Connect with us

LATEST NEWS

26/11ರ ಮುಂಬೈ ದಾ*ಳಿ : ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ

Published

on

ಮಂಗಳೂರು/ವಾಷಿಂಗ್ಟನ್ : 26/11ರ ಮುಂಬೈ ದಾ*ಳಿಯ ಅಪರಾಧಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ. 2008ರ ಮುಂಬೈ ಅಟ್ಯಾಕ್ ಪ್ರಕರಣದಲ್ಲಿ ತಹವ್ವುರ್ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಬಹಳ ದಿನಗಳಿಂದ ಒತ್ತಾಯಿಸುತ್ತಿತ್ತು.

ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ರಾಣಾ ಕಾನೂನು ಸಮರ ನಡೆಸುತ್ತಿದ್ದ. ಕೆಳನ್ಯಾಯಾಲಯದಲ್ಲಿ ಹಿನ್ನಡೆಯಾದ ಕಾರಣ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಆದರೆ, ಈಗ ಆತನಿಗೆ ಸೋಲಾಗಿದೆ.

ಪಾಕ್ – ಅಮೆರಿಕ ಭ*ಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಸಹಚರ ಎಂದು ರಾಣಾ ಗುರುತಿಸಿಕೊಂಡಿದ್ದ.  ನವೆಂಬರ್ 26, 2008ರಂದು ನಡೆದಿದ್ದ ಮುಂಬೈ ದಾ*ಳಿಯ ಪ್ರಮುಖ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ. ಈ ದಾ*ಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿ 166 ಮಂದಿ ಪ್ರಾ*ಣ ಕಳೆದುಕೊಂಡಿದ್ದರು.  10 ಪಾಕಿಸ್ತಾನಿ ಭ*ಯೋತ್ಪಾದಕರು ಮುಂಬೈನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಿದ್ದರು.

ಇದನ್ನೂ ಓದಿ : ಉಡುಪಿ ನಗರದಲ್ಲಿ ಬೆಚ್ಚಿ ಬೀಳಿಸುವ ಘಟನೆ; ಐದು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ

64 ವರ್ಷದ ರಾಣಾ ಸದ್ಯ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್‌ನಲ್ಲಿ ಬಂಧಿಯಾಗಿದ್ದಾನೆ. ಆತನನ್ನು 2009ರಲ್ಲಿ ಚಿಕಾಗೋದಲ್ಲಿ ಬಂಧಿಸಲಾಗಿತ್ತು.

DAKSHINA KANNADA

ದೈವದ ಮುನಿಸೇ ಈ ಗ್ರಾಮದಲ್ಲಿ ಜನರ ಸರಣಿ ಸಾವಿಗೆ ಕಾರಣವಾಯಿತಾ ?

Published

on

ಮಂಗಳೂರು : ದೈವದ ಶಾಪದಿಂದಾಗಿ ಸಾಲು ಸಾಲು ಅಕಾಲಿಕ ಸಾವು ಸಂಭವಿಸುತ್ತಿದೆ ಎಂದು ದೈವ ದೇವರುಗಳ ನಂಬಿಕೆಗೆ ಹೆಸರಾದ ದಕ್ಷಿಣಕನ್ನಡ ಜಿಲ್ಲೆಯ ಕುಂಪಲ ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿದೆ.

ಸುಮಾರು 50ಕ್ಕೂ ಹೆಚ್ಚು ಮಂದಿ 2019ರಿಂದ ವಯಸಲ್ಲದ ವಯಸ್ಸಿಗೆ ಅಪಮೃತ್ಯು ಹೊಂದಿದ್ದು, ಹೆಚ್ಚಿನ ಮಂದಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅಪಘಾತ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿ ನೇಣಿಗೆ ಕೊರಳೊಡ್ಡಿದ್ದರೆ, ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ದುರಂತ ಸಂಭವನೆಗೆ ಮೂಲ ಕಾರಣ ಏನು ?

ಸರಣಿ ಸಾವಿನಿಂದ ಭಯಭೀತರಾಗಿದ್ದ ಊರಿನ ಮಂದಿ ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯನ್ನಿಟ್ಟಿದ್ದು, ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂಬ ಸುಳಿವು ಸಿಕ್ಕಿತು. ಇದರ ಜೊತೆ ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾ ಮೃತ್ಯುಂಜಯ ಯಾಗ ನಡೆಸಬೇಕೆಂದು ಸೂಚನೆ ನೀಡಿದ್ದು, ಈ ಸಾವು ನೋವು ತಡೆಯಲು ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.

ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇರುವ ಬಗ್ಗೆ ಕುಂಪಲ ಗ್ರಾಮಸ್ಥರಿಗೆ ಸುಳಿವು ಸಿಕ್ಕಿತ್ತು. ಆದರೆ ಅದು ಪಾಳು ಬಿದ್ದು ದೈವಕ್ಕೆ ಕಾಲಾದಿಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿರುವ ಬಗ್ಗೆ ಗೋಚರವಾಗಿದೆ. ಮೃತ್ಯು ಭಯವನ್ನು ಶಮನಗೊಳಿಸಲು ಮಹಾ ಮೃತ್ಯುಂಜಯ ಯಾಗ ಮಾಡಲಾಗುತ್ತದೆ. ಇದೀಗ ಕುಂಪಲ ಗ್ರಾಮದಲ್ಲಿಯು ಈ ಯಾಗ ನಡೆಸಲಾಗಿದ್ದು ಸಕರಾತ್ಮಕ ವಾತಾವರಣ ಸೃಷ್ಟಿಯಾಗಿದೆ ಎಂದು ಅಲ್ಲಿನವರು ಹೇಳುತ್ತಾರೆ. ಮುಂದಿನ ದಿನಗಳಲ್ಲಾದರೂ ಕುಂಪಲ ಗ್ರಾಮದಲ್ಲಿ ದುರ್ಘಟನೆಗಳು ನಿವಾರಣೆಯಾಗಿ ಮನೆ ಮನೆಯಲ್ಲಿ ನೆಮ್ಮದಿ ನೆಲೆಯೂರುವುದೋ ಎಂಬುವುದನ್ನು ನಿರೀಕ್ಷಿಸಬೇಕಷ್ಟೇ.

Continue Reading

LATEST NEWS

ಕೋಟೆಕಾರು ಬ್ಯಾಂಕ್‌ ದರೋಡೆ ಕೇಸ್; ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಕಮಿಷನರ್ 

Published

on

ಮಂಗಳೂರು: ಮಂಗಳೂರು ಪೊಲೀಸರು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ನಲ್ಲಿ ನಡೆದ ದರೋಡೆ ಕೇಸ್‌ ಅನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದರೋಡೆ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸಂಚಲನ ರೂಪಿಸಿತ್ತು. ಸುಮಾರು 14 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಬೇಧಿಸಿದ ಪೊಲೀಸರ ಸಾಹಸ ಮೆಚ್ಚುವಂತದ್ದಾಗಿದೆ. ಈ ದರೋಡೆಯನ್ನು ಮಾಡಲು 6 ತಿಂಗಳಿನಿಂದ ದರೋಡೆಕೋರರು ಪ್ಲಾನ್ ಮಾಡಿದ್ದರು.

ದರೋಡೆ ಮಾಡಿದ ಮುರುಗಂಡಿ ಥೇವರ್ ಹಾಗೂ ಯೊಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಪರಾರಿಯಾಗಿದ್ದರು. ಈ ತಂಡ ತಮಿಳುನಾಡಿಗೆ ಪರಾರಿಯಾಗಲು ಯೋಚಿಸಿದ್ದರೆ, ಉಳಿದ 4 ಆರೋಪಿಗಳು ಮಂಗಳೂರು ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಮೂವರು ಆಟೋ ಮೂಲಕ ಹಾಗೂ ಒಬ್ಬ ಬಸ್ಸಿನಲ್ಲಿ ಪ್ರಯಾಣಿಸಿ ಎಸ್ಕೇಪ್ ಆಗಿದ್ದಾರೆ. ಬ್ಯಾಂಕಿನಿಂದ ದರೋಡೆ ಮಾಡಿದ ಚಿನ್ನವನ್ನು ಮುಂಬೈನ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು.

ಸಹಕಾರಿ ಬ್ಯಾಂಕಿನಿಂದ 2,265 ಬಳೆ, ಓಲೆ, ಸರ ಸೇರಿ ಇತರೆ ಚಿನ್ನಾಭರಣಗಳನ್ನು ದೋಚಿದ್ದರು. ಪೊಲೀಸರು ತನಿಖೆಯನ್ನು ಮಾಡುವ ವೇಳೆ ಚಿನ್ನದ ರಾಶಿಯನ್ನು ಕಂಡು ದಂಗಾಗಿದ್ದಾರೆ. ದರೋಡೆಕೋರರು 4 ಬ್ಯಾಗ್​ನಲ್ಲಿ 14 ಕೋಟಿ ಮೌಲ್ಯದ 18.314 ಕೆ.ಜಿಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿರುವ ಫಿಯಟ್ ಕಾರು, 2 ಮಚ್ಚುಗಳು, 2 ಪಿಸ್ತೂಲು, 3 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರಿಂದ 3.80 ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.

ಜ.17 ರಂದು ಈ ಘಟನೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ ಮುಂಬೈಯ ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ದೊಂಬಿವಲಿ ವೆಸ್ಟ್‌ನ ಯೊಸುವಾ ರಾಜೇಂದ್ರನ್ (35), ಕಣ್ಣನ್ ಮಣಿ, ಷಣ್ಣುಗ ಸುಂದರಂ ಎಂಬುವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿದ್ದಾರೆ.

Continue Reading

LATEST NEWS

ಉಡುಪಿ : ಪ್ರತಿಷ್ಠಿತ ವಸತಿ ಶಾಲೆಗೆ ಬಾಂ*ಬ್ ಬೆ*ದರಿಕೆ ಇಮೇಲ್

Published

on

ಉಡುಪಿ : ಉಡುಪಿಯ ಪ್ರತಿಷ್ಠಿತ ಶಾಲೆಗೆ ಇಂದು(ಜ.27) ಬಾಂ*ಬ್ ಬೆ*ದರಿಕೆ ಇಮೇಲ್ ಬಂದಿದೆ.  ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಗೆ ಇಮೇಲ್ ಮೂಲಕ ಬೆದ*ರಿಕೆ ಹಾಕಲಾಗಿದೆ. ದೇಶದ ನಕ್ಸಲ್ ಚಟುವಟಿಕೆ ಹಾಗೂ ಭ*ಯೋತ್ಪಾದಕ ವಿಚಾರಗಳನ್ನು ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.  ಅಫ್ಜಲ್ ಗುರು ಗಲ್ಲು ಸೇರಿದಂತೆ ಅನೇಕ ವಿಚಾರಗಳನ್ನು ಹಾಗೂ  ತಮಿಳುನಾಡಿನ ಅಣ್ಣ ವಿವಿಯ ಪ್ರೊಫೆಸರ್ ಚಿತ್ರಕಲಾ ಗೋಪಾಲನ್ ಘಟನೆ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಇದು ನಮ್ಮ ಕೊನೆಯ ಕಾರ್ಯಾಚರಣೆ.. ಟ್ವಿನ್ ಡ್ ಪೈಪ್ IED ಬ್ಲಾಸ್ಟ್ ಮಾಡುತ್ತೇವೆ. ಈ ಬ್ಲಾಸ್ಟ್ ಮೂಲಕ ನಾವು ಸ್ವರ್ಗ ಪಡೆಯುತ್ತೇವೆ. ಈ ಕಾರ್ಯಾಚರಣೆಯ ನಂತರ ಹಿಂದೂ ಹೆಸರುಗಳು ಅಳಿಯಲಿವೆ ಎಂದು ಮೇಲ್‌ನಲ್ಲಿ ಬರೆಯಲಾಗಿದೆ. ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ತಕ್ಷಣ ಶಾಲೆಯ ಆಡಳಿತ ಮಂಡಳಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  ಶಾಲೆಯಲ್ಲಿ ಬೀಡು ಬಿಟ್ಟಿರುವ ಉಡುಪಿ ಜಿಲ್ಲಾ ಪೊಲೀಸರು, ಶ್ವಾನದಳ ಬಳಸಿಕೊಂಡು ಶಾಲೆಯಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

Trending

Exit mobile version