ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಅಂಗವಾಗಿ ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಬೃಹತ್ ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಕಾರ್ಯಕ್ರಮ ಇಂದಿನಿಂದ ಆ.18ರವರೆಗೆ ನಡೆಯಲಿದೆ.
9 ವಿಭಾಗದಲ್ಲಿ ನಿರಂತರವಾಗಿ ಮೂರು ದಿನ ತಜ್ಞವೈದ್ಯರಿಂದ ಉಚಿತ ತಪಾಸಣೆ ನಡೆಯಲಿದೆ.
ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ, ದಂತರೋಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಕಣ್ಣಿನ ವಿಭಾಗ ಸೇರಿದಂತೆ ಫಿಸಿಯೋಥೆರಪಿ ವಿಭಾಗದಲ್ಲಿ ಉಚಿತ ತಪಾಸಣೆ ನಡೆಯುತ್ತದೆ.
ರಿಯಾಯಿತಿ ದರದಲ್ಲಿ ಪ್ರಯೋಗಾಲಯ, ರಕ್ತಪರೀಕ್ಷೆ, ಕ್ಷಕಿರಣ, ಒಳರೋಗಿ ವಿಭಾಗ, ಸ್ಕ್ಯಾನಿಂಗ್, ಇಸಿಜೆ ಸೆವೆ ಮುಂತಾದ ಸೌಲಭ್ಯಗಳಿಗೆ ರಿಯಾಯಿತಿ ದರ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ 0824-2200022, 6364872121 ನಂಬರ್‌ನ್ನು ಸಂಪರ್ಕಿಸಬಹುದು.