Connect with us

    DAKSHINA KANNADA

    ಮಂಗಳೂರು: 26ನೇ ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌ ಪಂದ್ಯಾಟಕ್ಕೆ ಚಾಲನೆ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೊಸಿಯೇಶನ್ ವತಿಯಿಂದ 26ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟಕ್ಕೆ ನಗರದ ಫುಟ್ಬಾಲ್ ಮೈದಾನದಲ್ಲಿ ಚಾಲನೆ ದೊರಕಿದೆ.

    ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು  ಮಾತನಾಡಿ, ಅವರು ಕಳೆದ 26 ವರುಷಗಳಿಂದ ನಿರಂತರವಾಗಿ ಕ್ರೀಡಾಕೂಟವನ್ನು ನಡೆಸುತ್ತಾ ಬರಲಾಗುತ್ತಿದೆ. ವಿಶೇಷವಾಗಿ ಫುಟ್ಬಾಲ್ ಕ್ರೀಡಾಕೂಟವನ್ನು ಉಳಿಸುವ ನಿಟ್ಟಿನಲ್ಲಿ ಅಸ್ಲಾಂ ಅವರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆಯಿಂದ ಕ್ರೀಡಾಕೂಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗುವುದು ಎಂದರು.

    ಅಸೋಸಿಯೇಶನ್‌ನ ಚೇರ್ಮಾನ್ ಡಿ.ಎಂ ಅಸ್ಲಾಮ್ ಮಾತನಾಡಿ, ಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ನಡೆಯುವಂತಹ ಈ ಪಂದ್ಯಾವಳಿಯು ಸುಮಾರು 25 ದಿನಗಳ ಕಾಲ ನೆಹರು ಮೈದಾನದ ನಡೆಯಲಿದ್ದು,ಈಗಾಗಲೇ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಂದ  120ಕ್ಕೂ ಅಧಿಕ ತಂಡಗಳು ನೊಂದಾಯಿಸಿದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಸಿಟಿಯಿಂದ ಈ ಮೈದಾನವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಲಿದೆ ಎಂದು ತಿಳಿಸಿದರು.

    ಈ ವೇಳೆ  ಮಾಜಿ ಮೇಯರ್ ದಿವಾಕರ್, ಕಾರ್ಪೋರೇಟರ್ ಅಬ್ದುಲ್ ಲತೀಫ್ ,  ಫುಟ್ಬಾಲ್ ಮಾಜಿ ಕ್ರೀಡಾಪಟು ಮನ್ಸೂರ್ ಅಝಾದ್, ಕ್ರೀಡಾ ಇಲಾಖೆ ಅಧಿಕಾರಿ ಪ್ರದೀಪ್ ಡಿಸೋಜಾ ,ಉದ್ಯಮಿ ಅಬ್ದುಲ್ ಮೋನು ಕತ್ತಾರ್,  ನೋಬರ್ಟ್ ಸಲ್ಡಾನ್, ರಾಜ್ಯ ಪುಟ್ಬಾಲ್ ಸಂಸ್ಥೆಯ ಸದಸ್ಯರಾದ ವಿಜಯ್ ಸುವರ್ಣ, ಯೂನಿಯನ್ ಬ್ಯಾಂಕ್ ಅಧಿಕಾರಿ ಸುದೇಶ್, ಕಾಂಗ್ರೆಸ್ ಮುಖಂಡ ಸಂಶುದ್ದೀನ್, ಪ್ರಧಾನ ಕಾರ್ಯದರ್ಶಿ ಹುಸೈನ್ ಬೋಳಾರ್, ಅಬ್ದುಲ್ ಲತೀಫ್ ಬೆಂಗ್ರೆ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಬಿ.ಥೋಮಸ್, ಸದಸ್ಯರಾದ ಲತೀಫ್, ಆರೀಫ್, ಅಶ್ಫಕ್ ಮತ್ತಿತರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ; ಓರ್ವ ಸಾ*ವು

    Published

    on

    ಮಂಗಳೂರು/ಆನೇಕಲ್ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ ಹೊಡೆದು, ಸವಾರ ಸ್ಥಳದಲ್ಲಿಯೇ ಮೃ*ತಪಟ್ಟಿರುವ ಘಟನೆ ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಸಮೀಪದ ಸೂಳಗಿರಿ ಬಳಿ ನಡೆದಿದೆ. ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ನಿವಾಸಿ ಅರ್ಚಕ ಶ್ರೀನಿವಾಸ್ ಮೃ*ತ‌ ದುರ್ದೈವಿ.

    ದೇವಾಲಯದ ಅರ್ಚಕರಾಗಿದ್ದ ಶ್ರೀನಿವಾಸ್, ಪೂಜೆಯ ನಿಮಿತ್ತ ಬೈಕ್‌ ಮೂಲಕ ಆನೇಕಲ್‌ನಿಂದ ಹೋಗುತ್ತಿದ್ದರು. ಈ ವೇಳೆ ತಮಿಳುನಾಡಿನ ಲಾರಿಯೊಂದರ ಬ್ರೇಕ್ ಫೇಲ್ ಆಗಿ ಹೆದ್ದಾರಿಯಿಂದ ಡಿವೈಡರ್ ದಾಟಿಕೊಂಡು ಬಂದು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಶ್ರೀನಿವಾಸ್ ಅವರ ವಾಹನಕ್ಕೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲಿಯೇ ಮೃ*ತಪಟ್ಟರೆ, ರಾಘವೇಂದ್ರ ಎಂಬುವವರಿಗೆ ಗಂಭೀರ ಗಾ*ಯವಾಗಿದೆ.

    ಇದನ್ನೂ ಓದಿ : ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು

    ಅಪಘಾ*ತದ ರಭಸಕ್ಕೆ ಬೈಕ್‌ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    Continue Reading

    DAKSHINA KANNADA

    ಬಿಜೆಪಿ ಹೈಕಮಾಂಡಿಂದ ಭರ್ಜರಿ ಗಿಫ್ಟ್ ; ನಳೀನ್ ಕುಮಾರ್ ಕಟೀಲ್ ಸುತ್ತಾಟ ಮತ್ತೆ ಆರಂಭ !

    Published

    on

    ಮಂಗಳೂರು: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ದ.ಕ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಎಂಪಿ ಚುನಾವಣೆಯಲ್ಲಿ ಟಿಕೆಟ್ ಸಿಗದೆ ವಂಚಿತರಾದ ಬಳಿಕ ಅಷ್ಟಾಗಿ ರಾಜಕೀಯ ವಿಚಾರದಲ್ಲಿ ಪ್ರಚಲಿತದಲ್ಲಿರಲಿಲ್ಲ. ಆದರೆ ಇದಿಗ ಕಟೀಲ್ ಮತ್ತೆ ಸುದ್ದಿಯಲ್ಲಿದ್ದಾರೆ.


    ನಳೀನ್ ಕುಮಾರ್‌ಗೆ ಗುಡ್ ನ್ಯೂಸ್;
    ಬಿಜೆಪಿಯು ನಳೀನ್ ಕುಮಾರ್ ಕಟೀಲ್ ಅವರನ್ನು ಒಡಿಶಾ ರಾಜ್ಯದ ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಯಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಅಂದಹಾಗೆ ಒಡಿಶಾದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸದಸ್ಯತ್ವದ ಗುರಿಯನ್ನು ನೀಡಿದ್ದು, ಕೇಂದ್ರ ನಾಯಕತ್ವ ನಳಿನ್ ಕುಮಾ‌ರ್ ಕಟೀಲ್‌ಗೆ ಈ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
    ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಸೆ.17ರಂದು ಒಡಿಶಾಗೆ ತೆರಳಲಿದ್ದು, ಅಲ್ಲಿ ಒಂದು ವಾರ ಕಾಲ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

     

    Continue Reading

    DAKSHINA KANNADA

    ಮಂಗಳೂರಿನ ಕಾಟಿಪಳ್ಳದಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ

    Published

    on

    ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಕಾಟಿಪಳ್ಳ 3ನೆ ಬ್ಲಾಕ್‌ ನಲ್ಲಿರುವ ಬದ್ರಿಯಾ ಜುಮಾ ಮಸೀದಿಗೆ ದು*ಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಭಾನುವಾರ(ಸೆ.15) ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿದೆ.

    ಎರಡು ಬೈಕ್‌ ಗಳಲ್ಲಿ ಬಂದ ನಾಲ್ಕು ಮಂದಿ ದು*ಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮಸೀದಿಯ ಕಿಟಕಿಗಳಿಗೆ ಹಾನಿಯಾಗಿದೆ.

    ಸುರತ್ಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮಸೀದಿಯ ಸಿಸಿಟಿವಿ ಸೇರಿದಂತೆ ಸಮೀಪದ ಸಿಸಿಟಿವಿ ಫೂಟೇಜ್‌ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇಂದು(ಸೆ.16) ಈದ್ ಮಿಲಾದ್  ಹಬ್ಬ. ಹಾಗಾಗಿ ಸುರತ್ಕಲ್ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    Continue Reading

    LATEST NEWS

    Trending