Thursday, October 21, 2021

ಜೈಲಿನಲ್ಲಿ ಗ್ಯಾಂಗ್​ವಾರ್: 116 ಸಾವು, 5 ಜನರ ಶಿರಚ್ಛೇದನ

ಕ್ವಿಟೊ, ಈಕ್ವೆಡಾರ್: ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶದ ಜೈಲಿನಲ್ಲಿ ನಡೆದ ಗ್ಯಾಂಗ್​ವಾರ್​ಗೆ ಕನಿಷ್ಟ 116 ಜನ ಮೃತಪಟ್ಟಿದ್ದು 5 ಜನರ ಶಿರಚ್ಛೇದನ ಮಾಡಲಾಗಿದೆ, ಉಳಿದವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.


ಅಲ್ಲದೆ, ಇದು ಈಕ್ವೆಡಾರ್ ಇತಿಹಾಸದಲ್ಲೇ ಅತ್ಯಂತ ಕರಾಳ ಹತ್ಯಾಕಾಂಡ ಎಂದು ಹೇಳಲಾಗುತ್ತಿದೆ. ಈಕ್ವೆಡಾರ್​ ಜೈಲಿನಲ್ಲಿ ಪ್ರಮುಖ ಡ್ರಗ್ ಮಾಫಿಯಾದ ಕೈದಿಗಳನ್ನು ಬಂಧಿಸಿ ಇಡಲಾಗಿತ್ತು. ಆದರೆ, ಈ ಡ್ರಗ್ ಮಾಫಿಯಾದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ಈ ಹತ್ಯಾಕಾಂಡ ನಡೆದಿದೆ.

ಈ ಹತ್ಯಾಕಾಂಡದಲ್ಲಿ 116 ಜನ ಮೃತಪಟ್ಟಿದ್ದು, ಕೈದಿಗಳು ಗ್ರೆನೇಡ್‌ಗಳನ್ನು ಎಸೆದಿದ್ದಾರೆ ಎಂದು ಪೊಲೀಸ್ ಕಮಾಂಡರ್ ಫೌಸ್ಟೊ ಬ್ಯೂನಾನೊ ಮಾಹಿತಿ ನೀಡಿದ್ದಾರೆ.

ಹೀಗಾಗಿ ಈಕ್ವೆಡಾರ್ ದೇಶದಲ್ಲೇ ಅತ್ಯಂತ ಕೆಟ್ಟ ಜೈಲು ಹಿಂಸಾಚಾರ ಎನ್ನಲಾಗುತ್ತಿದೆ.
ಪ್ರಸ್ತುತ ಈಕ್ವೆಡಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಬಲ ಮೆಕ್ಸಿಕನ್ ಮಾದಕವಸ್ತು ಕಳ್ಳಸಾಗಣೆ ತಂಡಗಳಿಂದ ದಂಗೆಯನ್ನು ಆದೇಶಿಸಲಾಗಿದೆ

ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈಕ್ವೆಡಾರ್ ನ ಕಾರಾಗೃಹ ಸೇವಾ ನಿರ್ದೇಶಕ ಬೊಲಿವಾರ್ ಗಾರ್​ಜೋನ್ ಸ್ಥಳೀಯ ರೇಡಿಯೋಗೆ “ಪರಿಸ್ಥಿತಿ ಭಯಾನಕವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

ಹೀಗಾಗಿ ಜೈಲಿನ ನಿಯಂತ್ರಣವನ್ನು ಮರಳಿ ಪಡೆಯುವ ಸಲುವಾಗಿ ಅಲ್ಲಿನ ಸರ್ಕಾರ 400 ಜನ ಹೆಚ್ಚವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ್ಧಾರೆ.
ಈ ಘಟನೆ ಬೆನ್ನಿಗೆ ಈಕ್ವೆಡಾರ್​ ದೇಶದ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ದೇಶದ ಜೈಲು ವ್ಯವಸ್ಥೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...