ಮಂಗಳೂರಿನಲ್ಲಿ 2 ಲಕ್ಷ ಮೌಲ್ಯದ 24 ಕೆಜಿ ಗಾಂಜಾ ವಶ: ಇಬ್ಬರ ಬಂಧನ ..!
ಮಂಗಳೂರು: ನಗರ ಪೊಲೀಸರು ಹಲವು ದಿನಗಳ ವಿರಾಮದ ಬಳಿಕ ಡ್ರಗ್ ಮಾಫಿಯಾದ ಹಿಂದೆ ಬಿದ್ದಿದ್ದು, ನಗರದಲ್ಲಿ ದಾಳಿ ನಡೆಸಿ ಭಾರಿ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ.ನಗರದ ಆಡು ಮರೋಳಿ ದೇವಳದ ಬಳಿ ಮಹಾರಾಷ್ಟ್ರ ನೋಂದಣೆಯ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 24 ಕೆ. ಜಿ. ಗಾಂಜಾ ಸಿಕ್ಕಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಕಾಸರಗೋಡು ಮೂಲದವರಾಗಿದ್ದು, ಇಬ್ರಾಹಿಂ ಮಡನ್ನೂರು ಹಾಗೂ ಅಬ್ದುಲ್ ನಿಜಾದ್ ಎಂದು ಗುರುತ್ತಿಸಲಾಗಿದೆ.
ಆರೋಪಿಗಳಿಂದ ವಶಕ್ಕೆ ಪಡೆದ ಗಾಂಜಾದ ಮೌಲ್ಯ 2 ಲಕ್ಷ ರೂ ಎಂದು ಅಂದಾಜಿಸಲಾಗಿದ್ದು ಕಾರು, ಮೂರು ಮೊಬೈಲ್ ಹಾಗೂ 13 ಸಾವಿರ ನಗದು ಸೇರಿ ಒಟ್ಟು 5. 73 ಲಕ್ಷದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.