ಪ್ರೇಮ ವಿಚಾರ ಶಂಕೆ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿಯ ಚಿತ್ರಾವತಿ ಡ್ಯಾಂ ಬಳಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.
ಯುವಕನ ಮುಖ ಮೂತಿ ಅಂತ ನೋಡದೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಯುವಕ ಸರಿ ಸುಮಾರು 22 ರಿಂದ 25 ವರ್ಷದ ಪ್ರಾಯದವನಾಗಿದ್ದು, ಯುವಕನ ಗುರುತು ಪತ್ತೆಯಾಗಿಲ್ಲ.
ಯುವಕನ ಕೈ ಮೇಲೆ ಗುರುಪ್ರೀತ್ ಎಂದು ಟ್ಯಾಟೂ ಗುರುತು ಕಂಡುಬಂದಿದೆ.
ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರೇಮ ವಿಚಾರದಲ್ಲಿ ಯುವಕನ ಕೊಲೆ ನಡೆದಿರಬಹುದು ಎಂದು ಅನುಮಾನಗಳು ವ್ಯಕ್ತವಾಗಿದೆ.
ಸದ್ಯ ಮೃತ ಯುವಕನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಯುವಕನ ಗುರುತು ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಎಲ್ಲೋ ಕೊಲೆ ಮಾಡಿ ತದನಂತರ ಕಾರಿನಲ್ಲಿ ತಂದು ಮೃತದೇಹ ಎಸೆದಿರಬಹುದು ಎಂದು ಕೂಡ ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಪ್ರಭಾರ ಎಸ್ಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.