ಉಳ್ಳಾಲ: ಸಮುದ್ರ ತೀರದಲ್ಲಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರ ತಂಡ ನಿನ್ನೆ ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದೆ.
ಮೇಲಂಗಡಿ ನಿವಾಸಿಗಳಾದ ಅಫ್ರೀದ್ (22), ಅಶ್ಫಾನ್ (25) ಬಂಧಿತರು.
ಇಬ್ಬರು ಸೋಮೇಶ್ವರ ಸಮೀಪದ ಪೆರಿಬೈಲ್ ಸಮುದ್ರ ತೀರದಲ್ಲಿ ಗಾಂಜಾ ಮಾರಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳ ಪತ್ತೆಯಾಗಿದೆ.
ಇಬ್ಬರಲ್ಲಿದ್ದ 1.100 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಕೇರಳ ಕಡೆಯಿಂದ ಗಾಂಜಾ ತರುವ ತಂಡ ಗಡಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸೇರಿದಂತೆ ಗ್ರಾಹಕರಿಗೆ ಹೆಚ್ಚು ಮಾರಾಟ ನಡೆಸುತ್ತಿರುವ ಆರೋಪಗಳು ಹಿಂದಿನಿಂದಲೂ ಕೇಳಿಬಂದಿತ್ತು.
ಮಂಗಳೂರು ದಕ್ಷಿಣ ಎಸಿಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ, ಠಾಣಾಧಿಕಾರಿ ಸಂದೀಪ್ ಅವರ ನಿರ್ದೇಶನದಂತೆ, ಪಿಎಸ್ ಐಗಳಾದ ಶಿವಕುಮಾರ್, ರೇವಣ್ಣ ಸಿದ್ದಯ್ಯ ಹಾಗೂ ಸಿಬ್ಬಂದಿ ರಂಜಿತ್, ಚಿದಾನಂದ್ ವಾಸುದೇವ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.