LATEST NEWS
ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ
Published
3 hours agoon
By
NEWS DESK2ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 31 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ.
ಕಳೆದ 31 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, 3,92,58,940 ರೂ. ಕಾಣಿಕೆ ಸಂಗ್ರಹವಾಗಿದೆ. ರಜೆ, ಹಬ್ಬದ ಹಿನ್ನೆಲೆ ಮಂತ್ರಾಲಯ ಮಠಕ್ಕೆ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ.
ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3 ಕೋಟಿ 83 ಲಕ್ಷ 93,760 ರೂ. ಕರೆನ್ಸಿ ನೋಟುಗಳು ಹಾಗೂ 8,65,180 ರೂ. ನಾಣ್ಯಗಳು ಸಂಗ್ರಹವಾಗಿವೆ. ಇನ್ನೂ 174 ಗ್ರಾಂ ಚಿನ್ನ, 1270 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಳೆದ ವರ್ಷ ನವೆಂಬರ್ ತಿಂಗಳ ಕಾಣಿಕೆ ಹುಂಡಿಯಲ್ಲಿ ಒಟ್ಟು 2,86,43,454 ರೂ. ಕಾಣಿಕೆ ಸಂಗ್ರಹವಾಗಿತ್ತು.
ಮಂತ್ರಾಲಯ ಮಠದಲ್ಲಿ ನಿನ್ನೆ (ನ.28) ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಗುರುಪಾದ ಕರಸೇವಕರು ಭಾಗವಹಿಸಿದ್ದರು.
BIG BOSS
BBK11: ಮಹಾರಾಜ ಮಂಜಣ್ಣ, ಯುವರಾಣಿ ಮೋಕ್ಷಿತಾ ದಿಢೀರ್ ಬಂಧನ!
Published
17 minutes agoon
29/11/2024By
NEWS DESK2ಬಿಗ್ಬಾಸ್ ಸಾಮ್ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಆಗಿದೆ. ಮಹಾರಾಜ ಮಂಜಣ್ಣ ಮತ್ತು ಯುವರಾಣಿ ಮೋಕ್ಷಿತಾ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆಟದಲ್ಲಿ ಸ್ವಲ್ಪ ಹಿನ್ನಡೆ ಆಗಿತ್ತು. ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬಿಗ್ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ.
ರಜಮನೆತನದ ಅಣ್ಣ-ತಂಗಿಯಾಗಿ ಮೆರದಾಡುತ್ತಿದ್ದ ಮಂಜಣ್ಣ ಹಾಗೂ ಮೋಕ್ಷಿತಾರನ್ನು ಬಂಧಿಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ. ಇದರಿಂದ ಬಿಗ್ಬಾಸ್ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾಡಿದ್ದೇ ಆಟವಾಗಿದೆ. ಅಲ್ಲದೇ ಬಿಗ್ಬಾಸ್ ರಾಜ, ಯುವರಾಣಿಯನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಟಾಸ್ಕ್ ನೀಡಿದ್ದಾರೆ.
ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಈ ವೇಳೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾರ ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯಗೌಡ ರೊಚ್ಚಿಗೆದ್ದಿದ್ದಾರೆ. ಬಂಧನಕ್ಕೆ ಒಳಗಾಗಿರುವ ದರ್ಬಾರಿಗಳನ್ನು ಪ್ರಜೆಗಳು ಹೇಗೆ ಬಿಡಿಸಿಕೊಂಡು ಬರ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
LATEST NEWS
ವಯನಾಡ್ ನೂತನ ಸಂಸದೆ ಪ್ರಿಯಾಂಕ ಗಾಂಧಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ CM ಸಿದ್ದರಾಮಯ್ಯ.!
Published
46 minutes agoon
29/11/2024By
NEWS DESK2ನವದೆಹಲಿ : ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ವಯನಾಡ್ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದು, ವಯನಾಡ್ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿ, ಸಂಸತ್ತು ಪ್ರವೇಶಿಸಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಇಂದು ದೆಹಲಿಯಲ್ಲಿ ಭೇಟಿಯಾಗಿ, ಭರ್ಜರಿ ಗೆಲುವಿಗೆ ಅಭಿನಂದಿಸಿದೆ. ಸಂಸತ್ತಿನ ಒಳಗೆ ಮತ್ತು ಹೊರಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜನಪರವಾದ ಧ್ವನಿಗೆ ಈ ಗೆಲುವಿನಿಂದ ಬಲ ಬಂದಿದೆ ಎಂದು ತಿಳಿಸಿದ್ದಾರೆ.
LATEST NEWS
ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ..!
Published
2 hours agoon
29/11/2024By
NEWS DESK2ಪುಟ್ಟ ಕಂದಮ್ಮಗಳ ಫೋಟೊ ನೋಡಿದಾಗ ಎತ್ತಿ ಮುದ್ದಾಡಬೇಕು ಅನ್ನಿಸುತ್ತೆ. ಇತ್ತೀಚೆಗೆ ನವಜಾತ ಶಿಶುಗಳ ಫೋಟೊಶೂಟ್ ಸಾಮಾನ್ಯವಾಗಿದೆ. ಆದರೆ ಪುಟ್ಟ ಮಕ್ಕಳ ಫೋಟೊಶೂಟ್ ಮಾಡಿಸುವುದರಿಂದ ಆ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ನವಜಾತ ಶಿಶುಗಳ ಫೋಟೊಶೂಟ್‌ನಿಂದ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೋಟೊಶೂಟ್‌ನಿಂದ ಮಗುವಿನ ಬೆನ್ನುಹುರಿ, ಕೀಲುಗಳು, ನರ ಮತ್ತು ರಕ್ತ ಪರಿಚಲನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳುತ್ತದೆ.
ಪೊಟ್ಯಾಟೊ ಸ್ಯಾಕ್ ಪೋಸ್:
ಈ ಪೋಸ್ ನಲ್ಲಿ ಮಗು ಮುದ್ದಾಗಿ ಕಾಣಿಸುತ್ತದೆ. ಈ ಪೋಸ್‌ಗೆ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೈಯನ್ನು ಗಲ್ಲದ ಕೆಳಗೆ ಬರುವಂತೆ ಇರಿಸಲಾಗುತ್ತದೆ. ಇದು ಪೋಸ್‌ನಲ್ಲಿ ಮಗು ಅಂದವಾಗಿ ಕಂಡರೂ ಇದರಿಂದ ಮಗುವಿನ ರಕ್ತ ಪರಿಚಲನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಮಗು ತೊಂದರೆ ಅನುಭವಿಸುತ್ತದೆ
ಹ್ಯಾಂಗಿಂಗ್ ಪೋಸ್:
ನೇತಾಡುವ ಭಂಗಿಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸುವುದು ಈಗಿನ ಟ್ರೆಂಡ್. ಇದರಿಂದ ಮಗುವಿನ ಫೋಟೊ ಚೆನ್ನಾಗಿ ಬರಬಹುದು, ಆದರೆ ಬೀಳುವ ಸಾಧ್ಯತೆ ಹೆಚ್ಚು. ಹಲವು ಬಾರಿ ಮಗುವನ್ನು ನೇತುಹಾಕಲು ಬಳಸುವ ಬಟ್ಟೆ ತುಂಬಾ ಹಗುರವಾಗಿರುತ್ತದೆ. ಹಾಗಾಗಿ ಬಟ್ಟೆಯ ಮೇಲೆ ಕಟ್ಟಲಾದ ಗಂಟು ಬಿಚ್ಚಿದರೆ ಅಥವಾ ಮಗು ತನ್ನ ಸ್ಥಾನವನ್ನು ಬದಲಾಯಿಸಿದರೆ ಕೆಳಗೆ ಬೀಳುವ ಸಾಧ್ಯತೆ ಇದೆ. ಇದರಿಂದ ಮಗುವಿಗೆ ಗಂಭೀರ ಅಪಾಯಗಳು ಆಗಬಹುದು.
ಬಕೆಟ್ ಪೋಸ್:
ಇದು ಮಗುವನ್ನು ಬಕೆಟ್ ಒಳಗೆ ಕೂರಿಸಿ ಫೋಟೊ ತೆಗೆಯುವುದು. ಮಗು ಬಕೆಟ್‌ನಲ್ಲಿ ನಿಲ್ಲುವಂತೆ ಮಾಡಿ ಮಗುವಿನ ಬಾಯಿಯನ್ನು ಬಕೆಟ್‌ನ ಅಂಚಿನ ಮೇಲೆ ಇರಿಸಲಾಗುತ್ತದೆ. ಈ ಭಂಗಿಯು ಮಗುವಿನ ಕೀಲುಗಳಿಗೆ ಹಾನಿ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.
ಸಿಬ್ಲಿಂಗ್ ಪೋಸ್:
ಇದು ಹೆಸರೇ ಹೇಳುವಂತೆ ಮಗುವಿನ ಅಣ್ಣ, ಅಕ್ಕನ ಜೊತೆ ಫೋಟೊ ತೆಗೆಸುವುದು. ಹಲವರು ಬಾರಿ ತಮ್ಮ ಎರಡನೇ ಮಗುವಿನ ಫೋಟೊಶೂಟ್ ಮಾಡಿಸುವಾಗ ಪೋಷಕರು ಮೊದಲ ಮಗುವಿನ ಕೈಯಲ್ಲಿ ಪುಟ್ಟ ಮಗುವನ್ನು ಕೊಡುತ್ತಾರೆ. ಮಕ್ಕಳ ಮನಸ್ಸು ಚಂಚಲ ಮತ್ತು ಅವರಿಗೆ ಮಗುವನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಆಗ ಅವರು ಮಗುವನ್ನು ಕೆಳಕ್ಕೆ ಬೀಳಿಸಿಬಿಡಬಹುದು. ಇದರಿಂದ ಮಗುವಿಗೆ ಗಾಯವಾಗುವ ಹಾಗೂ ಗಂಭೀರ ಅಪಾಯ ಆಗುವ ಸಾಧ್ಯತೆ ಇದೆ.
LATEST NEWS
ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ
ಬೆಂಗಳೂರಿನಲ್ಲಿ ನಡೆಯಲಿದೆ ಡಬ್ಲ್ಯುಪಿಎಲ್ ಮಿನಿ ಹರಾಜು
ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ
ಅಕ್ರಮ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ; 6 ಮಂದಿ ಅರೆಸ್ಟ್
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು: ಆರೋಗ್ಯ ಸಚಿವರ ರಾಜೀನಾಮೆಗೆ ಆರ್.ಅಶೋಕ್ ಒತ್ತಾಯ
ಮಂಗಳೂರು : ದಿ.ಉಮೇಶ್ ಕಾಜಿಲ ಸವಿನೆನಪಿಗಾಗಿ ಡಿ.1 ರಂದು ಬೃಹತ್ ರಕ್ತದಾನ ಶಿಬಿರ
Trending
- Baindooru7 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL21 hours ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ