ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ನಿವೃತ್ತಿ ಹೊಂದಿದ ಇಬ್ಬರಿಗೆ ಮಂಗಳೂರಿನ ತನ್ನ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ ಶುಭಕೋರಿದರು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಸಿ. ಎಚ್. ನಾರಾಯಣ ಹಾಗೂ ಸುಳ್ಯ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ಚಾಮಯ್ಯ. ಎ. ಸಿ ಅವರು ಜೂ.30 ರಂದು ಇಲಾಖೆಯಿಂದ ವಯೋನಿವೃತ್ತಿ ಹೊಂದಿದ್ದರು. ಈ ವೇಳೆ ಅವರಿಗೆ ಕುಟುಂಬ ಸಮೇತ ಗೌರವಿಸಿ ಬೀಳ್ಕೊಟ್ಟರು.