ಮಂಗಳೂರು: ಹೊಸಗನ್ನಡದ ಮುಂಗೋಳಿ ಎಂದು ಪ್ರಖ್ಯಾತರಾಗಿದ್ದ ಕವಿ ಮುದ್ದಣ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ 150 ರೂ. ಹೊಸ ನಾಣ್ಯವನ್ನು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅನಾವರಣ.
ಬಳಿಕ ಮಾತನಾಡಿದ ಅವರು, ದ.ಕ.ಜಿಲ್ಲೆಯ ಕವಿ ಮುದ್ದಣ ಅವರು ಬಹಳ ಶ್ರೇಷ್ಠ ಪರಂಪರೆ ಹುಟ್ಟು ಹಾಕಿದರು. ಕವಿ ಮುದ್ದಣನವರ 150 ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಅವರ ಸಾಹಿತ್ಯ ಪ್ರಚಾರ,
ಪ್ರಸಾರದ ಜೊತೆಗೆ ದೇಶದ ಗೌರವ ಸಲ್ಲಬೇಕೆಂಬ ದೃಷ್ಟಿಯಿಂದ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುದ್ದಣನ ಹೆಸರಿನಲ್ಲಿ 150 ರೂ. ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ್ದಾರೆ ಎಂದರು.
ಈ ಹಿಂದೆ ಕೇಂದ್ರ ಸರ್ಕಾರ ಮುದ್ದಣ ಅವರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ನಂದಳಿಕೆ ಬಾಲಚಂದ್ರ ರಾವ್, ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು, ಜಗದೀಶ್ ಶೇಣವ, ವಿಜಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.