Connect with us

BANTWAL

ಬಂಟ್ವಾಳದಲ್ಲಿ ನಡೆದ 2016ರ ಅಪಘಾತ ಪ್ರಕರಣ-ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

Published

on

ಬಂಟ್ವಾಳ: ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಲಾರಿ ಚಾಲಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೆಲ್ಕಾರ್ ಟ್ರಾಫಿಕ್ ಎಸ್‌.ಐ.ಮೂರ್ತಿ ಅವರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


2016 ರಲ್ಲಿ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ನಡೆದಿತ್ತು. ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿದ್ದ.

ಈ ಘಟನೆಗೆ ಸಂಬಂಧಿಸಿದಂತೆ ಲಾರಿ ಜಿಲ್ಲೆಯ ಕೇರಳ ಜಿಲ್ಲೆಯ ಕಾಸರಗೋಡು ಜಿಲ್ಲೆಯ ಮುಳಿಯಾರು, ನೆಲ್ಲಿಕಾರು ನಿವಾಸಿ ನಜಾರ್ ಎನ್.ಎ. ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಅ ಬಳಿಕ ಲಾರಿ ಚಾಲಕ ಕಳೆದ ಐದು ವರ್ಷಗಳಿಂದ ವಿದೇಶದಲ್ಲಿದ್ದು, ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.


ಈ ಕಾರಣಕ್ಕಾಗಿ ನ್ಯಾಯಾಲಯ ಈತನ ಮೇಲೆ ದಸ್ತಗಿರಿ ವಾರೆಂಟ್ ಜಾರಿ ಮಾಡಿತ್ತು. ಆದರೆ ಈತ ವಿದೇಶದಿಂದ ಬಂದಿದ್ದು, ಡಿಸೆಂಬರ್ 5 ರಂದು ಬಿಸಿರೋಡು ಕಡೆಗೆ ಬರುತ್ತಿದ್ದ ಬಗ್ಗೆ ಎಸ್.ಐ.ಮೂರ್ತಿ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಆರೋಪಿ ನಜಾರ್ ಬಿಸಿರೋಡಿನ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎ.ಎಸ್.ಐ.ಜನಾರ್ದನ, ಹಾಗೂ ಹೆಚ್‌. ಸಿ.ದೇವದಾಸ್ ಆರೋಪಿ ಬಂಧನಕ್ಕೆ ಸಹಕರಿಸಿದ್ದರು.

 

BANTWAL

BANTWAL: ಬಸ್ – ಕಾರು ನಡುವೆ ಅಪಘಾತ; ಕಾರು ಚಾಲಕ ಗಂ*ಭೀರ

Published

on

ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬಲೆನೋ ಕಾರಿನ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕನನ್ನು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಮುಂಜಾನೆ ಈ ಅಪಘಾತ ನಡೆದಿದೆ.

ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ ಹಾಗೂ ಬೆಳ್ತಂಗಡಿಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದರೆ, ಬಸ್‌ನ ಮುಂಬಾಗ ಜಖಂಗೊಂಡಿದೆ.

ತಕ್ಷಣ ಸ್ಥಳೀಯರ ನೆರವಿನಿಂದ ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ಹೊರ ತೆಗೆದು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

BANTWAL

WATCH VIDEO : ಬಂಟ್ವಾಳದಲ್ಲಿ ಧರ್ಮಗುರುವಿನ ಪೈಶಾಚಿಕ ಕೃತ್ಯ; ಅಸಹಾಯಕ ವೃದ್ಧ ದಂಪತಿಗೆ ಹಿಗ್ಗಾಮುಗ್ಗ ಥಳಿತ

Published

on

ಬಂಟ್ವಾಳ : ಕ್ರೈಸ್ತ ದಂಪತಿ ಮೇಲೆ ಧರ್ಮಗುರುವೊಬ್ಬರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಟ್ಲ ಸಮೀಪದ ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ 79 ವರ್ಷ ಪ್ರಾಯದ ಗ್ರೆಗರಿ ಮೊಂತೇರೋ ಹಾಗೂ ಅವರ ಪತ್ನಿ ಮೇಲೆ ಮನೆಲಾ ಚರ್ಚ್‌ನ ಪ್ರಧಾನ ಧರ್ಮ ಗುರು ನೆಲ್ಸನ್‌ ಒಲಿವೆರಾ ಅವರು ಹಲ್ಲೆ ಮಾಡಿದ್ದಾರೆ.

ಫಾದರ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಫೆ.29 ರ ಮುಂಜಾನೆ ಈ ಘಟನೆ ನಡೆದಿದೆ. ಮನೆ ಶುದ್ಧ ಭೇಟಿ ನಿಮಿತ್ತ ವೃದ್ಧ ದಂಪತಿಗಳ ಮನೆಗೆ ಬಂದಿದ್ದ ಫಾದರ್ ಒಲಿವೆರಾ ಗೇಟ್‌ ಬಳಿಯಲ್ಲೇ ಗ್ರೆಗರಿ ಮೊಂತೆರೋ ಅವರಿಗೆ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ಕುತ್ತಿಗೆ ಹಿಡಿದು ಎಳೆದಾಡಿದ್ದು, ಕೋಲಿನಿಂದಲೂ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಗ್ರೆಗರಿ ಮೊಂತೆರಾ ಅವರ ಪತ್ನಿ ಪ್ರತಿರೋಧ ತೋರಿಸಿದ್ರೂ ಫಾದರ್ ಜೊತೆಗಿದ್ದ ವ್ಯಕ್ತಿ ವೃದ್ಧೆಯನ್ನು ಅಡ್ಡ ಗಟ್ಟಿದ್ದಾನೆ.

ಆದರೆ, ಫಾದರ್ ಅವರಿಗೂ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಫಾಧರ್ ಆಗಿದ್ದು ವಯೋ ವೃದ್ಧರಿಗೆ ಗೌರವ ಕೊಡಲು ಗೊತ್ತಿಲ್ಲದ ಇಂತಹ ನೀಚನ ವಿರುದ್ಧ ಕ್ರಮ ಕೈಗೊಳ್ಳಿ ಅಂತ ವೃದ್ಧ ದಂಪತಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಫಾದರ್‌ ಪರ ಹಲವರು ವಿಟ್ಲ ಠಾಣೆ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Continue Reading

BANTWAL

ಬಾಲವಿಕಾಸದಲ್ಲಿ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Published

on

ವಿಟ್ಲ: ಪೆರಾಜೆ, ಮಾಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮಾಣಿ ಸ್ಥಳೀಯ ಸಂಸ್ಥೆ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವರ ಸಹಭಾಗಿತ್ವದಲ್ಲಿ ಫೆ. 28 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪೆರಾಜೆ, ಮಾಣಿ ಇಲ್ಲಿ 2023-24 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕ ಹಾಗೂ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಪ್ರಹ್ಲಾದ್ ಶೆಟ್ಟಿ ಜೆ  ಪರೀಕ್ಷಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವಿದ್ದಾಗ ಮುಂದಿನ ದಿನಗಳಲ್ಲಿ ಸದೃಢ ದೇಶ ಕಟ್ಟಬಲ್ಲರು ಎಂದು ಹೇಳಿ ಪರೀಕ್ಷಾ ಶಿಬಿರಕ್ಕೆ ಶುಭ ಹಾರೈಸಿದರು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ ಸ್ವಾಗತಿಸಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಬ್ ವಿಭಾಗದ ಶಿಬಿರ ನಾಯಕಿ ಯಮುನಾ,ಬುಲ್ ಬುಲ್ ವಿಭಾಗದ ಶಿಬಿರ ನಾಯಕಿ ಯಶೋಧ ಕೆ (HWB) ರವರು ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಸಹಾಯಕರಾಗಿ ಕಬ್ ಮಾಸ್ಟರ್ ಮತ್ತು ಫ್ಲಾಕ್ ಲೀಡರ್ ಗಳಾದ ಕಾಂತಪ್ಪ, ಸುಮಾ, ಅಮಿತಾ ಎಸ್, ಪ್ರಮೀಳಾ, ಕುರ್ಶಿದ, ಯೋಗಿನಿ, ಚಿತ್ರ ಕೆ, ವೀಣಾ, ಶೀಲಾವತಿ, ಪ್ರಮೀಳಾ ಕ್ರಾಸ್ತಾ, ಸೌಮ್ಯ ಹಾಗೂ ಸ್ಕೌಟ್ ಮತ್ತು ಗೈಡ್ ಶಿಕ್ಷಕಿ ಸಪ್ನ, ಅನಿತಾ ಗೌರಿ, ಲೀಲಾರವರು ಸಹಕರಿಸಿದರು. ಕಬ್ ವಿಭಾಗದಲ್ಲಿ 77 ವಿದ್ಯಾರ್ಥಿಗಳು ಹಾಗೂ ಬುಲ್ ಬುಲ್ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಾಗಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸಹಕರಿಸಿದರು. ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು.

Continue Reading

LATEST NEWS

Trending