ಮಂಗಳೂರು: ಬುಧವಾರ ಜೆಪ್ಪು ಮಾರುಕಟ್ಟೆಯ ಸಮೀಪದ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿ ದೊರಕಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ನಾಗೇಶ್ ಆತ್ಮಹತ್ಯೆಗೂ ಮುನ್ನ ಎಎಸ್ಸೆಯೋರ್ವರಿಗೆ ಕಳುಹಿಸಿರುವ ವಾಯ್ಸ್ ಮೆಸೇಜ್ ಹಾಗೂ ಡೆತ್ ನೋಟ್‌ನಲ್ಲಿ ನೂರ್ ಜಹಾನ್ ಎಂಬ ಮಹಿಳೆಯ ಹೆಸರು ಉಲ್ಲೇಖಿಸಲಾಗಿತ್ತು.
ಈ ಪ್ರಕರಣದಲ್ಲಿ ಮಹಿಳೆಯನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿತ ಮಹಿಳೆಯಿಂದ ಮತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿ ದೊರಕಿಲ್ಲ.
ಮನೆ ಕೆಲಸಕ್ಕೆ ಬರುತ್ತಿದ್ದ ನಾಗೇಶ್ ಪತ್ನಿಗೆ ಹಣಕಾಸಿನ ನೆರವು ನೀಡಿರುವುದಾಗಿ ಹೇಳಿಕೊಂಡಿದ್ದಾಳೆ.
ವಿಚಾರಣೆ ಮುಂದುಮದಿದೆ ಎಂದು ಹೇಳಿದರು.
ನಾಗೇಶ್ ತನ್ನ ಪತ್ನಿ ಮಕ್ಕಳನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿ ರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷನರ್,
ನಿನ್ನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನಾಗೇಶ್ ಪತ್ನಿ ವಿಜಯಲಕ್ಷ್ಮೀ ದೇಹದಲ್ಲಿ ಗಾಯದ ಗುರುತು, ರಕ್ತ ಕಂಡುಬಂದಿತ್ತು.
ಮಾತ್ರವಲ್ಲದೆ ಮಂಚದ ಮೇಲಿದ್ದ ತಲೆದಿಂಬಿನಲ್ಲೂ ರಕ್ತದ ಕಲೆ ಕಂಡುಬಂದಿರುವುದರಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ.
ಮೃತ ನಾಗೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹೆಣ್ಣು ಮಗುವಿನ ಬಾಯಿಯಿಂದ ನೊರೆ ಬಂದಿರುವುದು ವಿಷ ಪ್ರಾಶನವಾಗಿರುವ ಶಂಕೆ ಮೂಡಿಸಿದೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಎದುರು ನೋಡಲಾಗುತ್ತಿದೆ ಎಂದು ಹೇಳಿದರು.
ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು ಮಂಗಳೂರಿನಲ್ಲಿ ಕಳೆದ ಸುಮಾರು 8 ವರ್ಷಗಳಿಂದ ನೆಲೆಸಿದ್ದ ನಾಗೇಶ್ ಶೇರಿಗುಪ್ಪಿ, ಪ
ತ್ನಿ ವಿಜಯಲಕ್ಷ್ಮೀ, ಮಕ್ಕಳಾದ ಸಪ್ನಾ ಮತ್ತು ಸಮರ್ಥ್ ಮೋರ್ಗನ್ಸ್ ಗೇಟ್‌ನಲ್ಲಿ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.