Monday, July 4, 2022

ಕೈತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ನೀರಿಗೆ ಬಿದ್ದು ಮೃತ್ಯು

ಬಾಗಲಕೋಟೆ: ಮಂದಿರದಲ್ಲಿ ಉಪಹಾರ ಮುಗಿಸಿ ಕೈ‌ತೊಳೆಯಲು ಹೋಗಿ ಮಲಪ್ರಭಾ ನದಿಗೆ ಬಿದ್ದು ಒಂದೇ ಕುಟುಂಬದ ‌ಮೂವರು ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಬಳಿ ನಡೆದಿದೆ.


ಮೃತರನ್ನು ವಿಶ್ವನಾಥ್ ಮಾವಿನ ಮರದ (40), ಪತ್ನಿ ಶ್ರಿದೇವಿ ಮಾವಿನಮರದ (32) ಹಾಗೂ ಮಗಳು ನಂದಿನಿ (12) ಎಂದು ಗುರುತಿಸಲಾಗಿದೆ.
ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದ ಕುಟುಂಬ ಶಿವಯೋಗಿ ಮಂದಿರಕ್ಕೆ ತೆರಳಿದ್ದ ವೇಳೆ ಉಪಹಾರ ಮುಗಿಸಿ ಕೈತೊಳೆಯಲು ತೆರಳಿದ್ದರು.

ಈ ವೇಳೆ ಮಗಳು ಬಿದ್ದಿದ್ದು, ಅವಳ ರಕ್ಷಣೆಗೆ ಹೋದ ದಂಪತಿ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ಶ್ರೀದೇವಿ ಅವರ ಶವ ಸಿಕ್ಕಿದ್ದು, ಇನ್ನಿಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ರಾಜ್ಯದಲ್ಲೇ ಮೊದಲ ಬಾರಿಗೆ ಎಡಿಜಿಪಿ ಬಂಧನ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆತಂದಿದ್ದಾರೆ.ಪೊಲೀಸ್ ನೇಮಕಾತಿ...

ಮಂಗಳೂರು: ಬೆಂಗ್ರೆ ವಾರ್ಡಿನ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಕಾಮತ್

ಮಂಗಳೂರು: ಮಹಾನಗರ ಪಾಲಿಕೆಯ ಬೆಂಗ್ರೆ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.ತೋಟ ಬೆಂಗ್ರೆಯ ಪ್ಯಾಸೆಂಜರ್ ಬೋಟ್ ಜೆಟ್ಟಿಯ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ...

ಉಡುಪಿಯ ಸಿನಿ ಶೆಟ್ಟಿಗೆ ಒಲಿದ ‘2022 ನೇ ಮಿಸ್ ಇಂಡಿಯಾ’ ಕಿರೀಟ

ಮುಂಬೈ: 2022ನೇ ಸಾಲಿನ ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಉಡುಪಿಯ ಮೂಲದ ಇನ್ನಂಜೆಯ ನಿವಾಸಿಯಾಗಿರುವ ಸಿನಿ ಶೆಟ್ಟಿಯವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಈ ಕಾರ್ಯಕ್ರಮವು ನಿನ್ನೆ ಸಂಜೆ ಮುಂಬೈನ...