Sunday, November 27, 2022

ರಾಜ್ಯದ ಗಡಿ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಬೀಫ್‌ ಎಕ್ಸ್‌ಪೋರ್ಟ್‌ ಕಂಪನಿಗಳಿವೆ: ಶಾಸಕ ಖಾದರ್‌

ಮಂಗಳೂರು: ರಾಜ್ಯ ಸರಕಾರ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ತಂದಿದೆ. ಆದರೆ ಕರ್ನಾಟಕ ರಾಜ್ಯದ ಗಡಿ ಪ್ರದೇಶದಲ್ಲಿ 15 ರಿಂದ 16 ಬೀಫ್‌ ಎಕ್ಸ್‌ಪೋರ್ಟ್‌ ಕಂಪನಿಗಳು ಇವೆ.

ಅದರ ಲೈಸೆನ್ಸ್‌ ಯಾಕೆ ಕ್ಯಾನ್ಸಲ್‌ ಮಾಡಿಲ್ಲ ಎಂದು ಶಾಸಕ ಯು.ಟಿ ಖಾದರ್‌ ಪ್ರಶ್ನಿಸಿದ್ದಾರೆ.


ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಗೋಹತ್ಯೆ ಕಾಯಿದೆಗೆ ಮಂಡಿಸುವ ವೇಳೆ ಸಚಿವ ಕೈಯಲ್ಲಿ ಕರಡು ಪ್ರತಿ ಸಹ ಇರಲಿಲ್ಲ. ಅರ್ಧ ಗಂಟೆ ನಂತರ ಪ್ರಿಂಟ್‌ ಪ್ರತಿ ಬಂತು.

ಕರ್ನಾಟಕದ ಗಡಿ ಜಿಲ್ಲಾ ಭಾಗಗಳಾದ ಬೆಳಗಾವಿ, ಸೂಲಾಪುರ ಗಡಿಯಲ್ಲಿ 15ಕ್ಕೂ ಹೆಚ್ಚಿನ ಬೀಫ್‌ ಎಕ್ಸ್‌ಪೋರ್ಟ್‌ ಕಂಪನಿಗಳಿವೆ. ಅದರ ಲೆಸೆನ್ಸ್‌ ಕಟ್‌ ಮಾಡುತ್ತೇವೆಂದು ಯಾಕೆ ಅ ಕರಡು ಪ್ರತಿಯಲ್ಲಿ ಉಲ್ಲೇಖಿಸಿಲ್ಲ.

ಗೋವಾ ಮಂತ್ರಿ ಹೇಳುತ್ತಾರೆ ನಾವು ಕರ್ನಾಟಕದಿಂದ ಇಷ್ಟು ಟನ್‌ ಬೀಫ್‌ ತರುತ್ತೇವೆ ಎಂದು ಹೇಳಿಕೆ ನೀಡಿದ್ದರು ಎಂದು ಖಾದರ್‌ ಹೇಳಿದರು..

ಸಿಡಿಎಸ್‌ ಬಿಪಿನ್‌ ರಾವತ್‌ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದವರು ದೇಶದ್ರೋಹಿಗಳು.

ಅಂಥವರನ್ನು ಬಂಧಿಸಿ ಇಡೀ ದೇಶಕ್ಕೆ ಅವರ ಮುಖ ತೋರಿಸಿ, ಗಡಿಪಾರು ಮಾಡಿ ಎಂದರು.

ರಾಜ್ಯ ಸರಕಾರದ ವಿರುದ ಕೇಂದ್ರಕ್ಕೆ ಗುತ್ತಿಗೆದಾರರು ಪತ್ರ ಬರೆಯುತ್ತಾರೆ, ಅತ್ತ ಕಡೆ ಬಿಟ್‌ ಕಾಯಿನ್‌ ಹಗರಣ ನಡೆದಿದೆ. ಈ ಎಲ್ಲಾ ಸರಕಾರದ ವೈಫಲ್ಯವನ್ನು ದಿಕ್ಕುತಪ್ಪಿಸಲು ಮತಾಂತರ ಕಾಯಿದೆ ತಂದಿದ್ದಾರೆ ಎಂದರು.

ಬಲವಂತದ ಮತಾಂತರಕ್ಕೆ ದೇಶದಲ್ಲಿ ಈಗಾಗಲೇ ಒಂದು ಕಾನೂನಿದೆ. ಬಲವಂತದ ಮತಾಂತರ ಸಲ್ಲದು ಎಂದರು.

LEAVE A REPLY

Please enter your comment!
Please enter your name here

Hot Topics

ಕುಕ್ಕೆ ಕ್ಷೇತ್ರದಲ್ಲಿ 116 ಮಂದಿ ಭಕ್ತರಿಂದ ಎಡೆಮಡೆ ಸ್ನಾನ..

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಪ್ರಯುಕ್ತ 116 ಮಂದಿ ಭಕ್ತರಿಂದ ಇಂದು ಎಡೆಮಡೆ ಸ್ನಾನ ನಡೆಯಿತು.ದೇವರ ನೈವೇದ್ಯದ ಮೇಲೆ...

ಬಂಟ್ವಾಳದಲ್ಲಿ ಪಿಕಪ್ ವಾಹನಕ್ಕೆ ಗುದ್ದಿದ ಕಾರು..

ಬಂಟ್ವಾಳ: ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿ ಗೋಡೆ ಜರಿದು ಬಿದ್ದಂತಹ ಘಟನೆ ದಕ್ಷಿಣ ಕನ್ನಡ...

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...