Home ಪ್ರಮುಖ ಸುದ್ದಿ ಆಗ್ರ-ಲಕ್ನೋ ಎಕ್ಸ್ ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ:16 ಸಾವು 20 ಮಂದಿ ಗಂಭೀರ..!

ಆಗ್ರ-ಲಕ್ನೋ ಎಕ್ಸ್ ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ:16 ಸಾವು 20 ಮಂದಿ ಗಂಭೀರ..!

ಆಗ್ರ-ಲಕ್ನೋ ಎಕ್ಸ್ ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ:16 ಸಾವು 20 ಮಂದಿ ಗಂಭೀರ..!

ನವದೆಹಲಿ : ಆಗ್ರಾ- ಲಕ್ನೋ ಎಕ್ಸ್‌ಪ್ರೆಸ್ ಹೈವೇಯಲ್ಲಿ ನಡೆದ ಭೀಕರ ಅಪಘಾತದಲ್ಲಿ 16 ಮಂದಿ ಮೃತಪಟ್ಟು, ಕನಿಷ್ಠ ಇತರ 20 ಮಂದಿ ಗಾಯಗೊಂಡಿದ್ದಾರೆ.

ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಬುಧವಾರ ತಡರಾತ್ರಿ ಟ್ರಕ್‌ನ ಹಿಂಬದಿಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಫಿರೋಝಾಬಾದ್ ಜಿಲ್ಲೆಯ ನಾಗ್ಲ ಖಾನ್‌ಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸೈಫೈ ಪಿಜಿಐಗೆ ಸಂತ್ರಸ್ತರನ್ನು ಸಾಗಿಸಲಾಗಿದೆ.

ಟ್ರಕ್‌ನ ಟೈರು ಸಿಡಿದ ಬಳಿಕ ಟ್ರಕ್ ಚಾಲಕ ಟೈರ್ ಬದಲಾಯಿಸಲು ಎಕ್ಸ್‌ಪ್ರೆಸ್ ಹೈವೇಯ ಬಲಬದಿಯಲ್ಲಿ ಟ್ರಕ್ ನಿಲ್ಲಿಸಿದ್ದ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬಸ್ಸು, ಟ್ರಕ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಢಿಕ್ಕಿಯ ರಭಸಕ್ಕೆ ಬಸ್ಸು ನುಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಬಸ್ಸಿನ ಅವಶೇಷದಿಂದ ಹೊರಕ್ಕೆ ತೆಗೆಯಲು ಮೂರು ಗಂಟೆ ಬೇಕಾಯಿತು.

ಹಲವು ಮಂದಿ ಗಾಯಾಳುಗಳು ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಕಿಟಕಿಯ ಹೊರಗೆ ನೇತಾಡುತ್ತಿದ್ದರು. ಇಡೀ ದೃಶ್ಯ ಭಯಾನಕವಾಗಿತ್ತು” ಎಂದು ಯುಪಿಇಐಡಿಎ ಗಸ್ತು ತಂಡದ ಸದಸ್ಯರು ಹೇಳಿದ್ದಾರೆ

RECENT NEWS

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..!

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..! ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಜನ ಸಾಮಾನ್ಯರಲ್ಲಿ ಚಳಿ ಕೂರಿಸಿದೆ. ಕಳೆದ...
error: Content is protected !!