ದೇಶದಲ್ಲಿ ಸುಶಿಕ್ಷಿತ ರಾಜ್ಯವೆಂದೇ ಪರಿಗಣಿಸಲ್ಪಡುವ ಕೇರಳದಲ್ಲಿ ಭಯಾನಕ ವಿಚಾರವೊಂದು ಹೊರಬಿದ್ದಿದೆ. ಇಬ್ಬರು ಮಹಿಳೆಯರನ್ನು ‘ನರಬಲಿ’ ಹೆಸರಿನಲ್ಲಿ ಕೊಲ್ಲಲ್ಪಟ್ಟ ಹೇಯ ಕೃತ್ಯ ವರದಿಯಾಗಿದೆ.
ಕೇರಳ: ದೇಶದಲ್ಲಿ ಸುಶಿಕ್ಷಿತ ರಾಜ್ಯವೆಂದೇ ಪರಿಗಣಿಸಲ್ಪಡುವ ಕೇರಳದಲ್ಲಿ ಭಯಾನಕ ವಿಚಾರವೊಂದು ಹೊರಬಿದ್ದಿದೆ. ಇಬ್ಬರು ಮಹಿಳೆಯರನ್ನು ‘ನರಬಲಿ’ ಹೆಸರಿನಲ್ಲಿ ಕೊಲ್ಲಲ್ಪಟ್ಟ ಹೇಯ ಕೃತ್ಯ ವರದಿಯಾಗಿದೆ.
ಪದ್ಮ ಮತ್ತು ರೋಸ್ಲಿನ್ ಹತ್ಯೆಗೊಳಗಾದ ಮಹಿಳೆಯರು.
ಹತ್ಯೆಗೊಳಗಾದವರು
ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್ ಹಂತಕರೆಂದು ತಿಳಿದುಬಂದಿದೆ.
ಹಂತಕ ದಂಪತಿ
ಹಣದ ಲಾಭಕ್ಕಾಗಿ ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ.
ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಆಕೆಯನ್ನು ತಿರುವಲ್ಲಾದ ಆ ದಂಪತಿ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದ್ದು, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ನರ ಬಲಿ ನೀಡಿರುವ ಬಗ್ಗೆ ದಂಪತಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.