ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಸರಿಸುಮಾರು 32 ಕೋಟಿ ರೂಪಾಯಿ ವೆಚ್ಚದ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2ವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಗುತ್ತಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸದನದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮಾತಿನ ಜಟಾಪಟಿ ನಡೆದು ಕೊನೆಗೆ ಪಾಲಿಕೆ ಆಯುಕ್ತರು ಮಧ್ಯೆ ಪ್ರವೇಶಿಸಿ ವಿಪಕ್ಷ ನಾಯಕರನ್ನು ಸುಮ್ಮನಿರಿ ಎಂದು ಗದರಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಾಲಿಕೆ ಸಭೆಯಲ್ಲಿ ಈ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವಾಗಿದೆ ಎಂಬ ಆರೋಪ ವಿಪಕ್ಷವಾದ ಕಾಂಗ್ರೆಸ್ ಸದಸ್ಯರು ಮಾಡಿದ್ದು ಈ ಸಂದರ್ಭ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್ -2 ಯೋಜನೆ ಬಗ್ಗೆ ವಿಪಕ್ಷ ಸದಸ್ಯರು ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸದ್ಯ ಈ ಕಮಾಂಡ್ ಸೆಂಟರ್ ಗುತ್ತಿಗೆಯನ್ನು ಟೆಕ್ನಾಸಿಸಿ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ನೀಡಲಾಗಿದೆ.
ಚೀನಾ ನಿರ್ಮಿತ ಯಾವುದೇ ಪರಿಕರಗಳನ್ನು ಭದ್ರತಾ ದೃಷ್ಟಿಯಿಂದ ಅಳವಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಅದನ್ನು ಇಲ್ಲಿ ಅಳವಡಿಸಿರುವುದು ಏಕೆಂದು ಕಾಂಗ್ರೆಸ್ಸಿನ ಎ ಸಿ ವಿನಯರಾಜ್ ಪ್ರಶ್ನಿಸಿದರು.
ವಿಶೇಷವಾಗಿ ಭದ್ರತಾ ದೃಷ್ಟಿಯಿಂದ ಅಳವಡಿಸಲಾಗುವ ಇದರ ಎಲ್ಲಾ ಪರಿಕರಗಳೂ ಸೂಕ್ತವಾಗಿಲ್ಲ ಎಂದು ಕಂಪೆನಿಯನ್ನು ಈಗಾಗಲೇ ಬ್ಲ್ಯಾಕ್ ಲಿಸ್ಟಿಗೆ ಸೇರಿಸಲಾಗಿದೆ.
ಹೀಗಿರುವಾಗ ಈ ಕಂಪೆನಿಗೆ ಕಮಾಂಡ್ ಕಂಟ್ರೋಲ್ ಸಿಸ್ಟಂನ ಗುತ್ತಿಗೆ ನೀಡಿರುವುದು ಸರಿಯಲ್ಲ ಎಂದು ವಾದಿಸಿದರು.
ಇದಕ್ಕೆ ಎಲ್ಲಾ ಸದಸ್ಯರೂ ಬೆಂಬಲಿಸಿದರು. ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿರುವ ಕಂಪೆನಿಯೊಂದಕ್ಕೆ ಈ ಕಮಾಂಡ್ ಸೆಂಟರನ್ನು ಕಂಟ್ರೋಲ್ ಮಾಡಲು ನೀಡಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಧ್ಯ ಪ್ರವೇಶಿಸಿ ಕಾಂಗ್ರೆಸ್ ಸದಸ್ಯರನ್ನು ಸುಮ್ಮನಿರಿ ಎಂದು ಗದರಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ಅವರ ಹೇಳಿಕೆ ಖಂಡಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಸ್ಮಾರ್ಟ್ ಸಿಟಿ- ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-1 & 2
ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-1- ಟೆಂಡರ್ ಮೊತ್ತ- ರೂ.23.4 ಕೋಟಿ, ಇದರಲ್ಲಿ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ, ಸಾಲಿಡ್ ವೇಸ್ಟ್ – ಮ್ಯಾನೇಜ್‌ಮೆಂಟ್, ಇನ್ಸಿಡೆಂಟ್ ಲಿಪೋರ್ಟಿಂಗ್, ಪ್ರಾಪರ್ಟಿ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್, ಬರ್ತ್ ಅಂಡ್ ಡೆತ್ ಸರ್ಟಿಪಿಕೇಟ್, ಆ್ಯಡ್ ಹೋಡಿಂಗ್ಸ್, ಇ-ಮಾರ್ಕೆಟ್ ವ್ಯವಸ್ಥೆಗಳನ್ನು ಒಳಗೊಂಡಂತಹ ಯೋಜನೆ, ಕೆಲವೊಂದು ವಿಭಾಗಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿರುತ್ತದೆ.
ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2, ಒಟ್ಟು ಮೊತ್ತ 32 ಕೋಟಿ ಯೋಜನೆ ಆಗಿರುತ್ತದೆ.
ಈ ಯೋಜನೆಯಲ್ಲಿ ಸುಮಾರು 6 ಕಂಪೆನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತದೆ. ಅದು ಕೇರಳ ಸ್ಟೇಟ್ ಇಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ (ಕೆಲ್ಟಾನ್ ಅಮಿಟೆಡ್. ಮೆಡ್ರಾಸ್_ಸೆಕ್ಯುರಿಟೀಸ್ ಪ್ರಿಂಟರ್ ಪ್ರೈವೆಟ್ ಲಿಮಿಟೆಡ್, ಸಿ.ಎಂ.ಎಸ್ ಕಂಪ್ಯೂಟರ್, ಅಮಿಟೆಡ್, ಮ್ಯಾಟ್ರಿಕ್ಸ್ ಸೆಕ್ಯುಲಿಟಿ ಆ್ಯಂಡ್ ಸರ್ವಲೆನ್ಸ್ ಪ್ರೈವೆಟ್ ಲಿಮಿಟೆಡ್, ಐ.ಟಿ.ಐ ಲಿಮಿಟೆಡ್, ಟೆಕ್ನಾಸಿಸ್ ಸೆಲ್ಯುಲಿಟೀಸ್ ಸಿಸ್ಟಂ ಪ್ರೈವೆಟ್ ಲಿಮಿಟೆಡ್.
ಟೆಂಡರ್ ಪ್ರಕ್ರಿಯೆಯಲ್ಲಿ ಮೆಡ್ರಾಸ್ ಸೆಲ್ಯುಲಿಟಿ ಕಂಪೆನಿ ಮತ್ತು ಸಿ.ಎಂ.ಎಸ್ ಕಂಪೆನಿಗಳು ಟೆಕ್ನಿಕಲ್ ಅಡ್ಡಿನಲ್ಲಿ ಅನರ್ಹ ಎಂದು ಆದೇಶವಾಗಿರುತ್ತದೆ.
ಇದರಲ್ಲಿ ಸಿ.ಎಂ.ಎಸ್ ಎಂಬ ಕಂಪೆನಿಯು ಭಾರತ ದೇಶದಲ್ಲಿಯೇ ಕಮಾಂಡ್ ಕಂಟ್ರೋಲ್ ಸೆಂಟರ್ ಅನುಷ್ಠಾನ ಮಾಡುವುದರಲ್ಲಿ ದಿಗ್ಗಜನಾಗಿದ್ದು, ಇವರು ಸೀಮನ್ ఎంబ ವಿದೇಶಿ ಕಂಪೆನಿಯಿಂದ ತಾಂತ್ರಿಕತೆಯನ್ನು ಪಡೆಯುವ ಕಂಪೆನಿಯಾಗಿರುತ್ತದೆ.
ಈಗಾಗಲೇ ಮುಂಬೈ ನಗರ, ಗುಜರಾತಿನ ಅಹ್ಮದಾಬಾದ್ ಹಾಗೂ ಬರೋಡ ಮುಂತಾದ ಬೃಹತ್ ನಗರಗಳಲ್ಲಿ ಕಮಾಂಡ್ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಿರುವ ಕಂಪೆನಿಯಾಗಿರುತ್ತದೆ.
• ಐ.ಟಿ.ಐ ಲಿಮಿಟೆಡ್ (ಸರಕಾರಿ ಸ್ವಾಮ್ಮ) ಹೆಚ್ಚಿನ ಮೊತ್ತವನ್ನು ಸಲ್ಲಿಸಿದ ಕಾರಣ ಹೊರಬಿದ್ದಿದ್ದು ಮತ್ತು ಮ್ಯಾಟ್ರಿಕ್ಸ್ ಎಂಬ ಕಂಪೆನಿ ಟೆಕ್ನಿಕಲ್ ಬಿನಲ್ಲಿ ಪ್ರಥಮ ಅಂಕವನ್ನು ಪಡೆದ ಕಂಪೆನಿ ಆಗಿದ್ದು ಅದು ಕೂಡಾ ಹೆಚ್ಚಿನ ಮೊತ್ತವನ್ನು ಅಡ್ಡಿಂಗ್ ಮಾಡಿ ಹೊರಬಿದ್ದಿರುತ್ತದೆ.|
ಕಮಾಂಡ್ ಅಂಟ್ರೋಲ್ ಸೆಂಟರ್ ಫೇಸ್-2 ಟೆಂಡರ್ ನಲ್ಲಿ ಟೆಕ್ನಸಿಸಿ ಸೆಕ್ಯೂರಿಟಿಸ್ ಪ್ರೈವೆಟ್ ಅಮಿಟೆಡ್ ಎಂಬ ಕಂಪೆನಿಯು ಅರ್ಹ ಕಂಪೆನಿ ಮತ್ತು ಸಕ್ಸಸ್ ಪುಲ್ ಬಿಡ್ಡರ್ ಎಂದು ಘೋಷಣೆಯಾಗಿರುತ್ತದೆ.
• ಆದರೆ ಈ ಕಂಪೆನಿಯು ಭೋಪಾಲ್ ಮತ್ತು ಘಾಜಿಯಾಬಾದ್ ನಲ್ಲಿ ಇಂತದ್ದೇ ಯೋಜನೆ ಅನಷ್ಠಾನ ಮಾಡುವಲ್ಲಿ ವೈಫಲ್ಯವನ್ನು ಅಂಡು ಕಪ್ಪು ಪಟ್ಟಿಗೆ ಸೇರ್ಪಡೆಯಾಗಿರುತ್ತದೆ. ಈ ಕಂಪೆನಿಗೆ ಈ ಯೋಜನೆ ಸಿಗುವಂತೆ ಮಾಡಲು ಈ ಯೋಜನೆಯ ಕನ್ಸಲೆಂಟ್ ಇರುವಂತಹ ನೈಸ್ ಎನ್ ಸೋನ್ ಕಂಪೆನಿಯ ಕೈಯಾಡಿಸಿರುತ್ತದೆ. ಆಗಿರುವಂತಹ ಸ್ಟೆಪ್-ಎನ್-ಸ್ಟೋನ್ ಕಂಪೆನಿಯು ಕೈಯಾಡಿಸಿರುತ್ತದೆ, ಕಾರಣ ಕಂಪೆನಿಯು ಕಂಪೆನಿಯ ಅಧಿಕಾರಿಗಳ ಪ್ರೀತಿಯ ಕಂಪೆನಿಯಾಗಿರುತ್ತದೆ. ಉಳಿದ ಅಂಪನಿಗಳನ್ನು ಹೊರ ಹಾಕುವಲ್ಲಿ ಟೆಂಡರ್ ಇವಲ್ಯುವೇಷನ್ ಸಮಿತಿಯ ಮೇಲೆ ಒತ್ತಡ ಎಂದು ಯಶಸ್ಸನ್ನು ಕಂಡಿದೆ. ಯಾಕೆಂದರೆ ಈ ಕನ್ಸಲ್ಟೆಂಟ್ ಕಂಪೆನಿ ಕೂಡ ಇವ್ಯಾಲ್ಯುವೇಷನ್ ಸಮಿತಿಯ ಸದಸ್ಯನೇ ಆಗಿರುತ್ತದೆ.
ಈ ಕನ್ಸಲ್ಟೆಂಟ್ ಕಂಪೆನಿಯು ಸ್ವತಃ ರಡಾರ್ ಹಾರ್ಡವೇರ್ ಡಿಸ್ಟಿಬ್ಯೂಟರ್ ಆಗಿದ್ದು ಅವರ ಅ ಹಾರ್ಡ್‌ವೇರ್ ನ್ನು ಈ ಟೆಕ್ನಾಸಿಸ್ ಕಂಪೆನಿಯು ಖರೀದಿ ಮಾಡಲು ಸಂಚು ಮಾಡಿದ್ದು, ಹಾಗೂ ಈ ಯೋಜನೆಗೆ ಬೇಕಾದಂತಹ ಇತರ ಎಲ್ಲಾ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ಇವರು ಹೇಳಿದ ಕಂಪೆನಿಯಿಂದ ಖರೀದಿ ಮಾಡಲು ಸಂಚು ನಡೆಸಿದ್ದು, ಇದರಿಂದ ಕನ್ಸಲೆಂಟ್ ಕಂಪೆನಿಯು ಮಂಗಳೂರು ಸ್ಮಾರ್ಟ್ ಸಿಟಿ ಕಂಪೆನಿಯಿಂದ ಸರ್ವಿಸ್ ಚಾರ್ಜ್ ಮಾತ್ರವಲ್ಲದೇ ಡಿವೈಸ್ ಗಳನ್ನು ಖರೀದಿ ಮಾಡುವಲ್ಲಿ ಕೋಟಿಗಟ್ಟಲೆ ಕಮಿಷನ್ ಪಡೆಯಲು ಸಂಚು ನಡೆಸಿರುತ್ತದೆ.
ಇದು ಮಾತ್ರವಲ್ಲದೇ ಇದೇ ಆನ್ಸಲೆಂಟ್ ಕಂಪೆನಿಯು ಈ ಯೋಜನೆಗೆ ಬೇಕಾದಂತಹ ರಿಕ್ವೆಸ್ಟ್ ಫಾರ್ ಪ್ರೋಪೋಸಲ್ ತಯಾರಿ ಮಾಡಿರುತ್ತದೆ. ಈ ಯೋಜನೆಯ ತಾಂತ್ರಿಕ ಮತ್ತು ಡಿವೈಸ್‌ಗಳನ್ನು ಡಿಪಿಆರ್ ಗಳಲ್ಲಿ ಹಾಕುವಂತಹ ಸಂಧರ್ಭದಲ್ಲಿ ಈ ಕಂಪೆನಿಗೆ ಸಂಭಂಧ ಇರುವಂತಹ ಅಂಪೆನಿಗಳು ತಯಾರಿಸುವ ಡಿವೈಸ್‌ಗಳ ಸ್ಪೆಸಿಫಿಕೇಷನ್‌ಗಳನ್ನು ಇಳವಡಿಸಿರುತ್ತದೆ. ಯಾಕೆಂದರೆ ಈ ಸ್ಪೆಸಿಫಿಕೇಷನ್ ಇರುವ ಹಾರ್ಡ್‌ವೇರ್‌ಗಳು, ಕೆಲವೇ ಅಂಪೆನಿಗಳಿಂದ ಖರೀದಿ ಮಾಡುವಂತೆ ಇದ್ದು, ಇದು ಈ ಕನ್ಸಲ್ಲೆಂಟ್ ಕಂಪೆನಿಗೆ ಹತ್ತಿರವಿರುವ ಕಂಪೆನಿಗಳಾಗಿರುತ್ತವೆ. ಈ ಆನ್ಸಸ್ಟೆಂಟ್ ಕಂಪೆನಿಗೆ ಕೇವಲ 3 ವರ್ಷದ ಪರಿಣತಿ ಇದ್ದು, ಸ್ಕಾರ್ಟ್ ಸಿಟಿ ಕಂಪೆನಿಯ ಮೇಲಾಧಿಕಾರಿಗಳ ಕೃಪಾಕಟಾಕ್ಷದಿಂದ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಕನ್ಸಲೆಂಟ್ ಆಗಿ ಆಯ್ಕೆಯಾಗಿರುತ್ತದೆ.
ಈ ಮೊದಲು ವಾಡಿಯ ಟಿನ್ನೋ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಇವರು ಕಮಾಂಡ್ ಕಂಟ್ರೋಲ್ ಸೆಂಟರಿಗೆ ಸಿ-ಡ್ಯಾಕ್ ಎಂಬ ಪಬ್ಲಿಕ್ ಸೆಕ್ಟರ್ ಪಿ.ಎಸ್.ಯು ಕಂಪೆನಿಯನ್ನು ಕನ್ಸಲೆಂಟ್ ಆಗಿ ಪಡೆದುಕೊಂಡಿತ್ತು. ಸುಮಾರು 6 ತಿಂಗಳಿಂದ ಈ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಯಾವುದೇ ಪ್ರಗತಿ ಇಗಿರುವುದಿಲ್ಲ. ಇದಕ್ಕೆ ಕಾರಣ ಏನು?..