Connect with us

    LATEST NEWS

    ತಿಂಗಳಿಗೆ 13 ಸಾವಿರ ಸಂಬಳ; ಗೆಳತಿಗೆ 4BHK ಫ್ಲ್ಯಾಟ್‌, ಕಾರ್‌ ಗಿಫ್ಟ್‌ ಕೊಟ್ಟ ಗೆಳೆಯ

    Published

    on

    ಮಂಗಳೂರು/ಮಹರಾಷ್ಟ್ರ : ತಿಂಗಳಿಗೆ 13 ಸಾವಿರ ಸಂಬಳ ಪಡೆಯುವ ಗುತ್ತಿಗೆ ನೌಕರನೊಬ್ಬ ಸರಕಾರಕ್ಕೆಯೇ ಪಂಗನಾಮ ಹಾಕಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿರು ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.

    ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿನಂತೆ ಇಲ್ಲೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದ್ದು, ಗುತ್ತಿಗೆ ನೌಕರನೊಬ್ಬ ಸರಕಾರಕ್ಕೆಯೇ ಪಂಗನಾಮ ಹಾಕಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. ಈತ ಸರ್ಕಾರಿ ಇಲಾಖೆಯ ಹೆಸರಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಇಂಟರ್‌ನೆಟ್ ಬ್ಯಾಂಕಿಂಗ್‌ ಮೂಲಕ ಬರೋಬ್ಬರಿ 21 ಕೋಟಿ ರೂ. ಲೂಟಿ ಮಾಡಿ, ಆ ಹಣದಿಂದ ಗೆಳತಿಗೆ 4BHK ಫ್ಲ್ಯಾಟ್‌, ಐಷಾರಾಮಿ ಕಾರ್‌ ಗಿಫ್ಟ್‌ ಮಾಡಿದ್ದಾನೆ. ಆರೋಪಿ ಸರಕಾರಕ್ಕೆ ಟೋಪಿ ಹಾಕಿ ಬರೋಬ್ಬರಿ 21 ಕೋಟಿ ರೂ. ಹಣವನ್ನು ಲೂಟಿ ಮಾಡಿದ್ದಾನೆ. ಈತ ಛತ್ರಪತಿ ಸಂಭಾಜಿನಗರದ ಕ್ರೀಡಾ ಇಲಾಖೆಯ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. 23 ರ ಹರೆಯದ ಹರ್ಷಲ್ ಕುಮಾರ್ ಕ್ಷೀರಸಾಗರ್ ತನ್ನ ಸಹದ್ಯೋಗಿ ಯಶೋದಾ ಶೆಟ್ಟಿ ಹಾಗೂ ಆಕೆಯ ಪತಿ ಬಿಕೆ ಜೀವನ್ ಜೊತೆ ಸೇರಿ ಈ ವಂಚನೆ ಮಾಡಿದ್ದಾನೆ.

    ಪ್ರಕರಣ ಬುಯಲಾದದ್ದು ಹೇಗೆ ?

    ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಹರ್ಷಲ್‌ ಕುಮಾರ್‌ ತಿಂಗಳಿಗೆ 13 ಸಾವಿರ ಸಂಬಳ ಪಡೆಯುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಅವನ ಜೀವನಶೈಲಿ ಚೇಂಜ್‌ ಆದದ್ದನ್ನು ಗಮನಿಸಿ ಸಹದ್ಯೋಗಿಗಳು ಶಾಕ್‌ ಆಗಿದ್ದಾರೆ. ನಂತರ ಹೇಗೋ ಆರೋಪಿಯ ವಂಚನೆ ಬಯಲಾಗಿದ್ದು, ಸುದ್ದಿ ತಿಳಿದು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕ್ರೀಡಾ ಇಲಾಖೆಯ ನಕಲಿ ಬ್ಯಾಂಕ್‌ ಖಾತೆಯನ್ನು ಸೃಷ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾನೆ. ಹಳೆಯ ಲೆಟರ್‌ಹೆಡ್ ಬಳಸಿಕೊಂಡು ಇಲಾಖೆಗೆ ಸಂಬಂಧಿಸಿದ ಇಮೇಲ್‌ ವಿಳಾಸವನ್ನು ಬದಲಾಯಿಸುವಂತೆ ವಿನಂತಿಸಿದ್ದಾನೆ. ನಂತರ ಈ ಇಮೇಲ್‌ ವಿಳಾಸವನ್ನು ಕ್ರೀಡಾ ಇಲಾಖೆಯ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡಿ ಅದರ ಮೂಲಕ ಒಟಿಪಿ ಮತ್ತು ಬ್ಯಾಂಕ್‌ ವಹಿವಾಡಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಚೆಕ್‌ಗಳಿಗೆ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಸಹಿಯನ್ನು ಕೂಡಾ ಹಾಕಿಸಿಕೊಂಡಿದ್ದ. ಮುಂದಿನ ಹಂತವಾಗಿ, ಹರ್ಷಲ್ ಕ್ರೀಡಾ ಇಲಾಖೆಯ ನಕಲಿ ಖಾತೆಯನ್ನು ಸೃಷ್ಟಿಸಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿ ಜುಲೈ 1 ರಿಂದ ಡಿಸೆಂಬರ್ 7 ರ ವೆರಗೆ ಆತ 13 ಬ್ಯಾಂಕ್ ಖಾತೆಗಳಿಗೆ 21.6 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

    ನಂತರ ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಹಣಕಾಸಿನ ಅವ್ಯವಹಾರ ನಡೆಯುತ್ತಿದೆ ಎಂದು ಗಮನಿಸಿ ಪೊಲೀಸ್‌ ಠಾಣೆಯನ್ನು ದೂರು ನೀಡಿದಾಗ, ಪೊಲೀಸ್ ತನಿಖೆಯಲ್ಲಿ ಹರ್ಷಲ್‌ನ ವಂಚನೆ ಬಯಲಾಗಿದೆ. ಲೂಟಿ ಮಾಡಿದ ಹಣದಲ್ಲಿ 1.2 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರು, 1.3 ಕೋಟಿ ಮೌಲ್ಯದ ಎಸ್ ಯುವಿ ಹಾಗೂ 32 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಬೈಕ್ ಖರೀದಿಸಿದ್ದಾನೆ. ಜೊತೆಗೆ ಈತ ತನ್ನ ಗೆಳತಿಗೆ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ ಐಷಾರಾಮಿ 4 BHK ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದನು ಹಾಗೂ ಗೆಳತಿಗಾಗಿ ವಜ್ರದ ಕನ್ನಡಕವನ್ನು ಆರ್ಡರ್ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೂರು ದಾಖಲಾದ ಬಳಿಕ ಹರ್ಷಲ್ ಪರಾರಿಯಾಗಿದ್ದು, ಪೊಲೀಸರು ಆತನಿಗೆ ಈ ವಂಚನೆಯಲ್ಲಿ ಸಹಕರಿಸಿದ ಯಶೋದಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ ಅವರನ್ನು ಬಂಧಿಸಿದ್ದಾರೆ. ಈ ಭಾರಿ ವಂಚನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪ್ರಮುಖ ಆರೋಪಿ ಹರ್ಷಲ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

    DAKSHINA KANNADA

    ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!

    Published

    on

    ಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಅವರೊಂದಿಗೆ ನಂಟು ಬೆಸೆದುಕೊಂಡಿರುವ ಭಾರತೀಯ ನೋಟುಗಳಿಗೆ ಭಾರಿ ಬೇಡಿಕೆ ಬಂದಿದೆ. ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳನ್ನು ಜನರು ಆನ್‌ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ.

    ದೇಶದಲ್ಲಿ ನೋಟುಗಳ ಮೇಲೆ ಸಹಿ ಮಾಡಿರುವ ಏಕೈಕ ಪ್ರಧಾನಿ ಮನಮೋಹನ್ ಸಿಂಗ್. ಅದರಲ್ಲೂ ಒಂದು ರೂಪಾಯಿಂದ ಹಿಡಿದು ಎಲ್ಲಾ ಮುಖಬೆಲೆಯ ನೋಟುಗಳ ಮೇಲೆ ಸಹಿ ಮಾಡಿದ ಏಕೈಕ ವ್ಯಕ್ತಿ ಕೂಡಾ ಮನಮೋಹನ್ ಸಿಂಗ್. 1976 ರಲ್ಲಿ ದೇಶದ ಹಣಕಾಸು ಕಾರ್ಯದರ್ಶಿಯಾಗಿದ್ದ ಮನಮೋಹನ್ ಸಿಂಗ್ ಅವರು 1982 ರಿಂದ 1985 ರ ತನಕ ಭಾರತೀಯ ರಿಸರ್ವ ಬ್ಯಾಂಕ್‌ ನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.


    1976 ರಲ್ಲಿ ಹಣಕಾಸು ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು ಒಂದು ರೂಪಾಯಿ ಮುಖಬೆಲೆಯ ನೋಟುಗಳಿಗೆ ಸಹಿ ಮಾಡಿದ್ದರು. ಈ ಒಂದು ರೂಪಾಯಿಗಳ ನೋಟಿನ ಮೇಲೆ ಸಹಿ ಮಾಡುವ ಅಧಿಕಾರ ಕೇವಲ ಹಣಕಾಸು ಕಾರ್ಯದರ್ಶಿಗೆ ಮಾತ್ರ ಇರುತ್ತದೆ. ಇದಾದ ಬಳಿಕ 1982 ರಲ್ಲಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆದ ಮನಮೋಹನ್ ಸಿಂಗ್ ಅವರು ಗವರ್ನರ್ ಗೆ ಇರುವ ಅಧಿಕಾರದಂತೆ ಉಳಿದ ಎಲ್ಲಾ ಮುಖಬೆಲೆಯ ಕರೆನ್ಸಿಗೆ ಸಹಿ ಮಾಡಿದ್ದರು.


    ಡಿಸೆಂಬರ್ 26 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟಿಗೆ ಈಗ ಬೇಡಿಕೆ ಬಂದಿದೆ. ಆನ್‌ಲೈನ್‌ನಲ್ಲಿ ಪುರಾತನ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ವೇದಿಕೆಯಾದ ಬಿಡ್ ಕಯೂರಿಯೋಸ್‌ ನಲ್ಲಿ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಒಂದು ರೂಪಾಯಿ ಮುಖಬೆಲೆಯ ನೋಟುಗಳು ನೂರು ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

    Continue Reading

    LATEST NEWS

    ವಿಂಡೀಸ್ ವಿರುದ್ಧ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತೀಯ ಮಹಿಳಾ ತಂಡ

    Published

    on

    ಮಂಗಳೂರು/ವಡೋದರ : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದ ಭಾರತ, ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಶುಕ್ರವಾರ(ಡಿ.27) ಹೊಸ ದಾಖಲೆ ಬರೆದಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್  38.5 ಓವರ್ ಗಳಲ್ಲಿ ಕೇವಲ 162 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 6 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್‌ ತಂಡವನ್ನು ಕಟ್ಟಿ ಹಾಕಿದರು.

    ವೆಸ್ಟ್ ಇಂಡೀಸ್ ನೀಡಿದ 163 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು.  ಪ್ರತಿಕಾ ರಾವಲ್ 18, ನಾಯಕಿ ಹರ್ಮನ್ ಪ್ರೀತ್ ಕೌರ್ 32, ರೋಡ್ರಿಗಸ್ 29, ದೀಪ್ತಿ ಶರ್ಮಾ ಅಜೇಯ 39, ರಿಚಾ ಘೋಶ್ 23 ರನ್ ಗಳಿಸುವ ಮೂಲಕ 28.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಗೆದ್ದು ಬೀಗಿದರು.

    ಇದನ್ನೂ ಓದಿ : ನಿನ್ನೆ ಚಪ್ಪಲಿ ಧರಿಸಲ್ಲ ಎಂಬ ಶಪಥ… ಇಂದು ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡ ಅಣ್ಣಾಮಲೈ

    ಈ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವಿಪ್ ಮಾಡಿತು. ದೀಪ್ತಿ ಶರ್ಮಾ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

    Continue Reading

    LATEST NEWS

    ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ವಿರುದ್ಧ ಗುಡುಗಿದ ಹರೀಶ್ ಪೂಂಜಾ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಬೆಳ್ತಂಗಡಿ ಶಾಸಕರ ವಿರುದ್ಧ ನೀಡಿದ ಹೇಳಿಕೆ ಈಗ ಅಸೋಸಿಯೇಷನ್‌ಗೆ ತಿರುಗುಬಾಣವಾಗಿದೆ. ಜಿಲ್ಲೆಯ ಕಬಡ್ಡಿ ಅಸೋಸಿಯೇಷನ್ ಬಗ್ಗೆ ಮಾತನಾಡುವ ಶಾಸಕ ಹರೀಶ್ ಪೂಂಜಾ ಅವರ ವಿರುದ್ದ ಪತ್ರಿಕಾಗೋಷ್ಠಿ ನಡೆಸಿದ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹಲವು ಆರೋಪದ ಜೊತೆ ಸವಾಲು ಕೂಡಾ ಎಸೆದಿದ್ದರು. ಇದೀಗ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿಕೆಗೆ ಶಾಸಕ ಹರೀಶ್ ಪೂಂಜಾ ತಿರುಗೇಟು ನೀಡಿದ್ದಾರೆ.

    ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರ ಹಾಗೂ ಕಬಡ್ಡಿ ಆಟಗಾರರಿಗೆ ಆಗುತ್ತಿದ್ದ ಅನ್ಯಾಯಗಳನ್ನು ದಾಖಲೆ ಸಮೇತ ಮಾದ್ಯಮದ ಮುಂದೆ ಇಟ್ಟಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಹರೀಶ್ ಪೂಂಜಾ ತಾನು ರಾಜ್ಯದ ಕಬಡ್ಡಿ ಆಟಗಾರರ ಹಿತಕ್ಕಾಗಿ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ ಎಂದು ಹೇಳಿದ್ದಾರೆ. 2012 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಜಿಲ್ಲೆಯ ಆಟಗಾರರಿಗೆ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

    2009 ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಕೇಶ್ ಮಲ್ಲಿ ಸಂಸ್ಥೆಯ ಸಧಸ್ಯತ್ವವನ್ನು 2012 ರಲ್ಲಿ ಪಡೆದುಕೊಂಡು ಅಧ್ಯಕ್ಷರಾಗಿದ್ದಾರೆ. ಅದಾದ ಬಳಿಕ ನಿರಂತರ 2024 ರ ತನಕವೂ ಅಧಿಕಾರದಲ್ಲಿದ್ದು, ಎಷ್ಟು ಆಟಗಾರರನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ್ದಾರೆ ಎಂಬ ಲೆಕ್ಕ ನೀಡಲಿ ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ ದ.ಕ. ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರಗಳನ್ನು ದಾಖಲೆ ಸಮೇತ ವಿವರಿಸಿದ್ದಾರೆ.

    ಅವ್ಯವಹಾರದ ಕುರಿತಾದ ದೂರಿನ ಮೇಲೆ ತನಿಕೆ ನಡೆಸಿದ ತನಿಖಾಧಿಕಾರಿಗಳು ಅಸೋಸಿಯೇಷನ್‌ಗೆ ಆಡಳಿತ ಅಧಿಕಾರಿ ನೇಮಕ ಮಾಡಲು ಶಿಫಾರಸು ಮಾಡಿದ್ದು, ಚುನಾವಣೆ ನಡೆಸದೆ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ, ಚುನಅವಣೆ ಗೆಲ್ಲಲು ಅನರ್ಹ ಸದಸ್ಯರ ನೊಂದಣಿ, ಸದಸ್ಯ ಹಣವನ್ನು ಖಾತೆಗೆ ಹಾಕದೆ ವಂಚನೆ, ನಕಲಿ ದಾಖಲೆಯ ಸೃಷ್ಟಿ , ನಕಲಿ ಸಹಿ ಬಳಕೆ ಆರೋಪ ಹೀಗೆ ಹಲವಾರು ಲೋಪಗಳನ್ನು ತನಿಕಾ ಅಧಿಕಾರಿ ಗುರುತಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ಗೆ ಸರ್ಕಾರ ತಕ್ಷಣ ಆಡಳಿತ ಅಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ಜಿಲ್ಲೆಯ ಕಬಡ್ಡಿ ಆಟಗಾರರ ಹಿತ ಕಾಪಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ಸಹಕಾರಿ ಸಚಿವರಿಗೆ ಒತ್ತಾಯಿಸಿದ್ದಾರೆ.

    Continue Reading

    LATEST NEWS

    Trending