ತಮೀಳಿನ ಖ್ಯಾತ ನಟಿ ಕೀರ್ತಿ ಸುರೇಶ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಇದ್ದಾರೆ. ಅವರ ಬಾಯ್‌ಫ್ರೆಂಡ್ ಯಾರು ಎಂಬ ಕುತೂಹಲ ಅನೇಕರಿಗೆ ಇತ್ತು. ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೀರ್ತಿ ಸುರೇಶ್ ಹೊಸ ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೀರ್ತಿ ಹಾಗೂ ಮತ್ತೋರ್ವ ವ್ಯಕ್ತಿ ನಿಂತಿರುವ ಫೋಟೋನ ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಇರುವ ವ್ಯಕ್ತಿ ಆ್ಯಂಟನಿ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಶೀಘ್ರವೇ ಇವರು ವಿವಾಹವಾಗುತ್ತಾರೆ ಎನ್ನಲಾಗಿದೆ. ಸದ್ಯ ಕೀರ್ತಿ ಸುರೇಶ್ ಈ ಫೋಟೋಗೆ, ‘ಹದಿನೈದು ವರ್ಷ ಹಾಗೂ ಇನ್ನೂ ಲೆಕ್ಕ ಹಾಕಲಾಗುತ್ತಿದೆ. AntoNY x Keerthy’ ಎಂದು ಬರೆದಿರುವ ಮೂಲಕ ಮದುವೆ ಸುದ್ದಿಗೆ ಪುಷ್ಟಿ ನೀಡಿದ್ದಾರೆ.
ಕೀರ್ತಿ ಸುರೇಶ್ ಲವ್ ಸ್ಟೋರಿ :
ಕೀರ್ತಿ ಹಾಗೂ ಆ್ಯಂಟೋನಿ ಬಾಲ್ಯದ ಗೆಳೆಯರು. 16ನೇ ವಯಸ್ಸಿನಲ್ಲಿ ಕೀರ್ತಿಗೆ ಆ್ಯಂಟೋನಿ ಪರಿಚಯವಾಗಿತ್ತು. ಆ ಗೆಳೆತನನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ಈ ವಿಚಾರವನ್ನು ಕೀರ್ತಿ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಆ್ಯಂಟೋನಿ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಖತಾರ್ನಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಕೊಚ್ಚಿಯಲ್ಲಿ ಇದ್ದಾರೆ. ತಮ್ಮದೇ ಉದ್ಯಮ ಹೊಂದಿರುವ ಆ್ಯಂಟೋನಿ ವೈದ್ಯಕೀಯ ಕ್ಷೇತ್ರದಲ್ಲೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಸೀತಾರಾಮ ಧಾರಾವಾಹಿಯ ಮುಖ್ಯ ಆಕರ್ಷಣೆ ಸಿಹಿ ಪುಟಾಣಿ. ಸಿಹಿಗೋಸ್ಕರನೇ ಧಾರಾವಾಹಿ ನೋಡೋ ವೀಕ್ಷಕರೇ ಇದ್ದಾರೆ. ಸಿಹಿ ಇಲ್ಲ ಅಂದ್ರೇ ಸ್ಟೋರಿ ಸಪ್ಪೆ ಆಗುತ್ತೆ. ಸಿಹಿಗೆ ಗೋಳಾಡಿಸಿದ್ರೇ ಬಹುತೇಕ ಜನಕ್ಕೆ ಇಷ್ಟ ಆಗಲ್ಲ. ಸಿಹಿಯನ್ನು ಸಿಹಿಯಾಗೇ ತೋರಿಸಿ ಅನ್ನೋದು ವೀಕ್ಷಕರ ಡಿಮ್ಯಾಂಡ್ ಆಗಿತ್ತು.
ಇನ್ನೂ, ಸೀತಾ-ರಾಮನ ಬಾಳಲ್ಲಿ ಸಿಹಿ ಕುರಿತು ಇದ್ದ ಅನುಮಾನ ವನವಾಸ ಮುಗಿದು ಇನ್ನೇನೂ ಖುಷಿ ಕ್ಷಣಗಳು ಬರುತ್ತೇ ಅನ್ನೋವಾಗಲೇ ಸ್ಟೋರಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸಿಹಿ ಅಧ್ಯಾಯಕ್ಕೆ ಜೊತೆಯಾಗ್ತಿದ್ದಾಳೆ ಸುಬ್ಬಿ. ಹೌದು, ಹಲವು ದಿನಗಳ ಹಿಂದೆನೇ ಸಿಹಿಗೆ ಆ್ಯಕ್ಸಿಡೆಂಟ್ ಆಗೋ ಪ್ರೋಮೋವೊಂದನ್ನು ರಿಲೀಸ್ ಮಾಡಲಾಗಿತ್ತು.
ಸೀತಾ ರಾಮನ ಬಾಳಲ್ಲಿ ಸಿಹಿ ದೂರ ಆಗ್ತಾಳೆ ಎಂಬ ಸುಳಿವು ಕೊಟ್ಟಿತ್ತು ಸೀರಿಯಲ್ ತಂಡ. ಇದೇ ಪ್ರೋಮೋವನ್ನು ನೋಡಿದ ವೀಕ್ಷಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಧಾರಾವಾಹಿಯಲ್ಲಿ ಸಿಹಿ ಇರಲೇಬೇಕು. ಸಿಹಿ ಇಲ್ಲದೇ ಸೀರಿಯಲ್ ನಾವು ನೋಡಲ್ಲ ಅಂತ ಪ್ರೇಕ್ಷಕ ಪ್ರಭುಗಳು ಬೇಸರ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಪಾತ್ರ ಇಂಟ್ರಡ್ಯೂಸ್ ಮಾಡಿದೆ ತಂಡ. ಆ ಪಾತ್ರ ಬೇರೆ ಯಾವುದು ಅಲ್ಲ ಅದುವೆ ಸಿಹಿಯ ಮತ್ತೊಂದು ರೂಪ ಸುಬ್ಬಿ. ಬಡ ಕುಟುಂಬದ ಸುಬ್ಬಿ ಥೇಟ್ ನೋಡೋಕೆ ಸಿಹಿ ಥರನೇ ಇದ್ದಾಳೆ. ಮಾತು, ನೋಟ ಒರಟಾಗಿದ್ರು ಸಿಹಿ ಹಾಗೇ ಮಗ್ಧ ಮನಸ್ಸಿನ ಪುಟಾಣಿ.
ಸಿಹಿ ಸಾವಿನ ನಂತರ ಆತ್ಮವಾಗಿ ಸೀತಾರಾಮನ ಬದುಕಿಗೆ ಎಂಟ್ರಿ ಕೊಡ್ತಾಳೆ. ಸಿಹಿ ಸಾವು ಸೀತಾರಾಮನ ಬದುಕಿನಲ್ಲಿ ಬಿರುಗಾಳಿ ಬೀಸುತ್ತೆ. ಅಪ್ಪ-ಅಮ್ಮನಿಗೆ ಹತ್ತಿರವಾಗಲೂ ಸಿಹಿಯ ಆತ್ಮಕ್ಕೆ ಸಾಥ್ ಕೊಡೋದು ಸುಬ್ಬಿ ಪಾತ್ರ. ಸಿಹಿ-ಸುಬ್ಬಿ ಕಾಂಬಿನೇಷನ್ ಹೊಸ ಅಧ್ಯಾಯದಲ್ಲಿ ಮೂಡಿಬರಲಿದ್ದು, ಮನರಂಜನೆ ಡಬಲ್ ಆಗೋದು ಪಕ್ಕಾ. ವೀಕ್ಷಕರು ಹೇಗೆ ಈ ಎರಡು ಶೇಡ್ನ ಸ್ವೀಕರಿಸುತ್ತಾರೆ ಅಂತ ಕಾದು ನೋಡಬೇಕಿದೆ.
ಮಂಗಳೂರು : ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋ ಯಾರು ಎಂಬುದು ಬಹಿರಂಗಗೊಂಡಿದೆ.
ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಇದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್, ರಜನಿಕಾಂತ್ ಇದ್ದಾರೆ. ಇವರ ಕಾಲ್ ಶೀಟ್ ಪಡೆಯಬೇಕು ಎಂದರೆ 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಕೊಟ್ಟು ಕಾಲ್ ಶೀಟ್ ಪಡೆಯಬೇಕು. ಈಗ ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಮಂಗಳೂರು : ಮತ್ತೆ ಡ್ರಗ್ ಸೀಜ್; ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ಎಂದು ಅಲ್ಲು ಅರ್ಜುನ್ ಅವರನ್ನು ಗುರುತಿಸಿದೆ. ಇನ್ನೂ ತಮಿಳಿನ ವಿಜಯ್ ತಮ್ಮ ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಪ್ರತಿ ಚಿತ್ರಕ್ಕೆ 150ರಿಂದ 250 ಕೋಟಿ ರೂಪಾಯಿ ಪಡೆಯುತ್ತಾರೆ. ಈ ಪಟ್ಟಿಯಲ್ಲಿ ಶಾರುಖ್ ಮೂರನೇ ಸ್ಥಾನ ಪಡೆದಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ 125ರಿಂದ 200 ಕೋಟಿ ರೂಪಾಯಿ ಪಡೆದರೆ, ಆಮೀರ್ ಖಾನ್ ಪ್ರತಿ ಸಿನಿಮಾಕ್ಕೆ 100ರಿಂದ 200 ಕೋಟಿ ಪಡೆಯುತ್ತಾರೆ. ಈಗಾಗೀ ಇಬ್ಬರು ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ಆರನೇ ಸ್ಥಾನದಲ್ಲಿರುವ ಪ್ರಭಾಸ್ ಅವರು 100 ಕೋಟಿ ಸಂಭಾವನೆ ಪಡೆಯುತ್ತಾರೆ. ಆ ಬಳಿಕ ಅಜಿತ್ ಕುಮಾರ್, ಸಲ್ಮಾನ್ ಖಾನ್, ಕಮಲ್ ಹಾಸನ್ ಹಾಗೂ ಅಕ್ಷಯ್ ಕುಮಾರ್ ಇದ್ದಾರೆ. ಟಾಪ್ 10ರ ಪೈಕಿ ಆರು ಹೀರೋಗಳು ಇದ್ದಾರೆ.
ಅಲ್ಲು ಅರ್ಜುನ್ ಸಂಭಾವನೆ ವಿಚಾರದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ದಳಪತಿ ವಿಜಯ್, ರಜನಿಕಾಂತ್, ಪ್ರಭಾಸ್ ಎಲ್ಲರನ್ನು ಮೀರಿಸಿದ್ದಾರೆ. ಈಗ ಫೋರ್ಬ್ಸ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಅಲ್ಲು ಅರ್ಜುನ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಆಗಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 300 ಕೋಟಿ ರೂಪಾಯಿ ಪಡೆಯುತ್ತಾರೆ.
ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸಾಕಷ್ಟು ನೋವು ಅನುಭವಿಸಿದ್ದರು. ನಾಲ್ಕು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಸಂಸಾರ ನಡೆಸಿದ ಸಂಸಾರ ಈಗ ಕೊನೆಯಾಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ನಾಗ ಚೈತನ್ಯ ಮತ್ತೊಂದು ಮದುವೆ ಆಗುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ನೋವು ಅನುಭವಿಸಿದ್ದರು. ಸಮಂತಾ ಎದುರಿಸಿದ ತೊಂದರೆಗಳ ಬಗ್ಗೆ, ಕೇಳಿದ ಪದಗಳ ಬಗ್ಗೆ ಬಹಳ ದುಖದಿಂದ ಹೇಳಿಕೊಂಡಿದ್ದಾರೆ.
‘ನಾನು ವಿಚ್ಛೇದನ ಪಡೆದಾಗ ಜನರು ಸೆಕೆಂಡ್ ಹ್ಯಾಂಡ್, ಬಳಕೆ ಆದವಳು ಎಂದು ಕರೆಯುತ್ತಿದ್ದರು. ಈ ರೀತಿಯ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದವು. ವಿಚ್ಛೇದನ ಪಡೆದ ಬಳಿಕ ಮಹಿಳೆಯರು ಹಾಗೂ ಕುಟುಂಬದವರು ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ ಸಮಂತಾ.
‘ಆರಂಭದಲ್ಲಿ ಇದು ಸಾಕಷ್ಟು ನೋವುಂಟು ಮಾಡಿತ್ತು. ನಾನು ವಿಚ್ಛೇದನ ಪಡೆದಿರುವುದು ಕಾಲ್ಪನಿಕ ಕಥೆಯಲ್ಲ. ಹಾಗೆಂದು ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ಅದನ್ನು ಮರೆ ಮಾಚುವ ಅಗತ್ಯವಿಲ್ಲ. ನನ್ನ ಜೀವನ ಇಲ್ಲಿಗೆ ಕೊನೆಯಾಗಿದೆ ಎಂದರ್ಥವಲ್ಲ. ಎಲ್ಲಿ ಕೊನೆಯಿದೆಯೋ ಅಲ್ಲಿಂದಲೇ ಆರಂಭವಿರುತ್ತದೆ’ ಎಂದಿದ್ದಾರೆ ಸಮಂತಾ. ಈ ಮೂಲಕ ನಡೆದ ಘಟನೆಯನ್ನು ಒಪ್ಪಿ ಮುಂದೆ ಸಾಗಿರುವುದಾಗಿ ತಿಳಿಸಿದ್ದಾರೆ.
ಸಿನಿಮಾ ವಿಚಾರದಲ್ಲಿ ಸಮಂತಾ ಗುಡ್ನ್ಯೂಸ್ ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 2017ರಲ್ಲಿ ನಾಗ ಚೈತನ್ಯ ಜೊತೆ ಸಮಂತಾ ಮದುವೆ ಗೋವಾದಲ್ಲಿ ಅದ್ದೂರಿಯಾಗಿ ನೆರವೇರಿತ್ತು. 2021ರಲ್ಲಿ ವಿಚ್ಚೇಧನವಾಗಿತ್ತು. ಸದ್ಯ ನಾಗ ಚೈತನ್ಯ ಅವರು ಶೋಭಿತಾ ದುಲಿಪಾಲ್ನ ವಿವಾಹ ಆಗುತ್ತಿದ್ದಾರೆ.