Connect with us

    LATEST NEWS

    ಉಡುಪಿ: ಸೆಲ್ಫಿ ತೆಗೆಯಲು ಹೋಗಿ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    Published

    on

    ಉಡುಪಿ: ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಬ್ಬರು ಸೆಲ್ಫಿ ತೆಗೆಯಲು ಹೋಗಿ ಮಲ್ಪೆ ಬೀಚ್‌ನ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಸಮುದ್ರಪಾಲಾದ ಘಟನೆ ಇಂದು ನಡೆದಿದೆ.


    ಬಾಗಲಕೋಟೆ ಮೂಲದ ಸತೀಶ್‌ ಎಸ್‌ ಕಲ್ಯಾಣ್‌ ಶೆಟ್ಟಿ (21) ಮತ್ತು ಹಾವೇರಿಯ ಸತೀಶ್‌ ಎಂ ನಂದಿಹಳ್ಳಿ (21) ನೀರು ಪಾಲಾದ ಯುವಕರು.
    ಘಟನೆ ವಿವರ
    ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನಿಂದ ಸೈಂಟ್‌ ಮೆರೀಸ್‌ ಐಲ್ಯಾಂಡ್‌ಗೆ ಪ್ರವಾಸಕ್ಕೆ 68 ವಿದ್ಯಾರ್ಥಿಗಳು ಬಂದಿದ್ದರು. ನೀರಿನಲ್ಲಿ ಆಟವಾಡುತ್ತಾ ಮುಂದೆ ಮುಂದೆ ತೆರಳಿ ಸೆಲ್ಫಿ ತೆಗೆಯುತ್ತಿದ್ದಾಗ ಸ್ಥಳದಲ್ಲೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಮೀರಿ ಸೆಲ್ಫಿ ತೆಗೆಯಲು ಹೋದ ಯುವಕರು ನೀರುಪಾಲಾಗಿದ್ದಾರೆ. ಇಬ್ಬರಲ್ಲಿ ಓರ್ವನ ಶವ ಪತ್ತೆಯಾಗಿದೆ. ಮತ್ತೊಬ್ಬನ ಶವ ಪತ್ತೆಯಾಗಿಲ್ಲ.

    ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಅಪಘಾತ ವಲಯ ಎಂದು ಬೋರ್ಡ್ ಹಾಕಿದ್ದರೂ ಹೆಚ್ಚಿನ ಪ್ರವಾಸಿಗರು ಅದನ್ನು ಲೆಕ್ಕಿಸದೆ ನೀರಿಗಿಳಿಯುತ್ತಿದ್ದಾರೆ ಎಂದು ಲೈಫ್‌ಗಾರ್ಡ್‌ಗಳು ಆರೋಪಿಸಿದ್ದಾರೆ.

    ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸ್ಥಳಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇದು ಒಂದೇ ತಿಂಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು

    Published

    on

    ಮುಂಬೈ: ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಸಜ್ಜಾಗುತ್ತಿದ್ದು, ಎಲ್ಲರ ಕಣ್ಣು ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಈಗಾಗಲೇ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿರುವ ಅನುಭವಿ ಬ್ಯಾಟರ್ ಇದೀಗ ಟೆಸ್ಟ್ ಮತ್ತು ಏಕದಿನ ಸಾಂಪ್ರದಾಯಿಕ ಮಾದರಿಯಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ.

    ಅವರ ವೃತ್ತಿಜೀವನವು ಮಹತ್ವದ ಮೈಲಿಗಲ್ಲು ಸಮೀಪಿಸುತ್ತಿರುವಾಗ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ ಅವರ ಪೌರಾಣಿಕ ದಾಖಲೆಯನ್ನು ಮೀರಿಸಲು ಕೊಹ್ಲಿ ಕೇವಲ 58 ರನ್‌ಗಳ ಅಂತರದಲ್ಲಿ ನಿಂತಿದ್ದಾರೆ.

    ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27,000 ರನ್ ಗಳಿಸಿದ ಕ್ರಿಕೆಟಿಗನಾಗಲು ಕೊಹ್ಲಿಗೆ ಕೇವಲ 58 ರನ್‌ಗಳ ಅಗತ್ಯವಿದೆ. ಪ್ರಸ್ತುತ, ಸಚಿನ್ ತೆಂಡೂಲ್ಕರ್ ಎಲ್ಲಾ ಸ್ವರೂಪಗಳಲ್ಲಿ 623 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ದಾಖಲೆಯನ್ನು ಹೊಂದಿದ್ದಾರೆ. 226 ಟೆಸ್ಟ್ ಇನ್ನಿಂಗ್ಸ್, 396 ODI ಇನ್ನಿಂಗ್ಸ್, ಮತ್ತು 1 T20I ಇನ್ನಿಂಗ್ಸ್. 591 ಇನ್ನಿಂಗ್ಸ್‌ಗಳಲ್ಲಿ 26,942 ರನ್ ಗಳಿಸಿರುವ ಕೊಹ್ಲಿ, 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಹಿಮ್ಮೆಟ್ಟಿಸಲು ಸಜ್ಜಾದಂತಿದೆ.

    ಕೊಹ್ಲಿ 600ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪುವ ನಿರೀಕ್ಷೆಯು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.

    Continue Reading

    LATEST NEWS

    ತಂದೆಯ ಪ್ರತೀಕಾರ ತೀರಿಸಲು ಸಜ್ಜಾದ ಉಗ್ರ ಹಮ್ಜಾ ಬಿನ್ ಲಾಡೆನ್..!

    Published

    on

    ಮಂಗಳೂರು/ನವದೆಹಲಿ : 9/11 ಅಮೆರಿಕಾ ಟ್ವಿನ್‌ ಟವರ್ ಮೇಲೆ ವೈಮಾನಿಕ ದಾಳಿಯ ಮಾಸ್ಟರ್‌ ಮೈಂಡ್‌ ಒಸಾಮಾ ಬಿನ್‌ ಲಾಡೆನ್ ಪುತ್ರ ಹಮ್ಜಾ ಬಿನ್‌ ಲಾಡೆನ್ ಜೀವಂತವಾಗಿದ್ದಾನೆ. ಆತ ಭ*ಯೋತ್ಪಾದಕ ಗುಂಪನ್ನು ಸಕ್ರಿಯವಾಗಿ ಮುನ್ನಡೆಸ್ತಾ ಇದ್ದಾನೆ ಎಂಬ ಗುಪ್ತಚರ ವರದಿ ಲಭ್ಯವಾಗಿದೆ.

    2019 ರಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್‌ ಪುತ್ರ ಹಮ್ಜಾ ಬಿನ್ ಲಾಡೆನ್‌ ಸದ್ಯ ತಾಲಿಬಾನ್ ನಾಯಕರ ಸಂಪರ್ಕದಲ್ಲಿ ಇದ್ದಾನೆ ಎಂಬ ಮಾಹಿತಿ ಕೂಡ ಇದೆ. ಅಲ್‌ ಖೈದಾ ಸಂಘಟನೆಯನ್ನು ಮತ್ತೆ ಪುನರ್‌ಸ್ಥಾಪಿಸಲು ಹಮ್ಜಾ ಬಿನ್ ಲಾಡೆನ್‌ ಪ್ರಯತ್ನ ನಡೆಸಿದ್ದಾನೆ ಎಂದು ಗುಪ್ತಚರ ವರದಿ ಹೇಳಿದೆ.

    ತಾಲಿಬಾನ್ ನಾಯಕರ ಜೊತೆ ಸಭೆಗಳನ್ನು ನಡೆಸುತ್ತಿರುವ ಹಮ್ಜಾ ಬಿನ್ ಲಾಡೆನ್‌ನನ್ನು ತಾಲಿಬಾನ್ ರಕ್ಷಣೆ ಮಾಡುತ್ತಿದ್ದು, ಇದು ಅಲ್‌ ಖೈದಾ ಮತ್ತು ತಾಲಿಬಾನ್ ನಡುವಿನ ಈ ಸಂಬಂಧ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಇರಾಕ್ ಯುದ್ಧದ ನಂತರ ಅಲ್‌ ಖೈದಾ ಸಂಘಟನೆಯನ್ನು ಅತ್ಯಂತ ಪ್ರಬಲವಾಗಿ ಕಟ್ಟಲಾಗುತ್ತಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

    34 ವರ್ಷದ ಹಮ್ಜಾ ಕಾಬೂಲ್‌ನಿಂದ ಪೂರ್ವಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜಲಾಲಾಬಾದ್‌ನಲ್ಲಿ ನೆಲೆಸಿದ್ದಾನೆ. ಅವನ ಗುರಿ ಪಾಶ್ಚಿಮಾತ್ಯ ದೇಶಗಳಾಗಿದ್ದು, ಭವಿಷ್ಯದಲ್ಲಿ ಈ ದೇಶಗಳ ಮೇಲೆ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಆತನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಕೂಡ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾನೆ.

    ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹಮ್ಜಾ ಮತ್ತು ಅವನ ನಾಲ್ವರು ಪತ್ನಿಯರು ಇರಾನ್‌ನಲ್ಲಿ ಆಶ್ರಯ ಪಡೆದಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಹಮ್ಜಾ ಬಿನ್ ಲಾಡೆನ್ ಯಾರು?

    ಹಮ್ಜಾ ಬಿನ್‌ ಲಾಡೆನ್‌ ಜಿಹಾದ್‌ನ ರಾಜಕುಮಾರ ಎಂದು ಕು*ಖ್ಯಾತಿಯನ್ನು ಪಡೆದುಕೊಂಡ ಉ*ಗ್ರನಾಗಿದ್ದಾನೆ. ಒಸಾಮಾ ಬಿನ್‌ ಲಾಡೆನ್‌ ನ 20 ಮಕ್ಕಳಲ್ಲಿ ಈತ 15ನೇಯವನು . ಒಸಾಮಾ ಬಿನ್ ಲಾಡೆನ್‌ನ ಮೂರನೇ ಹೆಂಡತಿಯಲ್ಲಿ ಈತ ಜನಿಸಿದ್ದಾನೆ. 9/11 ರ ದಾಳಿಯ ಮೊದಲು ಅಫ್ಘಾನಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್‌ ಜೊತೆ ಹಾಜರಿದ್ದ ಈತ ವಿಡಿಯೋ ಸಂದೇಶದಲ್ಲೂ ತಂದೆಯ ಜೊತೆ ಕಾಣಿಸಿಕೊಂಡಿದ್ದ.

    ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಯುವಕ

    ದಾ*ಳಿಯಲ್ಲಿ ಹ*ತನಾಗಿದ್ದಾನೆ ಎಂದು ಟ್ರಂಪ್ ಘೋಷಣೆ :

    2019 ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮ್ಜಾ ಬಿನ್ ಲಾಡೆನ್ ಹತನಾಗಿದ್ದಾನೆ ಎಂದು ಘೋಷಣೆ ಮಾಡಿದ್ದರು. ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ನಡೆದ ಭ*ಯೋತ್ಪಾನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹಮ್ಜಾನನ್ನು ಕೊ*ಲ್ಲಲಾಗಿದೆ ಎನ್ನಲಾಗಿತ್ತು. ಆದ್ರೆ, ಆತನ ಮ*ರಣವನ್ನು ದೃಢೀಕರಿಸಲು ಡಿಎನ್‌ಎ ಸಾಕ್ಷ್ಯಗಳು ಲಭಿಸಿರಲಿಲ್ಲ.

    Continue Reading

    LATEST NEWS

    ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ‘ಎಪಿವೈ ರಾಷ್ಟ್ರೀಯ ಪ್ರಶಸ್ತಿ’ ಮತ್ತು ಅಪೆಕ್ಸ್ ಬ್ಯಾಂಕ್‌ನ ಪ್ರಥಮ ಪ್ರಶಸ್ತಿ ಪ್ರದಾನ

    Published

    on

    ಮಂಗಳೂರು: ಸಹಕಾರಿ ಬ್ಯಾಂಕಿಂಗ್ ರಂಗದಲ್ಲಿ 110 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ ಜನಸಾಮಾನ್ಯರ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್‌ ಸಿಡಿಸಿಸಿ ಬ್ಯಾಂಕ್‌)ಗೆ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ (ಎಪಿವೈ ಪ್ರಶಸ್ತಿ) ಹಾಗೂ ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರುನಲ್ಲಿ ಪ್ರದಾನ ಮಾಡಲಾಯಿತು.

    ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿಯನ್ನು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬೆಳ್ಳಿಪ್ರಕಾಶ್ ಅವರಿಂದ ಎಸ್‌ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್ ರಾಜೇಂದ್ರಕುಮಾರ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಅವರು ಸ್ವೀಕರಿಸಿದರು.

    ಎಪಿವೈ ರಾಷ್ಟ್ರೀಯ ಪ್ರಶಸ್ತಿ : ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್ ಸಿಡಿಸಿಸಿ ಬ್ಯಾಂಕ್ 2019ರ ಜನವರಿ -11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು , ಬ್ಯಾಂಕಿನ ಪ್ರತಿ ಶಾಖೆಗಳಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತಂದು ಚಂದಾದಾರರನ್ನು ನೊಂದಾಯಿಸುವ ಗುರಿಯನ್ನು ನೀಡಲಾಗಿತ್ತು. ಅದರಂತೆ ಈ ಯೋಜನೆಯಲ್ಲಿ ಬ್ಯಾಂಕ್ ಗಣನೀಯ ಪ್ರಗತಿ ಸಾಧಿಸಿದ್ದು ಮಾತ್ರವಲ್ಲ ಇದುವರೆಗೆ ಒಟ್ಟು10717 ಚಂದಾದಾರರ ನೋಂದಣಿಯೊಂದಿಗೆ ದಾಖಲೆ ನಿರ್ಮಿಸಿ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಖ್ಯಾತಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿ ಇದೀಗ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.

    ಅಪೆಕ್ಸ್ ಪ್ರಶಸ್ತಿ : ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿ ಆಧುನಿಕ ಬ್ಯಾಂಕಿಂಗ್ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿರುವ ಎಸ್‌ ಸಿಡಿಸಿಸಿ ಬ್ಯಾಂಕ್ 2022-23ನೇ ಸಾಲಿನಲ್ಲಿ ಸರ್ವಾಂಗೀಣ ಪ್ರಗತಿಯೊಂದಿಗೆ ಗುರುತಿಸಿಕೊಂಡು ಲೆಕ್ಕ ಪರಿಶೋಧನೆಯಲ್ಲಿ ‘ಎ’ ವರ್ಗವನ್ನು ಪಡೆದು ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಎಸ್‌ ಸಿಡಿಸಿಸಿ ಬ್ಯಾಂಕ್ 22ನೇ ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

    113 ಶಾಖೆಗಳಲ್ಲಿ ವಿನೂತನ ಬ್ಯಾಂಕಿಂಗ್ ಸೇವೆ : ಎಸ್‌ ಸಿಡಿಸಿಸಿ ಬ್ಯಾಂಕಿನ 113 ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡು ಕೋರ್ ಬ್ಯಾಂಕಿಂಗ್‌ನಂತಹ ಹೊಸತನದ ಬ್ಯಾಂಕಿಂಗ್ ಸೇವೆಯನ್ನು ತನ್ನ ಗ್ರಾಹಕರಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಶಾಖೆಗಳ ಮೂಲಕ ನೀಡುತ್ತಿದೆ. ಮಾತ್ರವಲ್ಲ ಉಡುಪಿ ಹಾಗೂ ಮಂಗಳೂರಿನಲ್ಲಿ ಮೊಬೈಲ್ ಬ್ಯಾಂಕಿಂಗ್ ನಂತಹ ವಿನೂತನ ಬ್ಯಾಂಕಿಂಗ್ ಸೇವೆಯನ್ನು ರಾಜ್ಯ ಮಟ್ಟದಲ್ಲೇ ಪರಿಚಯಿಸಿದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಮನ್ನಣೆಗೂ ಎಸ್‌ ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿರುತ್ತದೆ.

    ಶುಕ್ರವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರು ಹಾಗೂ ಸಚಿವರಾದ ಶಿವಾನಂದ ಎಸ್. ಪಾಟೀಲ್, ನಿರ್ದೇಶಕರುಗಳಾದ ಸಿದ್ದಪ್ಪ ಕಲ್ಲಪ್ಪ ಸವದಿ, ಶರಣೇಗೌಡ ಬಯ್ಯಾಪುರ್, ಟಿ. ಎಂ. ಚಂದ್ರಶೇಖರಯ್ಯ, ಆರ್. ಎಂ. ಮಂಜುನಾಥ್ ಗೌಡ, ಅಮರಾವತಿ ಸಿ ಅಶ್ವಥ್, ಶಿವಾನಂದ ಅಪ್ಪ ಸಾಹೇಬ್ ಮನಕರ್, ಕೊಡಂದೇರ ಪಿ. ಗಣಪತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ. ಎನ್. ದೇವರಾಜ್, ಎಸ್ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಮೊದಲಾದವರು ಉಪಸ್ಥಿತರಿದ್ದರು.

    Continue Reading

    LATEST NEWS

    Trending