ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ತತ್‌ಕ್ಷಣ ಜಾರಿಗೆ ಬರುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅವರನ್ನು ಹಿಂಪಡೆಯಲಾಗಿದೆ.
ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ನೂತನ ಆಯುಕ್ತರಾಗಿ ಸರಕಾರ ನೇಮಕ ಮಾಡಿದೆ.
ಮಂಗಳೂರು/ಬೆಂಗಳೂರು: ಕುಡಿದು ಮನೆಗೆ ಬಂದು ಗಲಾಟೆ ಮಾಡಿದಾಗ ಬುದ್ಧಿವಾದ ಹೇಳಿದ ತಂದೆಗೆ ಮಗನು ರಾ*ಡ್‌ನಿಂದ ಹ*ಲ್ಲೆ ನಡೆಸಿ ಹ*ತ್ಯೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರ 4ನೇ ಬ್ಲಾಕ್‌ನಲ್ಲಿ ದಲ್ಲಿ ನಡೆದಿದೆ.
ರಘು (29) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜ.10ರಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದು ತಂದೆ ಜಿ.ರಾಮಚಂದ್ರ (59) ಜತೆಗೆ ಜಗಳ ತೆಗೆದು ಕೊಂ*ದು ಸ್ಥಳದಿಂದ ಪರಾರಿಯಾಗಿದ್ದನು.
ಮೃ*ತ ರಾಮಚಂದ್ರ ಕಳೆದ 30 ವರ್ಷಗಳಿಂದ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮದ್ಯದ ದಾಸನಾಗಿದ್ದ ರಘು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮದ್ಯ ಸೇವಿಸಲು ಹಣ ಕೊಡುವಂತೆ ತಂದೆ-ತಾಯಿಗೆ ನಿತ್ಯವೂ ತೊಂದರೆ ನೀಡುತ್ತಿದ್ದ. ಈತನ ಕಿರುಕುಳದಿಂದ ತಂದೆ-ತಾಯಿ ರೋಸಿ ಹೋಗಿದ್ದರು. ಜ.10ರಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ರಘು, ತಂದೆ ರಾಮಚಂದ್ರ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ರಾಮಚಂದ್ರ ಅವರು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ರಘು ಕಬ್ಬಿಣದ ರಾಡ್‌ನಿಂದ ತಂದೆ ರಾಮಚಂದ್ರ ಮೇಲೆ ಮನಬಂದಂತೆ ಹ*ಲ್ಲೆ ಮಾಡಿದ್ದಾನೆ. ಹ*ಲ್ಲೆಯಿಂದ ರಾಮಚಂದ್ರ ನೆಲಕ್ಕೆ ಕುಸಿದು ಬಿದ್ದರೂ ಬಿಡದ ರಘು ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊ*ಡೆದ ಪರಿಣಾಮ ರಾಮಚಂದ್ರ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ಬಳಿಕ ಆರೋಪಿ ರಘು ಸ್ಥಳದಿಂದ ಪರಾರಿಯಾಗಿದ್ದ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ರಾಜಾಜಿನಗರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿ ರಘುನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಾಪು : ಸೇಲ್ ಮಾಡಿದ ಬಸ್ಸನ್ನು ತಾವೇ ಕದ್ದಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿ ತಂದೆ, ಮಗನ ವಿರುದ್ಧ ದೂರು ದಾಖಲಾಗಿತ್ತು. ಇದೀಗ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳಾಗಿದ್ದು, ಸುಳ್ಳು ದೂರು ದಾಖಲಿಸಲಾಗಿದೆ ಎಂದು ವಿದೇಶದಲ್ಲಿರುವ ಬಸ್ ಮಾಲಕ ಸಮೀರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಬಸ್ಸನ್ನು ಕದ್ದಿಲ್ಲ. ನನ್ನ ಬಸ್ಸನ್ನು ನಾನು ವಾಪಾಸ್ ಪಡೆದುಕೊಂಡಿದ್ದೇನೆ. ಅಲ್ಲದೆ ನನಗೆ ಬಸ್ಸಿನ ಎಲ್ಲ ಮೊತ್ತ ಇದುವರೆಗೂ ಸಿಕ್ಕಿಲ್ಲ ಎಂದು ಸಮೀರ್ ಹೇಳಿದ್ದಾರೆ.
ಏನಿದು ಬಸ್ ಕಥೆ?
ತಮ್ಮ ಬಸ್ಸನ್ನು ತುಮಕೂರಿನ ಮೊಹಮ್ಮದ್ ಗೌಸ್ ಎಂಬವರಿಗೆ ಮಾರಾಟ ಮಾಡಲಾಗಿತ್ತು. ಅದನ್ನು 9,50,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಮೊಹಮ್ಮದ್ ಗೌಸ್ ಅವರು ತಮಗೆ ಚೆಕ್ ಮುಖಾಂತರ 9.50 ಲಕ್ಷ ಪಾವತಿಸಿದ್ದರು. ಆದರೆ ಈ ನಡುವೆ ನಗದೀಕರಣಕ್ಕೆ ಚೆಕ್ ಬ್ಯಾಂಕಿಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಅಲ್ಲದೆ ಅವರು ಫೋನ್ ಪೇ ಮುಖಾಂತರ 2.26 ಲಕ್ಷ ಹಾಕಿದ್ದಾರೆ. ಒಂದು ಲಕ್ಷ ನಗದು ಹಣ ಕೊಟ್ಟಿದ್ದಾರೆ. ಬಳಿಕ ನನಗೆ ಸೇರಬೇಕಾದ ಹಣವನ್ನು ಅವರು ಕೊಟ್ಟಿಲ್ಲ. ಆರು ತಿಂಗಳಾದರೂ ಹಣ ಬಂದಿಲ್ಲ. ಹೀಗಾಗಿ ಹಣ ಕೇಳಿದಾಗ ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಅಂತಿದ್ದರು. ಈ ನಡುವೆ ಅವರು ಆರು ತಿಂಗಳ ಕಾಲ ಬಸ್ಸನ್ನು ತುಮಕೂರಿನಲ್ಲಿ ಬಳಸಿದ್ದಾರೆ. ದಾಖಲೆ ಇಲ್ಲದೆ ಬಸ್ ಓಡಿಸಬೇಡಿ ಎಂದರೂ ಕೇಳಿಲ್ಲ. ನನಗೆ ಬೆದರಿಕೆ ಹಾಕಿದ್ದರಿಂದ ಅಲ್ಲದೆ ಹಣವನ್ನೂ ಪಾವತಿಸದೇ ಇದ್ದಿದ್ದರಿಂದ ಬಸ್ಸನ್ನು ಮರಳಿ ವಾಪಾಸ್ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೌಸ್ ಆರೋಪ ಏನು?
ತುಮಕೂರಿನ ನಿವಾಸಿ , ಮೊಹಮ್ಮದ್ ಗೌಸ್ ಎಂಬವರು ಸ್ನೇಹಿತರಲ್ಲಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದಾಗ ಒಎಲ್‌ಎಕ್ಸ್ ಮೂಲಕ ಉಡುಪಿಯ ಕಾಪುವಿನ ಸಮೀರ್ ಅವರ ಬಳಿ ಸೆಕೆಂಡ್ ಹ್ಯಾಂಡ್ ಬಸ್ ಇರುವ ಮಾಹಿತಿ ಪಡೆದುಕೊಂಡಿದ್ದರು. ಸಮೀರ್ ಅವರನ್ನು ಸಂಪರ್ಕಿಸಿ ಬಸ್ ಖರೀದಿಗೆ ಮಗ ಸಿದ್ದೀಕ್ ಹಾಗೂ ಸ್ನೇಹಿತ ಜಾವೇದ್ ಜೊತೆಯಲ್ಲಿ ಕಾಪುವಿನ ಮಲ್ಲಾರ್ ಎಂಬಲ್ಲಿಗೆ ಬಂದಿದ್ದರು.
ಅಲ್ಲಿ ಸಮೀರ್ ಇವರಿಗೆ ಬಸ್ ತೋರಿಸಿದ್ದು, ದಾಖಲೆ ಪತ್ರ ಮತ್ತೆ ಕೊಡುವುದಾಗಿ ಹೇಳಿ ಎರಡು ಲಕ್ಷ ಮುಂಗಡ ಪಡೆದುಕೊಂಡಿದ್ದು, ಬಾಕಿ ಹಣವನ್ನು ಹದಿನೈದು ದಿನಗಳಲ್ಲಿ ಪಡೆದುಕೊಂಡಿದ್ದ. ಆದ್ರೆ, ತುಮಕೂರಿನಲ್ಲಿ ನಿಲ್ಲಿಸಿದ ಬಸ್ಸನ್ನು ಮತ್ತೆ ಉಡುಪಿಗೆ ತಂದಿದ್ದಾರೆ ಎಂದು ಆರೋಪಿಸಿದ್ದರು. ತಂದೆ ಮಗ ಇಬ್ಬರೂ ಸೇರಿ ವಂಚಿಸಿದ್ದಾಗಿ ಕಾಪು ಠಾಣೆಗೆ ಗೌಸ್ ದೂರು ನೀಡಿದ್ದರು.