Connect with us

    LATEST NEWS

    ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ

    Published

    on

    ಮುಂಬೈ: ಮಹಾರಾಷ್ಟ್ರದಲ್ಲಿ ರೈಲು ದುರಂತ ಸಂಭವಿಸಿ 13 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಈ ರೈಲು ದುರಂತಕ್ಕೆ ಟೀ ಮಾರುವವನ ಯಡವಟ್ಟೇ ಕಾರಣ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಜಲಗಾಂವ್ ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣ, ಆತನಿಂದಲೇ 13 ಮಂದಿ ಬಲಿಯಾಗಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

    ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀ ಮಾರುವವನಿಂದಲೇ ಜಲಗಾಂವ್ ರೈಲು ದುರಂತ ಸಂಭವಿಸಿದೆ. ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌  ರೈಲಿನಲ್ಲಿ ಪ್ಯಾಂಟ್ರಿಯಿಂದ ಬಂದ ಟೀ ಮಾರುವವನೊಬ್ಬ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ಕೂಗಿದ್ದಾನೆ. ಇದನ್ನು ಕೇಳಿಸಿಕೊಂಡ ಉತ್ತರ ಪ್ರದೇಶದ ಶ್ರಾವಸ್ತಿಯ ಮೂಲದ ಇಬ್ಬರು ಅಲ್ಲಿದ್ದ ಇತರರಿಗೂ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ತಮ್ಮ ರಕ್ಷಣೆಗಾಗಿ ರೈಲಿನ ಅಲಾರಾಂ ಚೈನ್‌ನ್ನು ಎಳೆದು ರೈಲನ್ನು ನಿಲ್ಲಿಸಿದ್ದಾರೆ.

    ರೈಲಿನಿಂದ ಇಳಿದ ಪ್ರಯಾಣಿಕರು ಪಕ್ಕದ ರೈಲು ಹಳಿಯ ಮೇಲೆ ನಿಂತಿದ್ದಾರೆ. ಇದೇ ವೇಳೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರು ನಿಂತಿದ್ದ ಹಳಿಯ ಮೇಲೆ ಬಂದಿದೆ. ಪರಿಣಾಮ ಹಳಿಯ ಮೇಲಿಂದ ಇಳಿಯದೇ ಅಲ್ಲೇ ನಿಂತಿದ್ದವರ ಪೈಕಿ 13 ಮಂದಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಬೆಂಕಿಯಿಂದಾಗಿ ಅಪಘಾತ ಸಂಭವಿಸಿದೆ ಎನ್ನುವುದು ಸುಳ್ಳು, ಸದ್ಯ ಮೃತರ ಪೈಕಿ 10 ಜನರನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

    ರೈಲ್ವೆ ಇಲಾಖೆ ಮೃತರ ಕುಟಂಬಸ್ಥರಿಗೆ 1.5 ಲಕ್ಷ ರೂ. ಪರಿಹಾರ ಘೋಷಿಸಿದೆ. ಸಂಭವಿಸಿದ ಅಪಘಾತದಲ್ಲಿ ರೈಲ್ವೆಯಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ. 4.45ಕ್ಕೆ ಪುಷ್ಪಕ್ ಎಕ್ಸ್ಪ್ರೆಸ್ ನಿಂತ 20 ನಿಮಿಷಗಳ ಬಳಿಕ 5.05ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್‌ ಬಂದಿದೆ. ಆದರೆ ಜನರು ಹಳಿ ಬಿಟ್ಟು ಕದಡದ ಕಾರಣ ದುರಂತ ಆಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

    BELTHANGADY

    ಒಂದೇ ವರ್ಷದಲ್ಲಿ ಧಕ್ಷ ಅಧಿಕಾರಿಯ ಎತ್ತಂಗಡಿ..!

    Published

    on

    ಪುತ್ತೂರಿಗೆ 2023 ರ ಡಿಸೆಂಬರ್ ತಿಂಗಳಲ್ಲಿ ವರ್ಗಾವಣೆಯಾಗಿ ಬಂದಿದ್ದ IAS ಅಧಿಕಾರಿಯನ್ನು ದಿಢೀರ್ ಆಗಿ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಪಾವಧಿಯಲ್ಲೇ ತನ್ನ ಕಾರ್ಯದ ಮೂಲಕ ಜನಮೆಚ್ಚುಗೆ ಪಡೆದುಕೊಂಡಿದ್ದ ಜುಬಿನ್ ಮೊಹಾಪಾತ್ರ ಅವರ ವರ್ಗಾವಣೆ ಜನರಿಗೆ ಶಾಕ್ ನೀಡಿದೆ.

    ಪುತ್ತೂರು,ಸುಳ್ಯ,ಬೆಳ್ತಂಗಡಿ ಹಾಗು ಕಡಬ ತಾಲೂಕಿಗೆ ಪುತ್ತೂರು ಉಪ ವಿಭಾಗಾಧಿಕಾರಿಯಾಗಿದ್ದ ಜುಬೀನ್ ಮೊಹಾಪಾತ್ರ IAS ಅವರು ತಮ್ಮ ಕರ್ತವ್ಯದ ಮೂಲಕವೇ ಗಮನ ಸೆಳೆದವರು. IAS ಜೊತೆಗೆ IPS ಕೂಡಾ ಮಾಡಿರುವ ಇವರು ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದರು. ಕೇವಲ ಒಂದು ವರ್ಷ ಒಂದು ತಿಂಗಳಲ್ಲೇ ಅವರನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರ ಹುದ್ದೆಯಿಂದ ದಾರವಾಡ ಸಿಟಿ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.

    ಈ ವರ್ಗಾವಣೆಯ ಹಿಂದೆ ರಾಜಕೀಯ ಪ್ರಭಾವ ಕೆಲಸ ಮಾಡಿದೆ ಎಂಬ ಅನುಮಾನ ಮೂಡಿದೆ.

    Continue Reading

    FILM

    ಖ್ಯಾತ ಬಾಲಿವುಡ್ ನಟಿಯಿಂದ ನಾಗಾದೀಕ್ಷೆ..! ಮಹಾಮಂಡಲೇಶ್ವರಿಯಾಗಿ ಬದಲಾದ ಬಾಲಿವುಡ್ ಹಾಟ್ ಸ್ಟಾರ್..!

    Published

    on

    90 ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ ಈಗ ನಾಗಾಸಾದ್ವಿಯಾಗಿ (ಮಾಹಾಮಂಡಲೇಶ್ವರಿಯಾಗಿ)ದೀಕ್ಷೆ ಸ್ವೀಕರಿಸಿದ್ದಾರೆ. ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಕಿನ್ನರ ಅಖಾಡದಲ್ಲಿ ಈ ದೀಕ್ಷೆ ಸ್ವೀಕರಿಸುವ ಮೂಲಕ ಮಮತಾ ನಂದಗಿರಿ ಮಹಾಮಂಡಲೇಶ್ವರಿಯಾಗಿ ಬದಲಾಗಿದ್ದಾರೆ.

     

    1993 ರಲ್ಲಿ ಬಾಲಿವುಡ್ ಸಿನೆಮಾಗೆ ಎಂಟ್ರಿಕೊಟ್ಟಿದ್ದ ಮಮತಾ ಕುಲಕರ್ಣಿ ಬ್ರಾಹ್ಮಣ ಕುಟುಂಬದಿಂದ ಬಂದವರು. ಮಾಡೆಲಿಂಗ್ ಮೂಲಕ ಸಿನೆಮಾ ಇಂಡಸ್ಟ್ರಿ ಪ್ರವೇಶಿಸಿದ ಮಮತಾ ಕುಲಕರ್ಣಿ ಹತ್ತಕ್ಕೂ ಹೆಚ್ಚು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಅಕ್ಷಯ್ ಕುಮಾರ್, ಗೋವಿಂದ್, ಅಮಿರ್ ಖಾನ್ ಸೇರಿದಂತೆ ಹಲವು ನಾಯಕರ ಜೊತೆ ನಟಿಸಿದ್ದಾರೆ. ಅಂದಿನ ಕಾಲದಲ್ಲೇ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡುತ್ತಿದ್ದ ಮಮತಾ ಕುಲಕರ್ಣಿ ಬಾಲಿವುಡ್‌ನಲ್ಲಿ ಹಾಟ್ ಸ್ಟಾರ್‌ ಆಗಿಯೇ ಗುರುತಿಸಿಕೊಂಡಿದ್ದರು. 2000ನೇ ಇಸವಿಯಲ್ಲಿ ಸಿನೆಮಾ ಇಂಡಸ್ಟ್ರಿಯಿಂದ ದೂರ ಉಳಿಯಲು ಬಯಸಿದ್ದರಾದ್ರೂ 2001 ರಲ್ಲಿ ಕೊನೆಯ ಸಿನೆಮಾದಲ್ಲಿ ನಟಿಸಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು.

    ಸಿನೆಮಾ ಇಂಡಸ್ಟ್ರಿ ಬಿಟ್ಟು ಆಧ್ಯಾತ್ಮದತ್ತ ಒಲವು ತೋರಿದ ಮಮತಾ ಕುಲಕರ್ಣಿ, ಬೋರಿವಿಲಿಯಲ್ಲಿನ ಶ್ರೀ ಚೈತನ್ಯ ಗಗನಗಿರಿ ನಾಥ ಸ್ವಾಮಿ ಬಳಿ ಸನ್ಯಾಸತ್ವ ಸ್ವೀಕರಿಸಿದ್ದರು ಎಂದು ಸ್ವತಹ ಅವರೇ ಹೇಳಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಸನ್ಯಾಸಿಯಂತೆ ಜೀವನ ಮಾಡುತ್ತಿದ್ದ 52 ವರ್ಷದ ಮಮತಾ ಕುಲಕರ್ಣಿ ಇದೀಗ ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಕುಂಭ ಮೇಳದಲ್ಲಿ ಕಿನ್ನರ ಅಖಾಡದ ಆಚಾರ್ಯ ಮಾಹಾಮಂಡಲೇಶ್ವರ್ ಲಕ್ಷ್ಮೀನಾರಾಯಣ ತ್ರಿಪಾಠಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.

    ಬಳಿಕ ಮಹಾಮಂಡಲೇಶ್ವರಿ ದೀಕ್ಷೆ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದು, ಅಖಿಲ ಭಾರತೀಯ ಅಖಾಡದ ಅಧ್ಯಕ್ಷ ರವೀಂದ್ರ ಪುರಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಮಮತಾ ಕುಲಕರ್ಣಿಗೆ ದೀಕ್ಷೆ ನೀಡಲಾಗಿದೆ.

    Continue Reading

    LATEST NEWS

    ಬ್ರಾಹ್ಮಣರಿಲ್ಲದೆ ಸಂವಿಧಾನವೇ ಇಲ್ಲ ; ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್

    Published

    on

    ಮಂಗಳೂರು/ಬೆಂಗಳೂರು : ‘ಬ್ರಾಹ್ಮಣ ಸಮುದಾಯದವರು ಭಾರತೀಯ ಸಂವಿಧಾನ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು ಎಂಬುವುದಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ತಿಳಿಸಿದರು.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಎರಡು ದಿನಗಳ ಬ್ರಾಹ್ಮಣ ಸಮಾವೇಶದಲ್ಲಿ ಮಾತನಾಡಿದ ನ್ಯಾಯಾಧೀಶರು, “ಬ್ರಾಹ್ಮಣ ಪದವನ್ನು ಜಾತಿಗಿಂತ ‘ವರ್ಣ’ ದೊಂದಿಗೆ ಸಂಯೋಜಿಸಬೇಕು. ವೇದಗಳನ್ನು ವರ್ಗೀಕರಿಸಿದ ವೇದವ್ಯಾಸ ಮೀನುಗಾರ ಮಹಿಳೆಯ ಮಗ ಆಗಿದ್ದರು. ರಾಮಾಯಣದ ಕರ್ತೃ ವಾಲ್ಮೀಕಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದ ಮಾತ್ರಕ್ಕೆ “ನಾವು (ಬ್ರಾಹ್ಮಣರು) ಅವರನ್ನು ಕೀಳಾಗಿ ನೋಡಿದ್ದೇವೆಯೇ? ಶತಮಾನಗಳಿಂದ ಶ್ರೀರಾಮನನ್ನು ಪೂಜಿಸುತ್ತಿದ್ದೇವೆ ಮತ್ತು ಅವರ ಮೌಲ್ಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ” ಎಂದು ಗರ್ವದಿಂದ ಹೇಳಿದರು.

    ಬ್ರಾಹ್ಮಣೇತರ ರಾಷ್ಟ್ರೀಯತಾವಾದಿ ಹೋರಾಟಗಳಲ್ಲಿ ತಮ್ಮ ಹಿಂದಿನ ಸಂಬಂಧವನ್ನು ಉಲ್ಲೇಖಿಸಿದ ನ್ಯಾಯಾಧೀಶರು ನ್ಯಾಯಾಂಗ ಸ್ಥಾನದ ಇತಿಮಿತಿಗಳಲ್ಲಿ ಮಾತನಾಡುತ್ತಿದ್ದಾಗಿ ತಿಳಿಸಿದರು. “ಬಿ. ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ, ಅದನ್ನು ರೂಪಿಸಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಡಾ. ಅಂಬೇಡ್ಕರ್ ಒಮ್ಮೆ ಭಂಡಾರ್ಕರ್ ಸಂಸ್ಥೆಯಲ್ಲಿ ಹೇಳಿದ್ದರು. ಸಂವಿಧಾನದ ಕರಡು ರಚನೆಯಲ್ಲಿ ಸಮಿತಿಯಲ್ಲಿದ್ದ ಏಳು ಸದಸ್ಯರಲ್ಲಿ ಮೂವರು – ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಬಿ. ಎನ್. ರಾವ್ – ಬ್ರಾಹ್ಮಣರಾಗಿದ್ದರು” ಎಂದು ಹೇಳುತ್ತಾ, ರಾಷ್ಟ್ರದ ಕಾನೂನು ಚೌಕಟ್ಟನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, “ಜನರು ಆಹಾರ ಅಥವಾ ಶಿಕ್ಷಣಕ್ಕಾಗಿ ಹೆಣಗಾಡುತ್ತಿರುವಾಗ ಇಂತಹ ದೊಡ್ಡ ಕಾರ್ಯಕ್ರಮಗಳು ಏಕೆ ಬೇಕು ಎಂದು ಹಲವರು ಕೇಳುತ್ತಾರೆ. ಆದರೆ ಸಮುದಾಯವನ್ನು ಒಟ್ಟುಗೂಡಿಸಲು ಮತ್ತು ಅದರ ಸಮಸ್ಯೆಗಳನ್ನು ಚರ್ಚಿಸಲು ಈ ಸಮಾವೇಶಗಳು ಅತ್ಯಗತ್ಯ. ಅಂತಹ ಕಾರ್ಯಕ್ರಮಗಳನ್ನು ಏಕೆ ನಡೆಸಬಾರದು?” ಎಂದು ಪ್ರಶ್ನಿಸಿದರು. ಈ ರೀತಿಯ ವಾಗ್ವಾದಗಳು ನಡೆಯುವ ಮೂಲಕ ಬ್ರಾಹ್ಮಣ ಸಮಾವೇಶ ಸಮಾರೋಪಗೊಂಡಿತು.

    Continue Reading

    LATEST NEWS

    Trending