Saturday, November 26, 2022

ಮೆಕ್ಸಿಕೊದಲ್ಲಿ ಅನಿಲ ಸಾಗಾಟ ಟ್ಯಾಂಕರ್ ಸ್ಟೋಟ : 15 ಮಂದಿ ಸಜೀವ ದಹನ..!

ಮೆಕ್ಸಿಕೊದಲ್ಲಿ ಅನಿಲ ಸಾಗಾಟ ಟ್ಯಾಂಕರ್ ಸ್ಟೋಟ : 15 ಮಂದಿ ಸಜೀವ ದಹನ..!

ಮೆಕ್ಸಿಕೊ : ಅಡುಗೆ ಅನಿಲ (ಎಲ್‍ಪಿಜಿ) ಕೊಂಡೊಯುತ್ತಿದ್ದ ಡಬಲ್ ಟ್ಯಾಂಕರ್ ಸ್ಫೋಟಗೊಂಡು 15 ಮಂದಿ ಸಜೀವ ದಹನಗೊಂಡ ಬೀಕರ ಘಟನೆ ಪಶ್ಚಿಮ ಮೆಕ್ಸಿಕೋದಲ್ಲಿ ಸಂಭವಿಸಿದೆ.

ಈ ದುರಂತದಲ್ಲಿ ಇನ್ನೂ ಕೆಲವರಿಗೆ ಗಂಭೀರ ಸುಟ್ಟು ಗಾಯಗಳಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ದುರ್ಘಟನೆಯಲ್ಲಿ ನಾಲ್ವು ವಾಹನಗಳು ದಹನಗೊಂಡಿವೆ.

ಎಲ್‍ಪಿಜಿ ಇದ್ದ ಭಾರೀ ಗಾತ್ರದ ಟ್ಯಾಂಕರ್ ಚಾಲಕನ ನಿಯಂತ್ರಣತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದು, ಬೆಂಕಿ ತಗುಲಿ ಭಾರೀ ಶಬ್ದದೊಂದಿಗೆ ಸ್ಪೋಟನೆಗೊಂಡಿತು.

ಚಾಲಕ ಸೇರಿದಂತೆ ಈ ಟ್ಯಾಂಕರ್‍ನ ಸಮೀಪದಲ್ಲಿದ್ದ ಕೆಲವು ವಾಹನಗಳ 15 ಮಂದಿ ಗುರುತು ಸಿಗಲಾರದಷ್ಟು ಸುಟ್ಟುಕರಕಲಾಗಿದ್ದಾರೆ.

ಸ್ಪೋಟದ ರಭಸ ಮತ್ತುತೀವ್ರತೆ ಎಷ್ಟಿತ್ತೆಂದರೆ ಅಕ್ಕಪಕ್ಕದ ವಾಹನಗಳಲ್ಲಿ ಇದ್ದವರಿಗೆ ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲೇ ಅವರು ವಾಹನದಲ್ಲಿ ಕುಳಿತ ಸ್ಥಳದಲ್ಲೇ ಸುಟ್ಟುಕರಲಾಗಿದ್ದರು.

ಸ್ಪೋಟಗೊಂಡ ಟ್ಯಾಂಕರ್‍ಗೆ ತೀರಾ ಸನಿಹದಲ್ಲಿದ್ದ ಕಾರೊಂದು ಸ್ಫೋಟದ ರಭಸದಕ್ಕೆ ಅನೇಕ ಅಡಿಗಳಷ್ಟು ಮೇಲಕ್ಕೆ ಚಿಮ್ಮಿ ಪಕ್ಕದ ಬೆಟ್ಟಕ್ಕೆ ಅಪ್ಪಳಿಸಿ ಛಿದ್ರ ಛಿದ್ರವಾಯಿತು.

ಟ್ಯಾಂಕರ್‍ನ ಬಿಡಿ ಭಾಗಗಳು ಬೆಂಕಿ ಉಂಡೆಗಳಾಗಿ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು.ಆ ಪ್ರದೇಶವು ಸುಟ್ಟುಕರಕಲಾದವರ ಮಾಂಸದ ಮುದ್ದೆಗಳೊಂದಿಗೆ ಭೀಬತ್ಸವಾಗಿತ್ತು.

ಈ ದೃಶ್ಯಗಳನ್ನು ಪೆಸಿಫಿಕ್ ಕರಾವಳಿ ಪ್ರದೇಶದ ನಯಾರಿಟ್‍ನ ದೃಶ್ಯ ಮಾಧ್ಯಮಗಳು ಬಿತ್ತರಿಸಿವೆ.

ಮೆಕ್ಸಿಕೋದಲ್ಲಿ ಇತ್ತೀಚನ ವರ್ಷಗಳಲ್ಲಿ ಅನೇಕ ಬೃಹತ್‍ಡಬಲ್ ಟ್ರೇಲರ್ ಟ್ರಕ್‍ಗಳು ಭೀಕರ ಅಪಘಾತಗಳಿಗೆ ಒಳಗಾಗುತ್ತಿದ್ದು, ಸಾವು-ನೋವುಗಳು ಮರುಕಳಿಸುತ್ತಲೇ ಇವೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳಕ್ಕೆ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ವಿರೋಧ..!

ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ ಅದನ್ನು ಹೆಜಮಾಡಿ ಟೋಲ್‌ಗೆ ವಿಲೀನಗೊಳಿಸಿ ಟೋಲ್ ಶುಲ್ಕ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ವಿರೋಧಿಸಿದ್ದಾರೆ.ಉಡುಪಿ : ಸುರತ್ಕಲ್‌ನಲ್ಲಿ...