Connect with us

    DAKSHINA KANNADA

    ಬೈಕ್‌ನಲ್ಲೇ ಇಂಡಿಯಾ-ಪಾಕಿಸ್ತಾನ್ ಬಾರ್ಡರ್‌ಗೆ ಹೋಗಿ ಬಂದ ತುಳುನಾಡ ಕುವರಿಯರು

    Published

    on

    ಮಂಗಳೂರು: ದೂರದ ಗುಜರಾತ್‌ನ ಕಚ್‌ ಗೆ ಬೈಕ್‌ ರೈಡ್‌ ಮಾಡಿದ ಕರಾವಳಿ ಕುವರಿಯರ ಸಾಹಸ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕುವರಿಯರ ತಂಡ ಮಂಗಳೂರಿಗೆ ವಾಪಾಸ್ ಆಗಿದೆ.

    13 ದಿನಗಳ ಕಾಲ ನಾಲ್ವರು ಯುವತಿಯರು ಬೈಕ್ ಪ್ರವಾಸ ಮಾಡಿ ವಾಪಾಸ್ಸಾಗಿದ್ದು ತಂಡವನ್ನು ಮಂಗಳೂರಿನಲ್ಲಿ ಅವರಿಗೆ ಆರತಿ ಬೆಳಗಿ, ಸಿಹಿ ಹಂಚಿ ಅದ್ದೂರಿಯಾಗಿ ಸ್ವಾಗತಿಸಿದರು.

    ಪಟಾಕಿ ಸಿಡಿಸಿ ಅವರ ಆಗಮನವನ್ನು ಸಂಭ್ರಮಿಸಿದರು.

    ಮಂಗಳೂರಿನ ಬೈಕರ್ನಿ ಕ್ಲಬ್ 3,600 ಕಿಲೋ ಮೀಟರ್ ದೂರದ ಪ್ರಯಾಣವನ್ನು ಮಹಿಳಾ ಸಬಲೀಕರಣ ಜಾಗೃತಿಗಾಗಿ ಸಂಘಟಿಸಿತ್ತು.

    ಡಿಸೆಂಬರ್ 24 ರಂದು ಮಂಗಳೂರಿನ ಸರ್ಕಿಟ್‌ ಹೌಸ್ ನಿಂದ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದ ಬಳಿಕ ಮಂಗಳೂರು ಬೈಕರ್ನಿಯ ಕ್ಲಬ್‌ನ ಸಂಸ್ಥಾಪಕಿ ಕೀರ್ತಿ ಉಚ್ಚಿಲ್‌, ಕರಾಟೆ ಪಟು ಪೂಜಾ ಜೈನ್‌, ದಿವ್ಯಾ ಪೂಜಾರಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಅಪೂರ್ವ ಅವರು ಪ್ರಯಾಣ ಆರಂಭಿಸಿದ್ದರು.

    ಬೈಕ್ ಪ್ರಯಾಣದ ಅನುಭವವನ್ನು ಹಂಚಿಕೊಂಡ ಅವರು “ಇಂಡಿಯಾ- ಪಾಕಿಸ್ತಾನ್ ಗಡಿಗೆ ಹೋಗಿದ್ದೆವು. ಅದು ನಿರ್ಜನ ಪ್ರದೇಶವಾಗಿತ್ತು. ಗಡಿ ಭಾಗಕ್ಕೆ ತಲುಪಿದಾಗ ನಮಗೆ ಮೊಬೈಲ್ ಬಳಕೆ ಕೂಡ ನಿಷೇಧವಿತ್ತು.

    ರಾತ್ರಿಯ ಸಮಯದಲ್ಲಿ ಭಯ ಆಗಿತ್ತು. ಆದರೆ ಇಂಡಿಯಾ- ಪಾಕಿಸ್ತಾನ್ ಗಡಿ ನೋಡಿ ಬಂದದ್ದೇ ಒಂದು ಖುಷಿಯ ವಿಚಾರ.

    ಅಲ್ಲಿ ಬಿ.ಎಸ್.ಎಫ್ ಯೋಧರು ನಮಗೆ ತುಂಬಾ ಸಹಾಯ ಮಾಡಿದರು. ಈ ಒಂದು ಅನುಭವ ಅದು ತುಂಬಾ ಖುಷಿ ನೀಡಿದೆ. ಪ್ರತಿ ದಿನ ಹೊಸ ಹೊಸ ಸವಾಲುಗಳನ್ನು ಎದುರಿಸಿದ್ದೆವು.

    ಅತ್ಯಂತ ಕಠಿಣ ಪರಿಸ್ಥಿತಿ ಎಂದರೆ ಗುಜರಾತ್ ಹೈವೆ ಪಾಸಾಗುವಾಗ ಅಲ್ಲಿ ರಸ್ತೆಯೇ ಸರಿಯಿರಲಿಲ್ಲ.

    ಸುದೀರ್ಘ ಪ್ರಯಾಣ ಮತ್ತು ದೂರದ ಊರಿಗೆ ಏಕಾಂಗಿಯಾಗಿ ಬೈಕ್ ಚಲಾಯಿಸುವುದು ಒಂದು ಸವಾಲಾಗಿತ್ತು” ಎನ್ನುತ್ತಾರೆ.

    ಇನ್ನು ಪ್ರಾದೇಶಿಕ ಅಭಿಮಾನವನ್ನು ವ್ಯಕ್ತಪಡಿಸಿದ ಅವರು “ಅಲ್ಲಿಯ ಜನ ನಾವು ಮಂಗಳೂರಿನವರು ಎಂದು ಗೊತ್ತಾದಾಗ ನಮ್ಮ ಬಗ್ಗೆ ಹೆಮ್ಮೆ ಪಟ್ಟರು.

    ಭುಚ್‌ನಲ್ಲಿ ನಲ್ಲಿ ಕನ್ನಡ ಸಂಘದವರನ್ನು ನಮ್ಮನ್ನು ಆಮಂತ್ರಿಸಿ ಉತ್ತಮ ರೀತಿಯಲ್ಲಿ ಸತ್ಕರಿಸಿದರು. ಅಷ್ಟೇ ಅಲ್ಲದೆ ನಾವು ಮಾಡಿದ ಸಾಹಸಕ್ಕೆ ನಮ್ಮ ಜೊತೆ ಫೋಟೋ ತೆಗೆದುಕೊಳ್ಳಲು ಜನ ಮುಗಿಬಿದ್ದರು.

    ಸೂರತ್‌ಗೆ ಹೋದಾಗ ಅಲ್ಲಿ ಮಂಗಳೂರಿನವರೇ ವಾಸ್ತವ್ಯ ಹೂಡಿದ್ದರು. ಅವರು ಸತ್ಕರಿಸಿದ ರೀತಿ ಕೂಡ ತುಂಬಾ ಚೆನ್ನಾಗಿತ್ತು. ತುಳು ಭಾಷೆಯನ್ನು ಮಾತಾಡುವವರನ್ನು ಕಂಡಾಗ ಮಾತ್ರ ಇನ್ನೂ ಸಂತೋಷವಾಗಿತ್ತು.

    ಇನ್ನು ಮಾಧ್ಯಮದವರಿಗೆ ನಾವು ವಿಶೇಷ ಧನ್ಯವಾದ ಅರ್ಪಿಸುತ್ತೇವೆ. ಏಕೆಂದರೆ ನಾವು ರೈಡ್ ಗೆ ಹೋಗುವಾಗ ಎಲ್ಲಾ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಮಾಡಿದ್ದರು” ಎಂದು ಹೇಳಿದ್ದಾರೆ.

    ಬೈಕ್ ಪ್ರಯಾಣದ ಬಗ್ಗೆ ಆಸಕ್ತಿಯಿರುವ ಹುಡುಗಿಯರಿಗೆ ಸಲಹೆ ಕೊಟ್ಟ ಇವರು “ಮಹಿಳೆಯರಿಗೂ ಖಂಡಿತ ಅಸಾಧ್ಯವಾದದ್ದು ಯಾವುದೂ ಇಲ್ಲ. ಮಂಗಳೂರಿನಲ್ಲಿಯೇ ಬೈಕರ್ನಿ ಕ್ಲಬ್ ಕೂಡ ಇಂತಹ ಆಸಕ್ತಿಗಾರರಿಗೆ ಉತ್ತಮ ವೇದಿಕೆಯನ್ನು ನೀಡುತ್ತದೆ. ನಮಗೆ ಸಾಧ್ಯವಾಗಿದೆ ಎಂದ ಮೇಲೆ ಎಲ್ಲರಿಗೂ ಈ ಸಾಹಸ ಸಾಧ್ಯ.

    ಇದು ರೋಮಾಂಚನಕಾರಿ ಅನುಭವದ ಜೊತೆ ಒಂದು ಚಾಲೆಂಜಿಗ್ ಟಾಸ್ಕ್ ಆಗಿತ್ತು. ಅದನ್ನು ಯಶಸ್ವಿಯಾಗಿ ಮುಕ್ತಾಯ ಗೊಳಿಸಿದ್ದು ತುಂಬಾ ಸಂತೋಷ ತಂದಿದೆ” ಎಂದು ಸಾಹಸಿ ಯುವತಿಯರು ನಮ್ಮ ಕುಡ್ಲಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    BANTWAL

    ದೊಡ್ಮನೆಗೆ ಎಂಟ್ರಿ ಕೊಟ್ಟ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ಯ

    Published

    on

    ಬಂಟ್ವಾಳ : ಖ್ಯಾತ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
    ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ತಮ್ಮ ಕಾಮಿಡಿ ಮ್ಯಾನರಿಸಂನಿಂದಲೇ ಫೇಮಸ್. ಹಾಸ್ಯಮಯ ವೀಡಿಯೋಗಳನ್ನು ಮಾಡಿ ಜನಮನಕ್ಕೆ ಹತ್ತಿರವಾಗಿದ್ದಾರೆ. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

    ಟಿಕ್ ಟಾಕ್ ನಲ್ಲಿ ಕಾಮಿಡಿ ವೀಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಧನರಾಜ್ ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.


    ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್ಯ ಜೊತೆಗೂಡಿ ವೀಡಿಯೋಗಳನ್ನು ಮಾಡುತ್ತಿರುವ ಧನರಾಜ್ ಆಚಾರ್ಯ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

    Continue Reading

    DAKSHINA KANNADA

    ಪುತ್ತೂರು ಕಾಂಗ್ರೆಸ್‌ ಮುಖಂಡನ ಅಶ್ಲೀ*ಲ ವೀಡಿಯೋ ವೈರಲ್‌..!

    Published

    on

    ಪುತ್ತೂರು : ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡನೊಬ್ಬನ ಅಶ್ಲೀ*ಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಪುಕ್ಕಟೆ ಸಲಹೆ ನೀಡುತ್ತಿದ್ದ ಅದ್ದು ಪಡೀಲ್‌ ಎಂಬ ಈ ಕಾಂಗ್ರೆಸ್‌ ನಾಯಕ ಈಗ ಅಶ್ಲೀ*ಲ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ಧಿಯಾಗಿದ್ದಾರೆ.

    ಸಾರ್ವಜನಿಕರ ಆಕ್ರೋಶ; ನಾನಲ್ಲ ಎಂದ ಅದ್ದು :

    ಹಣ ಪಾವತಿಸಿದರೆ ಸಿಗುವ ಆನ್‌ಲೈನ್ ಸೆ*ಕ್ಸ್‌ ಫ್ಲಾಟ್‌ಫಾರಂನಲ್ಲಿ ಅದ್ದು ಪಡೀಲ್‌ ವೀಡಿಯೋ ಚಾಟಿಂಗ್ ಮಾಡಿದ್ದಾರೆ. ಧಾರ್ಮಿಕ ಕೇಂದ್ರವೊಂದರಲ್ಲಿ ಈ ವೀಡಿಯೋ ಚಾಟಿಂಗ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.  ಊರಿಗೆ ಬುದ್ದಿ ಹೇಳುವ ವ್ಯಕ್ತಿಯ ಈ ರೀತಿಯ ವರ್ತನೆ ಎಷ್ಟು ಸರಿ ಎಂಬ ಬಗ್ಗೆ ಜನರೇ ಅದ್ದು ಪಡೀಲ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

    ಆದ್ರೆ, ಈ ವಿಡಿಯೋ ಬಗ್ಗೆ ಮಾತನಾಡಿರುವ ಅದ್ದು ಪಡೀಲ್‌ ಈ ವೀಡಿಯೋಗು ನನಗೂ ಯಾವುದೇ ಸಂಬಂಧವಿಲ್ಲ. ಇದು ಟೆಕ್ನಾಲಜಿ ಬಳಸಿ ಮಾರ್ಫಿಂಗ್ ಮಾಡಿ ನನ್ನಂತೆ ತೋರಿಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

    ಇದನ್ನೂ ಓದಿ : ವಿಮಾನದಲ್ಲಿ ನೀಡಿದ ಆಮ್ಲೆಟ್‌ನಲ್ಲಿ ಜಿರಳೆ..! ಪೋಸ್ಟ್‌ ವೈರಲ್‌ ..!

    ಆದ್ರೆ, ಅದ್ದು ಪಡೀಲ್ ಅವರ ಈ ಉತ್ತರ ಪುತ್ತೂರಿನ ಜನ ನಂಬಿಲ್ಲ. ಈ ಬಗ್ಗೆ ತನಿಖೆ ನಡೆಸಲು ಅದ್ದು ಪಡೀಲ್ ಅವರೇ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಸಿಗುವ ಇಂತಹ ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು

    Continue Reading

    DAKSHINA KANNADA

    ಕೆಸಿಸಿಐ ನೂತನ ಅಧ್ಯಕ್ಷರಾಗಿ ಆನಂದ್ ಜಿ.ಪೈ ನೇಮಕ

    Published

    on

    ಮಂಗಳೂರು : 2024-25 ನೇ ಸಾಲಿನ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (ಕೆಸಿಸಿಐ) ನೂತನ ಅಧ್ಯಕ್ಷರಾಗಿ ಆನಂದ್ ಜಿ.ಪೈ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 27 ರಂದು ಶುಕ್ರವಾರ ನಡೆದ ಕೆಸಿಸಿಐನ 84 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

    ಭಾರತ್ ಗ್ರೂಪ್‌ನ ಕಾರ್ಯತಂತ್ರದ ಯೋಜನೆ ಮತ್ತು ವೈವಿಧ್ಯೀಕರಣದ ಉಸ್ತುವಾರಿ ವಹಿಸಿಕೊಂಡರು. ಇವರು ಯುಎಸ್‌ನ ಮಿಚಿಗನ್‌ ನಲ್ಲಿರುವ ಆಂಡ್ರ್ಯೂಸ್ ವಿಶ್ವವಿದ್ಯಾಲಯದಿಂದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಇಂಜಿನಿಯರ್ ಆಗಿ ಪದವಿ ಪಡೆದರು. ನಂತರ ಅದೇ ವಿಶ್ವವಿದ್ಯಾಲಯದಿಂದ ಸಾಫ್ಟ್‌ವೇರ್ ಇಂಜಿನಿಯರ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಇದನ್ನೂ ಓದಿ : ಉಡುಪಿ : ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಇನ್ನಿಲ್ಲ

    2024-25 ನೇ ಸಾಲಿನ ಇತರ ಪದಾಧಿಕಾರಿಗಳ ವಿವರ :

    ಉಪಾಧ್ಯಕ್ಷರಾಗಿ ಪಿ.ಬಿ.ಅಹ್ಮದ್ ಮುದಸ್ಸರ್, ಗೌರವ ಕೋಶಾಧಿಕಾರಿಯಾಗಿ ಅಬ್ದುರ್ ರಹಮಾನ್ ಮುಸ್ಬಾ , ಗೌರವ ಕಾರ್ಯದರ್ಶಿಯಾಗಿ ಅಶ್ವಿನ್ ಪೈ ಮಾರೂರ್, ಆದಿತ್ಯ ಪದ್ಮನಾಭ ಪೈ ಜೊತೆಗೆ 12 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.

    Continue Reading

    LATEST NEWS

    Trending