ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3 ಬಾಂಗ್ಲಾ ಪ್ರಜೆಗಳಿಗೆ ಜ್ವರ, ಕೊರೊನಾ ಶಂಕೆ
ಮಂಗಳೂರು: ಕರಾವಳಿಯಾದ್ಯಂತ ಕೊರೊನಾ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಮಂಗಳೂರಿನಿಂದ ಮುಂಬೈಗೆ ಹೊರಟ ಮೂವರು ಬಾಂಗ್ಲಾದೇಶ ಪ್ರಜೆಗಳಲ್ಲಿ ಜ್ವರದ ಲಕ್ಷಣ ಪತ್ತೆಯಾಗಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದಲ್ಲಿ
ಮುಂಬೈಗೆ ಹೋಗಲು ಸಿದ್ದವಾಗಿದ್ದ ಮೂವರನ್ನು ಸಿಐಎಸ್ ಎಫ್ ಸಿಬ್ಬಂದಿ ಮತ್ತು ವೈದ್ಯರ ತಪಾಸಣೆ ಮಾಡುವ ವೇಳೆ ಈ ವಿಚಾರ ಪತ್ತೆಯಾಗಿದೆ.
ಇದೀಗ ಜ್ವರದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ.
ಹೀಗಾಗಿ ಮೂವರು ಬಾಂಗ್ಲಾ ಪ್ರಜೆಗಳು ಮಂಗಳೂರು ಏರ್ ಪೋರ್ಟ್ ನಲ್ಲೇ ಉಳಿದಿದ್ದಾರೆ.
ಕೊರೋನಾ ಶಂಕೆ ಹಿನ್ನೆಲೆಯಲ್ಲಿ ಹಾಗೂ ಇತರೆ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರಯಾಣಕ್ಕೆ ಅವಕಾಶ ನಿರಾಕರಿಸಿದ್ದಾರೆ.
ಇತ್ತ ಈ ಮೂವರು ಜ್ವರದ ಲಕ್ಷಣ ಇರುವವರು ಏರ್ ಪೋರ್ಟ್ ನಲ್ಲೇ ಇದ್ದರೂ ಕೂಡ ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.