Home ಕರ್ನಾಟಕ ವಾರ್ತೆ ರಾಜ್ಯಕ್ಕೆ ಕರಾಳ ಶನಿವಾರ: 196 ದಾಖಲೆಯ ಕೊರೊನಾ ಪ್ರಕರಣ ಪತ್ತೆ..!!

ರಾಜ್ಯಕ್ಕೆ ಕರಾಳ ಶನಿವಾರ: 196 ದಾಖಲೆಯ ಕೊರೊನಾ ಪ್ರಕರಣ ಪತ್ತೆ..!!

ರಾಜ್ಯಕ್ಕೆ ಕರಾಳ ಶನಿವಾರ: 196 ದಾಖಲೆಯ ಕೊರೊನಾ ಪ್ರಕರಣ ಪತ್ತೆ..!!

ಬೆಂಗಳೂರು: ಮಹಾರಾಷ್ಟ್ರದ ಕೊರೊನಾ ನಂಟು ಕರ್ನಾಟಕವನ್ನು ದಿನೇ ದಿನೇ ತತ್ತರಿಸುವಂತೆ ಮಾಡಿದ್ದು ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟುತ್ತಿದೆ.

ಇಂದು ಕೂಡ 196 ಜನರಿಗೆ ಕೊರೊನಾ ವೈರಸ್ ವಕ್ಕರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ.

ಯಾದಗಿರಿಯಲ್ಲಿ 72 ಮಂದಿಗೆ, ಮಂಡ್ಯದಲ್ಲಿ 28 ಜನರಿಗೆ, ರಾಯಚೂರಿನಲ್ಲಿ 38 ಜನರಿಗೆ, ಚಿಕ್ಕಬಳ್ಳಾಪುರದಲ್ಲಿ 20 ಮಂದಿ, ಗದಗ 15, ಬೆಂಗಳೂರು 4, ಹಾಸನ 4, ಕೋಲಾರ 2,

ದಕ್ಷಿಣ ಕನ್ನಡ 2, ಉತ್ತರ ಕನ್ನಡ 3, ಉಡುಪಿ 5, ಧಾರವಾಡ, ಬೆಳಗಾವಿ, ಕಲಬುರಗಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

ಇಂದು ವರದಿಯಾದ 196 ಪ್ರಕರಣಗಳ 184 ಕೇಸ್‌ಗಳಿಗೆ ಮಹಾರಾಷ್ಟ್ರ ರಾಜ್ಯದ ನಂಟು ಹೊಂದಿದೆ.

ಇಂದಿನ ಒಟ್ಟು ಪ್ರಕರಣಗಳಲ್ಲಿ 37 ಮಕ್ಕಳು ಒಳಗೊಂಡಿದ್ದಾರೆ. ನಾಲ್ಕು ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ.

ರಾಜ್ಯದಲ್ಲಿ ಒಟ್ಟಾರೆ 1939 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ 598 ಮಂದಿ ಗುಣಮುಖರಾಗಿದ್ದಾರೆ.

ಇನ್ನು 1297 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಾಗಲೇ ರಾಜ್ಯದಲ್ಲಿ ಸೋಕಿಂಗೆ 42 ಮಂದಿ ಬಲಿಯಾಗಿದ್ದಾರೆ.

- Advertisment -

RECENT NEWS

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ ಉಳ್ಳಾಲ: ಕಳೆದೆರಡು ದಿನಗಳಿಂದ ಮುಂಗಾರು ಮಳೆ ತೀವ್ರವಾಗಿ ಕರಾವಳಿ ತೀರದಲ್ಲಿ ಸುರಿಯತೊಡಗಿದ್ದು, ಕಡಲ ತೀರದಲ್ಲೂ ಕಡಲ ಅಬ್ಬರ ಜೋರಾಗಿದೆ. ಪ್ರತೀ ವರ್ಷ ಕಡಲಕೊರೆತ ತೀವ್ರವಾಗಿರುವ ಮಂಗಳೂರು ಕ್ಷೇತ್ರದ ಉಳ್ಳಾಲ...

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...