Connect with us

LATEST NEWS

12ನೇ ತರಗತಿ ವಿದ್ಯಾರ್ಥಿಯಿಂದ ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್​ ಆವಿಷ್ಕಾರ !!

Published

on

ಮಂಗಳೂರು/ಗ್ವಾಲಿಯರ್ : ಹಲವಾರು ಸರಬರಾಜು ಸೇರಿದಂತೆ ವಿವಿಧ ಕಾರ್ಯಗಳಿಗೆ ಡ್ರೋನ್ ಬಳಕೆ ಇಂದು ಸಾಮಾನ್ಯವಾಗಿದೆ. ಆದರೆ, ಗ್ವಾಲಿಯರ್ ವಿದ್ಯಾರ್ಥಿಯೊಬ್ಬ ಆವಿಷ್ಕರಿಸಿರುವ ಡ್ರೋನ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಡ್ರೋನ್ ಕೇವಲ ವಸ್ತು ಸಾಗಣೆಯ ಡ್ರೋಣ್ ಅಲ್ಲ, ಮನುಷ್ಯರನ್ನೇ ಸಾಗಿಸುವ ಡ್ರೋನ್ ಆಗಿದೆ. ಚೀನಾ ದೇಶದ ಡ್ರೋನ್ ತಂತ್ರಜ್ಞಾನದಿಂದ ಪ್ರೇರಣೆಗೊಂಡ ವಿದ್ಯಾರ್ಥಿ ಇದನ್ನು ನಿರ್ಮಾಣ ಮಾಡಿದ್ದಾನೆ. ಸುಮಾರು 80 ಕೆ.ಜಿ ತೂಕ ಹೊಂದಿರುವ ಜನರು ಕೂಡ ಈ ಡ್ರೋನ್ ಮೂಲಕ ಹಾರಾಟ ನಡೆಸಬಹುದಾಗಿದೆ.

ಮೆಧಾಂಶ್ ತ್ರಿವೇದಿ ಎಂಬ ವಿದ್ಯಾರ್ಥಿ ಸಿಂದಿಯಾ ಶಾಲೆಯಲ್ಲಿ 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, 3.5 ಲಕ್ಷ ವೆಚ್ಚದಲ್ಲಿ ಈ ಡ್ರೋನ್ ತಯಾರಿಸಿದ್ದಾನೆ. ಇದಕ್ಕಾಗಿ ಮೂರು ತಿಂಗಳ ಕಾಲ ಶ್ರಮವಹಿಸಿ ‘ಎಂಎಲ್ಡಿಟಿ 01’ ಎಂದು ಹೆಸರಿಟ್ಟಿದ್ದಾನೆ. ‘ಚೀನಾದ ಡ್ರೋನ್ಗಳನ್ನು ನೋಡಿದ ಬಳಿಕ ಅವುಗಳಿಂದ ನಾನು ಪ್ರೇರೆಪಿತನಾದೆ. ಹಲವು ತಂತ್ರಜ್ಞಾನ ಸೇರಿದಂತೆ ಡ್ರೋನ್ ಅಭಿವೃದ್ಧಿಯಲ್ಲಿ ನನಗೆ ನನ್ನ ಶಿಕ್ಷಕರಾದ ಮನೋಜ್ ಮಿಶ್ರಾ ಪ್ರೋತ್ಸಾಹ ನೀಡಿದರು’ ಎಂದು ಮೇದಾಂಶ್ ಹೇಳಿಕೊಂಡಿದ್ದಾರೆ.

ಮನುಷ್ಯರನ್ನೇ ಹೊತ್ತೊಯ್ಯುವ ‘ಎಂಎಲ್ಡಿಟಿ 01’ :

ಎಂಎಲ್ಡಿಟಿ 01 ಡ್ರೋನ್ 45 ಹಾರ್ಸ್ಪವರ್ನಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ 6 ನಿಮಿಷಗಳ ಕಾಲ ನಿರಂತರವಾಗಿ ಹಾರಾಡಬಲ್ಲದು. 80 ಕೆಜಿ ತೂಕದವರೆಗಿನ ವ್ಯಕ್ತಿಗಳು ಇದರಲ್ಲಿ ಹಾರಾಟ ನಡೆಸಬಹುದು. ಈ ಡ್ರೋನ್ 1.8 ಮಿ ಅಗಲವಿದ್ದು, ಇದರ ಸುರಕ್ಷತಾ ದೃಷ್ಟಿಯಿಂದ ಕೇವಲ 10 ಮೀಟರ್ ಎತ್ತರದವರೆಗೆ ಮಾತ್ರ ಹಾರಾಟ ನಡೆಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಕೃಷಿ ಡ್ರೋನ್‌ಗೆ ಬಳಕೆ ಮಾಡುವ ನಾಲ್ಕು ಮೋಟರ್ ಅನ್ನು ಇದಕ್ಕೆ ಬಳಕೆ ಮಾಡಲಾಗಿದೆ.

ಕೇಂದ್ರ ಸಚಿವರು, ಇಸ್ರೋ ಮುಖ್ಯಸ್ಥರಿಂದಲೂ ಮೆಚ್ಚುಗೆ:

ಸಿಂದಿಯಾ ಶಾಲಾ ಸಂಸ್ಥಾಪನಾ ದಿನದಂದು ಈ ಡ್ರೋನ್ ಪ್ರದರ್ಶನ ಮಾಡಲಾಗಿತ್ತು. ಇದರ ಕೆಲಸ ಕಂಡ ಶಾಲಾ ಸಂಸ್ಥಾಪಕರಾದ ಜ್ಯೋತಿರಾಧಿತ್ಯ ಸಿಂದಿಯಾ ಮತ್ತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮೆಧಾಂಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಡ್ರೋನ್ಅನ್ನು ಹೈಬ್ರೀಡ್ ಮೋಡ್‌ನಲ್ಲಿ ಚಾಲನೆ ಮಾಡಲು ನಿಧಿಗಾಗಿ ವ್ಯವಸ್ಥೆ ಮಾಡುಲಾಗಿದೆ.  ಭವಿಷ್ಯದಲ್ಲಿ ಸಾಮಾನ್ಯ ಜನರಿಗೆ ಸರಕು ಸೇರಿದಂತೆ ಜನರ ಸಾರಿಗೆಗೆ ಪ್ರಯೋಜನಕಾರಿ ಡ್ರೋನ್ ಬಳಕೆ ಅಬಿವೃದ್ಧಿ ಮಾಡುವ ಇಚ್ಛೆಯನ್ನು ಗೊಂದಿರುವ ಮೆಧಾಂಶ್, ಏರ್ ಟಾಕ್ಸಿ ಮತ್ತು ಜನರಿಗೆ ಅಗ್ಗದ ದರದ ಹೆಲಿಕಾಪ್ಟರ್ ಸೇವೆ ಒದಗಿಸುವ ಹಂಬಲ ಹೊಂದಿರುವುದಾಗಿ ತಿಳಿಸಿದರು. ಮೆಧಾಂಶ್ ಅವಿಷ್ಕಾರಕ್ಕೆ ಆತನ ಶಿಕ್ಷಕ ವರ್ಗ ಕೂಡ ಸಂತಸ ವ್ಯಕ್ತಪಡಿಸಿ, ಪ್ರಶಂಸೆ ವ್ಯಕ್ತಪಡಿಸಿದೆ. “ಆತ ಹೊಸತನದ ಆವಿಷ್ಕರಿಸುವ ವಿದ್ಯಾರ್ಥಿಯಾಗಿದ್ದು, 7ನೇ ತರಗತಿಯಿಂದಲೂ ತನ್ನ ಕ್ರಿಯಾತ್ಮಕತೆಯಿಂದ ಗಮನ ಸೆಳೆದಿದ್ದಾನೆ. ಏನನ್ನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ಹಂಬಲ ಅವನಲ್ಲಿದ್ದು, ಹೊಸ ಆವಿಷ್ಕಾರದ ಬಗ್ಗೆ ಆತ ಸದಾ ಮಾಹಿತಿ ಪಡೆಯುತ್ತಾನೆ. ಇದರಿಂದ ನಮಗೂ ಕೂಡ ಗರ್ವ ಉಂಟಾಗುತ್ತದೆ” ಎಂದು ಶಿಕ್ಷಕ ಮನೋಜ್ ಮಿಶ್ರಾ ತಿಳಿಸಿದ್ದಾರೆ.

bangalore

ಆನ್ ಲೈನ್ ಗೇಮಿಂಗ್ ಹುಚ್ಚಿಗೆ ಬ*ಲಿಯಾದ ಯುವಕ !

Published

on

ಮಂಗಳೂರು/ಬೆಂಗಳೂರು: ಆನ್ ಲೈನ್ ಗೇಮಿಂಗ್ ಹುಚ್ಚು ಜಾಸ್ತಿಯಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಗೃಹಿಣಿಯರು, ಸೆಲೆಬ್ರಿಟಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿದೆ.

ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆನ್ ಲೈನ್ ಗೇಮಿಂಗ್ ನಿಂದ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿ*ಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.

ಇದನ್ನೂ ಓದಿ: ಹತ್ತು ನಿಮಿಷದಲ್ಲಿ 2.63 ಕೋಟಿಗೆ ಬ್ರಾಡ್ಮನ್ ಕ್ಯಾಪ್ ಹರಾಜು !

ಈಗ ಇಂಥದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪ್ರವೀಣ್ ಎಂಬ 19 ವರ್ಷದ ಯುವಕ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾಗಿದ್ದಾನೆ. ಕಳೆದ ಹತ್ತು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರವೀಣ್ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್ ಆಡುತ್ತಿದ್ದ. ಆನ್ ಲೈನ್ ಗೇಮ್ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಹೀಗಾಗಿ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಆನ್ ಲೈನ್ ಗೇಮ್ ಭೂತ ಹೊಕ್ಕು ಆತನ ಜೀವವನ್ನೆ ಕಿತ್ತುಕೊಂಡಿದೆ. ಆನ್ ಲೈನ್ ಮೂಲಕ ಆಟವಾಡಿ ಹಣವನ್ನು ಕಳೆದುಕೊಂಡು ನಂತರ ಸಾಲ ಮಾಡುತ್ತಾರೆ. ಸಾಲಗಾರರ ಕಾಟ ತಡೆಯಲಾಗದೇ ಆತ್ಮಹತ್ಯೆಗೆ ಬ*ಲಿಯಾಗುತ್ತಿದ್ದಾರೆ.

Continue Reading

LATEST NEWS

ಪುತ್ರಿ ಸಾರಾಗೆ ಹೊಸ ಜವಾಬ್ದಾರಿ ವಹಿಸಿದ ಸಚಿನ್ ತೆಂಡೂಲ್ಕರ್

Published

on

ಮಂಗಳೂರು/ ಮುಂಬೈ : ಸಚಿನ್ ತೆಂಡೂಲ್ಕರ್ ತಮ್ಮ ಪುತ್ರಿ ಸಾರಾ ತೆಂಡೂಲ್ಕರ್‌ ಹೆಗಲಿಗೆ ಹೊಸ ಜವಾಬ್ದಾರಿ ಹೊರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಷನ್(ಎಸ್‌ಟಿಎಫ್) ನಿರ್ದೇಶಕಿಯಾಗಿ ಸಾರಾ ತೆಂಡೂಲ್ಕರನ್ನು ನೇಮಕ ಮಾಡಿದ್ದಾರೆ.

ಈ ಕುರಿತು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾರಾ ಯೂನಿವರ್ಸಿಟಿ ಕಾಲೇಜು ಲಂಡನ್‌ನಲ್ಲಿ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಕ್ರೀಡೆ, ಆರೋಗ್ಯ ಮತ್ತ ಶಿಕ್ಷಣ ಕ್ಷೇತ್ರದ ಮೂಲಕ ಭಾರತವನ್ನು ಸಶಕ್ತಗೊಳಿಸಲು ಆಕೆ ಪ್ರಯಾಣವನ್ನು ಪ್ರಾರಂಭಿಸಿದಾಗ ಜಾಗತಿಕ ಕಲಿಕೆಯು ಹೇಗೆ ಪರಿಪೂರ್ಣತೆಗೆ ತಲುಪಿದೆ ಎಂಬುದನ್ನು ನೆನಪಿಸುತ್ತದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ : WATCH VIDEO : ಬೆಂಕಿ ಉಂಡೆಯಾಗಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹ

2019ರಲ್ಲಿ ಸಚಿನ್ ತೆಂಡೂಲ್ಕರ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿತ್ತು.

 

 

 

Continue Reading

LATEST NEWS

WATCH VIDEO : ಬೆಂಕಿ ಉಂಡೆಯಾಗಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹ

Published

on

ಮಂಗಳೂರು/ರಷ್ಯಾ : ಆಗೊಮ್ಮೆ ಈಗೊಮ್ಮೆ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಘಟನೆಗಳು ನಡೆಯುತ್ತಿರುತ್ತವೆ. 2024 ರಲ್ಲಿ ಈಗಾಗಲೇ ಮೂರು ಕ್ಷುದ್ರಗ್ರಹಗಳು ಈ ರೀತಿ ಭೂಮಿಗೆ ಬಂದು ಅಪ್ಪಳಿಸಿವೆ.  ಇದೀಗ ರಷ್ಯಾದ ಅರಣ್ಯ ಪ್ರದೇಶಕ್ಕೆ ಕ್ಷುದ್ರಗ್ರಹ COWEPC5, ಕೇವಲ 70 ಸೆಂ ವ್ಯಾಸದಲ್ಲಿ, ರಷ್ಯಾದ ಯತ್ಸ್ಯ ಎಂಬ ಪ್ರದೇಶದ ಮೇಲೆ ಬಿದ್ದಿದೆ. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ಯಾಕುಟಿಯಾದ ಆಕಾಶದಲ್ಲಿ ಕ್ಷುದ್ರಗ್ರಹವು ಬೃಹತ್ ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡಿತು. ಇದು ಭೂಮಿಗೆ ಅಪ್ಪಳಿಸುವ ಕೇವಲ ಹನ್ನೆರಡು ಘಂಟೆಗಳ ಮೊದಲು ವಿಜ್ಞಾನಿಗಳು ಇದರ ದಿಕ್ಕು ಬದಲಾಯಿಸಿದ್ದಾರೆ. ಹೀಗಾಗಿ ಇದು ರಷ್ಯಾದ ಯತ್ಸ್ಯ ಎಂಬ ಪ್ರದೇಶದಲ್ಲಿನ ಅರಣ್ಯ ಪ್ರದೇಶಕ್ಕೆ ಬಿದ್ದಿದೆ.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!

ಬೆಂ*ಕಿ ಉಂಡೆಯಂತೆ ವೇಗವಾಗಿ ಬಂದ ಈ ಕ್ಷುದ್ರಗ್ರಹ ಬೇರೆ ಬೇರೆ ಕಡೆಗಳಲ್ಲಿ ಕ್ಯಾಮರಾ ಕಣ್ಣಿನಲ್ಲಿ ಕಾಣಿಸಿಕೊಂಡಿದೆ. ನಿನ್ನೆ ಅಪ್ಪಳಿಸಿದ ಕ್ಷುದ್ರಗ್ರಹವು ಈ ಹಿಂದೆ ಪತ್ತೆಯಾದ 2022 WJ, 2023 CX1 ಮತ್ತು 2024 BX1 ಅನ್ನು ಹೋಲುತ್ತದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ . ಇವೆಲ್ಲವೂ ವಾತಾವರಣಕ್ಕೆ ಪ್ರವೇಶಿಸಿದ ತಕ್ಷಣ ದೊಡ್ಡ ಬೆಳಕನ್ನು ಉತ್ಪಾದಿಸುತ್ತವೆ. ನಾಸಾ ಮತ್ತು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಈ ಕ್ಷುದ್ರಗ್ರಹವನ್ನು ಗುರುತಿಸಿ ಅದರ ಪಥ ಬದಲಾಯಿಸಿ ಬಹುದೊಡ್ಡ ಅಪಾಯವನ್ನು ತಪ್ಪಿಸಿದೆ.

 

Continue Reading

LATEST NEWS

Trending

Exit mobile version