Connect with us

LATEST NEWS

ಮಹಿಳೆಯರು ಸೇರಿ 100ಕ್ಕೂ ಹೆಚ್ಚು ಪುರುಷರಿಂದ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ..!

Published

on

ಮಹಿಳೆಯರು ಸೇರಿ 100ಕ್ಕೂ ಹೆಚ್ಚು ಪುರುಷರಿಂದ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ..!

ಹೈದರಾಬಾದ್ : ಮಹಿಳೆಯರು ಸೇರಿದಂತೆ 139 ಮಂದಿ ನನ್ನ ಮೇಲೆ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು 25 ವರ್ಷದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿರುವ ಘಟನೆ ಹೈದಾರಬಾದ್ ನಲ್ಲಿ ನಡೆದಿದೆ.


ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿರುವವರ ಪೈಕಿ ಹಲವರು ಮಹಿಳೆಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಗುಟ್ಟ ಪೊಲೀಸ್‌ ಠಾಣೆಯಲ್ಲಿ ಗುರುವಾರ ಈ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರು, ವೈದ್ಯರು, ಚಿನ್ನಾಭರಣ ಮಾರಾಟಗಾರರು, ಪತ್ರಕರ್ತರು, ಸಿನಿಮಾ ಕ್ಷೇತ್ರದವರು, ಕುಟುಂಬಸ್ಥರ ಹೆಸರುಗಳು ಇವೆ. ಇದರಲ್ಲಿ ಕೆಲವರು ಬೆಂಗಳೂರು ಮತ್ತು ಅಮೆರಿಕದಲ್ಲಿ ಇರುವುದಾಗಿ ಹೇಳಲಾಗಿದೆ.

ಸಂತ್ರಸ್ತ ಮಹಿಳೆ 2009ರಲ್ಲಿ ವಿವಾಹವಾಗಿದ್ದರು. ನಂತರ ಗಂಡನ ಮನೆಯವರಿಂದ ಲೈಂಗಿಕ ದೌರ್ಜನ್ಯ, ಹಿಂಸೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ 2010ರಲ್ಲಿ ಗಂಡನಿಗೆ ವಿಚ್ಛೇದನ ನೀಡಿದ್ದಳು. ಬಳಿಕೆ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಆರಂಭಿಸಿದ್ದಳು.


ಆದರೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾತ್ರ ನಿಲ್ಲಲಿಲ್ಲ. ನನ್ನ ಮೇಲೆ ಮಹಿಳೆಯರು ಸಹ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇನ್ನು ಹಲವರು ಅತ್ಯಾಚಾರ ನಡೆಸಿ ವಿಡಿಯೋ ಮಾಡಿಕೊಂಡು ನನ್ನನ್ನು ಹೆದರಿಸಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಎಫ್ಐಆರ್ ನಿಂದ ತಿಳಿದುಬಂದಿದೆ.

ಮಹಿಳೆಯ ದೂರಿನನ್ವಯ ಪೊಲೀಸರು ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LATEST NEWS

15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

Published

on

ಉಡುಪಿ : ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ ಪೊಲೀಸ್‌ ವಾರಂಟ್‌ ಪಡೆದು, ಕಳೆದ 15 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಉಡುಪಿ ಜಿಲ್ಲೆಯ ಬಡಗಬೆಟ್ಟು ಮಂಚಿ ಕುಮೇರಿ ನಿವಾಸಿ, ಬಾಲಾಜಿ ಎಂ. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2016 ರಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಈತ ಬಂಧಿತನಾಗಿ ಜಾಮೀನಿನಲ್ಲಿ ಹೊರ ಬಂದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು.

ಆರೋಪಿ ಬಾಲಾಜಿ ಬೆಂಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಜನವರಿ 24 ರಂದು ಬೆಳಗ್ಗೆ ಬೆಂಗಳೂರಿನ ಹರಳೂರು ಬಸ್ಸು ನಿಲ್ದಾಣ ಬಳಿ ಸಂಚರಿಸುತ್ತಿದ್ದಾಗ ವಶಕ್ಕೆ ಪಡೆದು ಬಂಧಿಸಿದರು.

ಇದನ್ನೂ ಓದಿ: ಮುಡಿಪು ಸಂತ ಜೋಸೆಫ್ ವಾಝ್ ಚರ್ಚ್‌ನಲ್ಲಿ ಕಳ್ಳತನ

ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ, ಪಿಎಸ್ಐ ಗಳಾದ ಅನಿಲ್ ಕುಮಾರ್ ಮತ್ತು ಅಕ್ಷಯ ಕುಮಾರಿ, ಹೆಡ್‌ ಕಾನ್ಸ್ ಟೆಬಲ್‌ ಥಾಮ್ಸನ್, ಕಾನ್‌ ಸ್ಟೆಬಲ್‌ ರವಿರಾಜ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

 

Continue Reading

LATEST NEWS

ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತಾಯ್ನಾಡಿಗೆ ಬಂದಿಳಿದ ಶಿವಣ್ಣ

Published

on

ಬೆಂಗಳೂರು: ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಇಂದು ವಾಪಸ್ಸಾಗಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಆಪ್ತರು ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ಎಲ್ಲರೆಡೆ ಮುಗುಳ್ನಗುತ್ತಾ ಕೈಬೀಸಿದ ಶಿವಣ್ಣ, ತಮ್ಮ ಸ್ವಾಗತಕ್ಕೆ ಆಗಮಿಸಿದವರನ್ನು ತಬ್ಬಿ ಸಂತಸ ಪಟ್ಟರು.

ವಿಮಾನ ನಿಲ್ದಾಣದ ಬಳಿಯ ಟೋಲ್​ ಗೇಟ್​ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ. ಸ್ವಾಗತ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ಮಾನ್ಯತಾ ಟೆಕ್ ಪಾರ್ನ್​ನ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ.

Continue Reading

DAKSHINA KANNADA

ಮುಡಿಪು ಸಂತ ಜೋಸೆಫ್ ವಾಝ್ ಚರ್ಚ್‌ನಲ್ಲಿ ಕಳ್ಳತನ

Published

on

ಉಳ್ಳಾಲ : ಮುಡಿಪುವಿನಲ್ಲಿರುವ ಸಂತ ಜೋಸೆಫ್‌ ವಾಝ್ ಚರ್ಚ್ ನಲ್ಲಿ ಜನವರಿ 24 ರಂದು ರಾತ್ರಿ ಕಳ್ಳತನ ನಡೆದಿದೆ.  ಚರ್ಚ್ ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳ  ಪರಮಪ್ರಸಾದ ಇರಿಸುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ ವಸ್ತುಗಳನ್ನು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳವುಗೈದು ಪರಾರಿಯಾಗಿದ್ದು, ಈ ಕಳ್ಳತನದ  ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.‌

ತಲೆಗೆ ಬಟ್ಟೆ ಕಟ್ಟಿರುವ ಆತ ಮುಖಕ್ಕೆ ಮಾಸ್ಕ್ ಕೂಡ‌ ಧರಿಸಿದ್ದ.  ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದ‌ ಕೂಡಲೇ ಚರ್ಚ್ ನ ಪದಾಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸಿಸಿಟಿವಿಯ ಫೂಟೇಜ್ ಆಧಾರದಲ್ಲಿ ಕಳ್ಳನ ಬಂಧನಕ್ಕೆ ಬಲೆ‌ ಬೀಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending

Exit mobile version