ಕಾಬೂಲ್: ಅಮೆರಿಕ ಸೇನೆ ಡ್ರೋನ್ ಮೂಲಕ ಐಎಸ್ಐಎಸ್ ಉಗ್ರರ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ 10 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಈ ದಾಳಿಯಲ್ಲಿ ನಾಲ್ಕು ಕಂದಮ್ಮಗಳೂ ಸಹ ಸಾವನ್ನಪ್ಪಿವೆ.
ಅಮೆರಿಕ ಸೇನೆ ಉಗ್ರರ ವಿರುದ್ಧ ದಾಳಿ ನಡೆಸಿದ್ದೇನೋ ಸರಿ.
ಆದರೆ ಆ ಮಕ್ಕಳು ಏನು ತಪ್ಪು ಮಾಡಿದ್ದವು? ಈ ಸಾವಿಗೆ ನ್ಯಾಯ ಒದಗಿಸುವವರಾರು ಎಂದು ಆಫ್ಘನ್ ಪ್ರಜೆಗಳು, ಮಕ್ಕಳ ಪೋಷಕರು ಪ್ರಶ್ನಿಸುತ್ತಿದ್ದಾರೆ.
ಕಾಬೂಲ್ ಏರ್ಪೋರ್ಟ್ ಮೇಲೆ 5 ರಾಕೆಟ್ಗಳಿಂದ ದಾಳಿ.
ಸಾವು-ನೋವಿನ ಆತಂಕ ಇಂದೂ ಸಹ ಉಗ್ರರು ಕಾಬೂಲ್ ವಿಮಾನ ನಿಲ್ದಾಣದ ಮೇಲೆ 5 ರಾಕೆಟ್ಗಳ ಮೂಲಕ ದಾಳಿ ಮಾಡಿದ್ದಾರೆ.
ದಾಳಿಯ ಮುನ್ಸೂಚನೆ ಪಡೆದಿದ್ದ ಅಮೆರಿಕ ಸೇನೆ ಡಿಫೆನ್ಸ್ ಸಿಸ್ಟಮ್ ಮೂಲಕ ರಾಕೆಟ್ಗಳನ್ನ ಓಡಿಸಿದೆ. ಹೀಗೆ ಉಗ್ರರು ಮತ್ತು ಅಮೆರಿಕ ಸೇನೆಯ ನಡುವಿನ ದಾಳಿಯಲ್ಲಿ ಅಫ್ಘನ್ ಜನರು ತತ್ತರಿಸುವಂತಾಗಿದೆ. ಅಮಾಯಕರು ಸಾವನ್ನಪ್ಪುವಂತಾಗಿದೆ.