ಬೆಂಗಳೂರು: ಭಾರತ -ಶ್ರಿಲಂಕಾ ನಡುವೆ ನಡೆಯುತ್ತಿದ್ದ ಪಿಂಕ್ ಟೆಸ್ಟ್ ವೇಳೆ ನಿಯಮವನ್ನು ಮೀರಿ ಮೈದಾನಕ್ಕೆ ಪ್ರವೇಶಿಸಿ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕರನ್ನು ಬಂಧಿಸಿದ ಘಟನೆ ನಡೆದಿದೆ.
ಈ ಪಂದ್ಯದ ಎರಡನೇ ಟೆಸ್ಟ್ ವೇಳೆ ನಾಲ್ವರು ಯುವಕರು ಪೊಲೀಸರ ಹಾಗೂ ಕ್ರೀಡಾಂಗಣದ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನದೊಳಗೆ ಪ್ರವೇಶಿಸಿ ಅವಾಂತರ ಸೃಷ್ಠಿಸಿದ್ದರು. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಜೊತೆ ಫೋಟೋಗಾಗಿ ಮುಗಿ ಬಿದ್ದಿದ್ದರು.
ಆದರೆ ಅಭಿಮಾನಿಗಳ ಆಸೆಗೆ ತಾಳ್ಮೆಯಿಂದ ಪ್ರತಿಕ್ರಿಯಿಸಿದ ಕೊಹ್ಲಿ ಸೆಲ್ಫಿಗೆ ಫೋಸ್ ಕೂಡ ಕೊಟ್ಟಿದ್ದರು. ಆ ಬಳಿಕ ಗಮಿನಿಸಿದ ಸ್ಥಳದಲ್ಲಿದ್ದ ಪೊಲೀಸರು ಯುವಕರನ್ನು ಹಿಡಿದು ಮೈದಾನದಿಂದ ಹೊರಗೆಳೆದು ತಂದಿದ್ದರು.
ಮೈದಾನಕ್ಕೆ ಎಂಟ್ರಿ ಕೊಟ್ಟ ಯುವಕರಲ್ಲಿ ಓರ್ವ ಕಲ್ಬುರ್ಗಿಯವನಾಗಿದ್ದು ನಾಲ್ವರು ಯುವಕರು ಬೆಂಗಳೂರಿನವರೆಂದು ತಿಳಿದುಬಂದಿದೆ.
ಅತಿಕ್ರಮ ಪ್ರವೇಶ ಮತ್ತು ನಿಯಮ ಉಲ್ಲಂಘನೆಯಡಿಯಲ್ಲಿ ಸದ್ಯ ನಾಲ್ವರು ಯುವಕರ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.