Friday, August 19, 2022

ಸಜಿಪಮೂಡ ಗ್ರಾಮದಲ್ಲಿ 2.30 ಕೋಟಿ ಅನುದಾನದ ಮಾದರಿ ರಸ್ತೆ ನಿರ್ಮಾಣ

ಪುತ್ತೂರು: ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ, ಅಧಿಕಾರಿಗಳ ಮೇಲುಸ್ತುವಾರಿಯಿಂದ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಮಾದರಿ ರಸ್ತೆಯ ನಿರ್ಮಾಣವಾಗಿದೆ.


ಇಲ್ಲೊಂದು ರಸ್ತೆಯ ನಿರ್ಮಾಣಗೊಂಡಿದ್ದು, ಈ ರಸ್ತೆ ರಾಜ್ಯದ ಗ್ರಾಮ ಮಟ್ಟದಲ್ಲಿ ಎಲ್ಲೂ ಇಲ್ಲದಂತಹ ರಸ್ತೆಯಂತೆ ಗುರುತಿಸಲ್ಪಟ್ಟಿದೆ. ಈ ರಸ್ತೆಯ ಎರಡೂ ಪಕ್ಕದಲ್ಲಿ ಪಾದಾಚಾರಿಗೆ ಹೋಗಲು ಫುಟ್ ಪಾತ್, ರಸ್ತೆಯುದ್ದಕ್ಕೂ ಸೋಲಾರ್ ಲೈಟ್ಸ್, ಇಕ್ಕೆಲಗಳಲ್ಲೂ ಚರಂಡಿ ವ್ಯವಸ್ಥೆ ಹೀಗೆ ದೇಶ, ರಾಜ್ಯ ರಾಜಧಾನಿಗಳಂತ ನಗರ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂತಹ ರಸ್ತೆಯಾಗಿ ಈ ರಸ್ತೆ ಹೊರಹೊಮ್ಮಿದೆ.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಮೂಲಭೂತ ಸೌಕರ್ಯಗಳ ಈಡೇರಿಕೆಯಾಗಿ ಕಾಲಕಾಲಕ್ಕೆ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಈ ಅನುದಾನಗಳನ್ನು ರಸ್ತೆ, ನೀರು, ಆರೋಗ್ಯ ಹಾಗೂ ಇತರ ಕಾರ್ಯಗಳಿಗಾಗಿ ಬಳಸಲಾಗುತ್ತದೆ.

ಆದರೆ ಈ ಎಲ್ಲಾ ಕಾರ್ಯಗಳಲ್ಲೂ ಆಯಾ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ , ಜನರ ಪಾಲ್ಗೊಳ್ಳುವಿಕೆ ಇದ್ದರೆ ಮಾತ್ರ ಸರಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಮಾದರಿ ರಸ್ತೆಯೊಂದನ್ನು ನಿರ್ಮಾಣವಾಗಿದೆ.
ಇಂದು ಸಂಭ್ರಮಾಚರಣೆಯ ರೂಪದಲ್ಲಿ ಇಲ್ಲಿನ ಜನ ಗ್ರಾಮದ ಈ ರಸ್ತೆಯ ಉದ್ಘಾಟನೆಯನ್ನು ಆಯೋಜಿಸಿದ್ದಾರೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಈ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.

ಸಜಿಪಮೂಡದಿಂದ ಮಿತ್ತಮಜಲು ದೇವಸ್ಥಾನದವರೆಗೆ ನಿರ್ಮಿಸಲಾಗಿರುವ 1.5 ಕಿಲೋಮೀಟರ್ ದೂರದ ಈ ರಸ್ತೆಗೆ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.

ದೇಶ ಅಥವಾ ರಾಜ್ಯಗಳ ರಾಜಧಾನಿ ಹಾಗೂ ಮೆಟ್ರೋ ನಗರಗಳಲ್ಲಿ ಮಾತ್ರ ಕಾಣಸಿಗುವಂತಹ ಮಾದರಿ ರಸ್ತೆಯಂತೆ ಈ ರಸ್ತೆಯನ್ನು ನಿರ್ಮಿಸಲಾಗಿರುವುದು ಇದರ ವಿಶೇಷತೆಯಾಗಿದೆ.

ಸಂಪೂರ್ಣ ಕಾಂಕ್ರೀಟೀಕರಣದ ಮೂಲಕ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ರಸ್ತೆಗೆ ಅಗತ್ಯವಿರುವ ಜಾಗವನ್ನು ಇಲ್ಲಿನ ಜನ ಯಾವುದೇ ತಕರಾರಿಲ್ಲದೆ ನೀಡಿದ್ದಾರೆ.

ರಸ್ತೆಯ ಎರಡೂ ಕಡೆಗಳಲ್ಲಿ ಪಾದಾಚಾರಿಗಳು ನಡೆದಾಡಲು ಫುಟ್ ಪಾತ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಆಕರ್ಷಕ ಇಂಟರ್‌ಲಾಕ್‌ಗಳನ್ನು ಅಳವಡಿಸುವ ಮೂಲಕ ರಸ್ತೆಗೆ ಮೆರಗು ಬರುವಂತೆ ಮಾಡಲಾಗಿದೆ.

ಅಲ್ಲದೆ ರಸ್ತೆಯುದ್ಧಕ್ಕೂ ಸೋಲಾರ್ ಲೈಟ್‌ಗಳನ್ನು ಹಾಕಲಾಗಿದ್ದು, ಈ ಲೈಟ್ಸ್‌ಗಳು ಕತ್ತಲಾಗುತ್ತಿದ್ದಂತೆ ಸ್ವಯಂಚಾಲಿತವಾಗಿ ಉರಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಮಳೆಗಾಲದಲ್ಲಿ ರಸ್ತೆಯ ಮೇಲೆ ಮಳೆ ನೀರು ಹರಿಯದಂತೆ ರಸ್ತೆಯ ಇಕ್ಕೆಲದಲ್ಲೂ ನೀರು ಸಲೀಸಾಗಿ ಹರಿದು ಹೋಗುವಂತೆ ಚರಂಡಿಯನ್ನೂ ಮಾಡಲಾಗಿದ್ದು, ರಸ್ತೆಯ ಎಲ್ಲಾ ಉಸ್ತುವಾರಿಯನ್ನೂ ಸಜಿಪಮೂಡದ ನಾಗರಿಕ ಸೇವಾ ಸಮಿತಿ ನೋಡಿಕೊಳ್ಳುತ್ತಿದೆ.

ಈ ಬಗ್ಗೆ ಸಜಿಪ ಮೂಡ ನಾಗರಿಕ ಸಮಿತಿಯ ಸಂಚಾಲಕ ಮಾತನಾಡಿ ” 15 ಲಕ್ಷ ವೆಚ್ಚದಲ್ಲಿ ಇದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲು ಆರಂಭಗೊಂಡ ಕಾಮಗಾರಿಯು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್‌ರ ಸಹಕಾರದಿಂದಾಗಿ 2.5 ಕೋಟಿ ವೆಚ್ಚದ ಮಾದರಿ ರಸ್ತೆಯಾಗಿ ಮುಕ್ತಾಯಗೊಂಡಿದೆ.

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಇಂತಹ ರಸ್ತೆಗಳನ್ನು ನಾವು ಸಹಜವಾಗಿ ಕಾಣಬಹುದು.

ಆದರೆ ಈ ರೀತಿ ಹಳ್ಳಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾವು ಈ ರೀತಿಯ ಸುಸಜ್ಜಿತ ರಸ್ತೆಯನ್ನು ಕಾಣುವುದು ವಿರಳ.

ಗ್ರಾಮಸ್ಥರಿಗೆ ನೆರವಾಗುವ ದೃಷ್ಠಿಯಲ್ಲಿ ಈ ವ್ಯವಸ್ಥೆಗೆ ಸಹಕರಿಸಿದ ಶಾಸಕ ರಾಜೇಶ್ ನಾಯಕ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದ ತಿಳಿಸುತ್ತೇವೆ’ ಎಂದು ಹೇಳಿದರು.

ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನೂ ಬೆಳೆಸಲು ಈಗಾಗಲೇ ಆಕರ್ಷಕ ಹೊಂಡಗಳನ್ನು ನಿರ್ಮಿಸಲಾಗಿದ್ದು, ಮಳೆಗಾಲದ ಸಮಯದಲ್ಲಿ ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ.

ರಾಜ್ಯದ ಎಲ್ಲೂ ಗ್ರಾಮಮಟ್ಟದಲ್ಲಿ ಇಂಥಹ ರಸ್ತೆಯು ಕಾಣಸಿಗುವುದು ಸಾಧ್ಯವಿಲ್ಲ ಎನ್ನುವ ಗ್ರಾಮಸ್ಥರು, ಜನಪ್ರತಿನಿಧಿಗಳನ್ನು ಬಳಸಿಕೊಂಡು, ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಸರಕಾರದ ಅನುದಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಸಜಿಪಮೂಡದ ಜನ ತೋರಿಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಿಜೆಪಿ ಕಾರ್ಯಕರ್ತ ಖಾಲಿದ್ ನಂದಾವರಗೆ ಜೀವಬೆದರಿಕೆ: ಬಂಟ್ವಾಳ DYSPಗೆ ದೂರು

ಮಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಬೋರ್ಡ್‌ ಸದಸ್ಯರ ಜೀವಬೆದರಿಕೆ ಇರುವ ಬಗ್ಗೆ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿಗೆ ದೂರು ನೀಡಿದ್ದಾರೆ.  ಖಾಲಿದ್ ನಂದಾವರದ.ಕ ಜಿಲ್ಲಾ ವಕ್ಫ್‌ ಬೋರ್ಡ್ ಸದಸ್ಯ...

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ಕಲ್ಲಡ್ಕ ಬಸ್ಟ್ಯಾಂಡ್ ಕ್ಲೀನ್: ಮೆಲ್ಕಾರ್ ಟ್ರಾಫಿಕ್ ಪೊಲೀಸರ ಸಮಾಜಮುಖಿ ಕಾರ್ಯ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ‌ ಧೂಳು ಕೆಸರಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ಪೊಲೀಸರ ತಂಡ ನೀರು ಹಾಕಿ ತೊಳೆಯುವ ಅದ್ಭುತ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆಯುತ್ತಿದೆ.ಕಲ್ಲಡ್ಕದ ಪೇಟೆಯಲ್ಲಿರುವ ಬಸ್ ನಿಲ್ದಾಣ...

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ...