ಸಂಬಂಧಿಯ ಅಂತ್ಯಸಂಸ್ಕಾರಕ್ಕೆಂದು ಬಂದ 16ಮಂದಿ ಮಸಣಕ್ಕೆ..!
ನವದೆಹಲಿ: ಕೊನೆಯುಸಿರೆಳೆದಿದ್ದ ಸಂಬಂಧಿಯ ಅಂತ್ಯಸಂಸ್ಕಾರ ನಡೆಸಲು ಬಂದಿದ್ದ ಸಂಬಂಧಿಕರು ದುರ್ಮರಣ ಹೊಂದಿದ ಘಟನೆ ದೆಹಲಿ ಸನಿಹದ ಗಾಜಿಯಾಬಾದ್ನಲ್ಲಿ ನಡೆದಿದೆ.
. ಈಗಾಗಲೇ 16 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.ಗಾಜಿಯಾಬಾದ್ನ ಮುರಾದ್ನಗರದಲ್ಲಿ ಈ ದುರ್ಘಟನೆ ನಡೆದಿದೆ.
ಉಖಲಾರ್ಸಿ ಗ್ರಾಮದ ವ್ಯಕ್ತಿಯೊಬ್ಬ ಮೃತನಾಗಿದ್ದ. ಆತನ ಅಂತ್ಯಸಂಸ್ಕಾರ ನಡೆಸಲೆಂದು ಸಂಬಂಧಿಕರು ಭಾನುವಾರ ಬೆಳಗ್ಗೆ ಸ್ಮಶಾನಕ್ಕೆ ಬಂದಿದ್ದಾರೆ.
ಅಂತ್ಯಕ್ರಿಯೆ ನಡೆಸುವ ಸಂದರ್ಭ ಜೋರಾಗಿ ಮಳೆ ಸುರಿದಿದೆ.ಈ ಸಂದರ್ಭ ಎಲ್ಲರೂ ಛಾವಣಿಯ ಒಳಗೆ ಕುಳಿತಿದ್ದಾರೆ. ಅದೇ ಸಮಯಕ್ಕೆ ಛಾವಣಿ ಕುಸಿದಿದೆ.
ಛಾವಣಿಯ ಅಡಿ ಕನಿಷ್ಠ 24 ಮಂದಿ ಇದ್ದರು ಎನ್ನಲಾಗಿದೆ. ಸ್ಥಳಕ್ಕೆ ಗಾಜಿಯಾಬಾದ್ ಪೊಲೀಸರು ಮತ್ತು ಎನ್ಡಿಆರ್ಎಫ್ನ ರಕ್ಷಣಾ ತಂಡ ಬಂದಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಈವರೆಗೆ 16 ಮಂದಿಯ ಮೃತ ದೇಹವನ್ನು ಹೊರತೆಗೆಯಲಾಗಿದೆ. ಛಾವಣಿಯ ಅವಶೇಷಗಳ ಅಡಿ ಇನ್ನಷ್ಟು ಜನರಿದ್ದು ಅವರನ್ನು ಹೊರತೆಗೆಯಲು ಹರಸಾಹಸ ಮಾಡಲಾಗುತ್ತಿದೆ.