Friday, August 19, 2022

ಸುರತ್ಕಲ್‌: ಮೂರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಮಂಗಳೂರು: ತನ್ನ ಮೂರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ನಾಪತ್ತೆಯಾದ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಾಪತ್ತೆಯಾದವರನ್ನು ಝೀನತ್ (34), ಮಕಕ್ಕಳಾದ ಮೊಯಿದ್ದೀನ್ ಅಬ್ದುಲ್ ಸಮದ್ (11), ನೆಬಿಸಾ ಸಫ್ನಾಝ್ (10), ಮಹಮ್ಮದ್ ತೆಹರಾಝ್ (7) ಎಂದು ಗುರುತಿಸಲಾಗಿದೆ.
ಕಾಟಿಪಳ್ಳದ ಕೃಷ್ಣಪುರದಲ್ಲಿ ವಾಸವಾಗಿದ್ದ ಹಾಗೂ ಝೀನತ್ ತನ್ನ ಮೂರು ಮಕ್ಕಳೊಂದಿಗೆ ಮಾ.31 ರಿಂದ ಕಾಣೆಯಾಗಿರುವ ಬಗ್ಗೆ ಝೀನತ್ ಪತಿ ಯು.ಕೆ ಸಲೀಂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಾಪತ್ತೆಯಾದವರ ವಿವರ ಇಂತಿದೆ
ಝೀನತ್: 5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿರುತ್ತಾರೆ. ಹಿಂದಿ, ಬ್ಯಾರಿ, ಕನ್ನಡ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಗುಲಾಬಿ ಬಣ್ಣದ ಚೂಡಿದಾರ್ ಟಾಪ್, ಬಿಳಿ ಬಣ್ಣದ ಪ್ಯಾಂಟ್, ವೇಲ್ ಹಾಗೂ ಬುರ್ಖಾ ಧರಿಸಿರುತ್ತಾರೆ.
ಮೊಯಿದ್ದೀನ್ ಅಬ್ದುಲ್ ಸಮದ್: 4.2 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿರುತ್ತಾರೆ. ಹಿಂದಿ, ಬ್ಯಾರಿ, ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ, ಗುಲಾಬಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ನೆಬೀಸಾ ಸಫ್ನಾಝ್: 3.2 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿರುತ್ತಾರೆ. ಬ್ಯಾರಿ, ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ, ಬೂದು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮಹಮ್ಮದ್ ತೆಹನಾಝ್: 3 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿರುತ್ತಾರೆ. ಬ್ಯಾರಿ ಭಾಷೆ ಮಾತನಾಡುತ್ತಾಳೆ, ನೀಲಿ ಕಪ್ಪು ಬಣ್ಣದ ಶರ್ಟ್, ಕಪ್ಪು ಬಣ್ಣದ ಶರ್ಟ್ ಧರಿಸಿರುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಸುರತ್ಕಲ್ ಪೊಲೀಸ್ ಠಾಣೆ ದೂ.ಸಂಖ್ಯೆ: 0824-2220540, 9480805360, ಮಂಗಳೂರು ಕಂಟ್ರೋಲ್ ರೂಮ್ ಸಂಖ್ಯೆ:0824-2220800 ಸಂಪರ್ಕಿಸುವಂತೆ ಸುರತ್ಕಲ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಸುರತ್ಕಲ್‌ನಲ್ಲಿ ಕತ್ತಿ ಬೀಸಿ ಹುಚ್ಚಾಟ: ಓರ್ವನ ಬಂಧನ

ಮಂಗಳೂರು: ದಾರಿ ಮಧ್ಯೆ ಕತ್ತಿ ಬೀಸಿ ಹುಚ್ಚಾಟ ನಡೆಸಿದ ಜಾರ್ಖಾಂಡ್‌ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕಾನದಲ್ಲಿ ನಡೆದಿದೆ.ಅತಲ್ ಕುಲ್ಲು (30) ಬಂಧಿತ...

“ಹಿಂದೂಗಳು ಸತ್ರೆ BJPಗೆ ಓಟು ಬರುತ್ತದೆ-ಅಲ್ಪಸಂಖ್ಯಾತರು ಸತ್ತರೆ ಓಟ್ ಸಿಗಲ್ಲ”

ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ....

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ...