ಉಡುಪಿ: ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಅ.1ರಂದು ಗಂಗೊಳ್ಳಿಯಲ್ಲಿ ನಡೆದ ಗೋಹತ್ಯೆ ವಿರೋಧಿ ಪ್ರತಿಭಟನೆಯಲ್ಲಿ ಪ್ರವಾದಿ
ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪದಡಿ ಮೂವರು ಹಿಂಜಾವೇ ಕಾರ್ಯಕರ್ತರನ್ನು ಗಂಗೊಳ್ಳಿ ಪೊಲೀಸರು ಅ.3ರಂದು ಬಂಧಿಸಿದ್ದಾರೆ.
ಹಿಂಜಾವೇ ಕಾರ್ಯಕರ್ತರಾದ ನವೀನ್, ಅಂಬರೀಶ್ ಹಾಗೂ ಪರ್ವಿಶ್ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅದೇ ರೀತಿ ಈ ಪ್ರತಿಭಟನೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಜನ ಸೇರಿಸಿದ ಆರೋಪದಡಿ ಹಿಂಜಾವೇ ಮುಖಂಡರಾದ ಅಕ್ಷಯ್, ವಿವೇಕ್, ರಾಘವೇಂದ್ರ, ಅಕ್ಷಯ್ ಹಾಗೂ ಮಹೇಶ್ ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.