Saturday, May 21, 2022

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಮುಂಬೈ: ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನಟಿ ಮಾಜಿ ಸಂಸದ ಸತ್ರುಘ್ನ ಸಿನಾಃ ರ ಪುತ್ರಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕಾಗಿ ಸೋನಾಕ್ಷಿಯನ್ನು ಮೊರಾದಾಬಾದ್‍ಗೆ ಬರುವಂತೆ ಕೇಳಲಾಗಿತ್ತು.

ಅದಕ್ಕಾಗಿ 37 ಲಕ್ಷ ರೂ. ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಆದರೆ ಅವರು ಗೈರು ಹಾಜರಾಗಿದ್ದರಿಂದ ಇದೀಗ ನ್ಯಾಯಾಲಯ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.

ಏನಿದು ಘಟನೆ :  ಈವೆಂಟ್ ಆಯೋಜಕರಾದ ಪ್ರಮೋದ್ ಶರ್ಮಾ ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು.

ಆದ್ರೆ ನಟಿ ಈವೆಂಟ್‍ನಲ್ಲಿ  ಸೋನಾಕ್ಷಿ ಭಾಗವಹಿಸಲಿಲ್ಲ.

ಆಗ ಈವೆಂಟ್ ಆಯೋಜಕರು ಹಣವನ್ನು ಮರುಪಾವತಿ ಮಾಡುವಂತೆ ಹೇಳಿದ್ದಾರೆ. ಈವೆಂಟ್ ಆಯೋಜಕರಿಗೆ ಹಣ ನೀಡಲು ಸೋನಾಕ್ಷಿ ಮ್ಯಾನೇಜರ್ ನಿರಾಕರಿಸಿದ್ದರು ಎನ್ನಲಾಗಿದೆ.

ಸೋನಾಕ್ಷಿ ಸಿನ್ಹಾ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಹಣ ಸಿಗದಿದ್ದಾಗ ವಂಚನೆ ಪ್ರಕರಣ ದಾಖಲಾಗಿತ್ತು. ಗೈರುಹಾಜರಾಗಿದ್ದರಿಂದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯ ಇದೀಗ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: SVS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಎಸ್‌.ವಿ.ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ...

ಹೈಕೋರ್ಟ್‌ನಲ್ಲಿ ನಮಾಝ್‌ ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಿದ ‘ಮಾಧ್ಯಮ’ದ ವಿರುದ್ಧ FIR

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕೊಠಡಿ ಒಳಗೆ ಮಹಿಳೆಯರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಕೋರ್ಟ್‌ ಆವರಣದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್ ದೂರು ದಾಖಲಿಸಿದ್ದಾರೆ.ಹೈಕೋರ್ಟ್ ನ ಉಸ್ತುವಾರಿ ರಿಜಿಸ್ಟ್ರಾರ್...

‘ಹರೀಶ್‌ ಪೂಂಜಾ ಕಚೇರಿಗೆ ಚೀಲದಲ್ಲಿ ಹಣ ತರ್ತಾರೆ’: ಶಾಸಕನಿಗೆ ಸಂಕಷ್ಟ ತಂದ ಕಾರ್ಯಕರ್ತನ ಹೇಳಿಕೆ

ಬೆಳ್ತಂಗಡಿ: ಶಾಸಕ ಹರೀಶ್‌ ಪೂಂಜಾ ಅವರನ್ನು ಹೊಗಳುವ ಭರದಲ್ಲಿ ಕಾರ್ಯಕರ್ತನೊಬ್ಬ ಶಾಸಕರು ಕಚೇರಿಗೆ ಚೀಲದಲ್ಲಿ ಹಣ ತೆಗೆದುಕೊಂಡು ಬರುತ್ತಾರೆಂದು ಹೇಳಿಕೆ ನೀಡಿದ್ದು ಪೂಂಜಾರನ್ನು ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ತನಿಖೆ ನಡೆಸಲು ಸಾಮಾಜಿಕ...