Reading

LATEST NEWS

Trending

Exit mobile version