Monday, July 4, 2022

ಕನ್ನಡ ಚಿತ್ರರಂಗದ ಯಜಮಾನ ವಿಷ್ಣುದಾದ ಅಗಲಿ 12 ವರ್ಷ…..

2009 ಡಿಸೆಂಬರ್​ 30ನೇ ತಾರೀಖು ಕನ್ನಡ ಸಿನಿಮಾ ರಂಗ ಕಂಡ ಅತ್ಯದ್ಭುತ ಕಲಾವಿದ, ಅಜಾತ ಶತ್ರು ಡಾ.ವಿಷ್ಣುವರ್ಧನ್​ ಅವರು ಅಗಲಿದ ದಿನ.

ಇನ್ನು ಹತ್ತಾರು ವರ್ಷಗಳ ಕಾಲ ಸಿನಿಮಾಗಳ ಮೂಲಕ, ತಮ್ಮ ಮಾನವೀಯ ಗುಣಗಳ ಮೂಲಕ ರಂಜಿಸಬೇಕಾಗಿದ್ದ ಸಂಪತ್​ ಕುಮಾರ್​ 12 ವರ್ಷಗಳ ಹಿಂದೆ ಅದೇ ದಿನದಂದು ಇಹಲೋಕ ತ್ಯಜಿಸಿದ್ದರು.


ಸಂಪತ್​ ಕುಮಾರ್​ ಆಗಿ ಸಿನಿಮಾ ರಂಗಕ್ಕೆ ಬಂದು, ‘ವಂಶ ವೃಕ್ಷ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು.

ನಂತರ ಕನ್ನಡದ ದಂತಕಥೆ ಪುಟ್ಟಣ್ಣ ಕಣಾಗಾಲ್​ ನಾಗರಹಾವು ಸಿನಿಮಾದ ರಾಮಾಚಾರಿ ಪಾತ್ರದ ಮೂಲಕ ಮನೆ ಮನ ಮಾತಾದರು. ಜೊತೆಗೆ ನಾಗರಹಾವು ಸಿನಿಮಾ ಮೂಲಕ ವಿಷ್ಣುವರ್ಧನ್​ ಆಗಿ ಬದಲಾದರು.


ತಮ್ಮ ಸುದೀರ್ಘ 37 ವರ್ಷಗಳ ಸಿನಿಮಾ ಪಯಣದಲ್ಲಿ 220 ಸಿನಿಮಾಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ.

200 ಸಿನಿಮಾಗಳು ಕನ್ನಡದಲ್ಲೇ ನಟಿಸಿರೋದು ವಿಷ್ಣುವರ್ಧನ್​ ಅವರ ಹೆಗ್ಗಳಿಕೆ. ಉಳಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಕನ್ನಡದ ಅಪರೂಪದ ಪಂಚಭಾಷಾ ಕಲಾವಿದ ವಿಷ್ಣುವರ್ಧನ್​.


ವಿಷ್ಣುವರ್ಧನ್​ ಕನ್ನಡದ ಸ್ಟಾರ್​ ನಟಿ ಭಾರತಿಯವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಷ್ಟೆಲ್ಲಾ ಸಕಲ ಕಲೆಗಳನ್ನು ಕರಗತ ಮಾಡಿಕೊಂಡಿದ್ದ ವಿಷ್ಣುವರ್ಧನ್​ ಅವರು ಕನ್ನಡ ಸಿನಿಮಾ ರಂಗದಲ್ಲಿ ಸಾಹಸ ಸಿಂಹ, ದಾದಾ, ಅಭಿನವ ಭಾರ್ಗವ ಅಂತಲೇ ಫೇಮಸ್ ಆಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ತೋಟಕ್ಕೆ ಹೋದವ ನದಿ ದಡದಲ್ಲಿ ಪತ್ತೆಯಾದ

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಪುದುವೆಟ್ಟು ಗ್ರಾಮದ ಅಡ್ಯ ಎಂಬಲ್ಲಿ ನಡೆದಿದೆ.ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ (65) ಎಂಬವರು ಮೃತಪಟ್ಟ...

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಯುವ ಕೃಷಿಕ ಜಾರಿ ಬಿದ್ದು ಕೊನೆಯುಸಿರು

ಉಡುಪಿ: ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಯುವ ಕೃಷಿಕನೊಬ್ಬ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೈರಂಪಳ್ಳಿಯ ದೂಪದಕಟ್ಟೆ ನಿನ್ನೆ ನಡೆದಿದೆ.ಮೃತ ಯುವಕನನ್ನು ಉಮೇಶ್‌ ಕುಲಾಲ್‌ (35) ಎಂದು...

ಕೆರೆಗೆ ಬಿದ್ದ ಹಾಲಿನ ವಾಹನ-ನೀರುಪಾಲಾದ ಲೀಟರ್‌ಗಟ್ಟಲೆ ಹಾಲು

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಹಾಲು ತುಂಬಿಸಿಕೊಂಡು ಹೋಗುತ್ತಿದ್ದ ವಾಹನ ಕೆರೆಯಲ್ಲಿ ಮುಳುಗಿದ ಘಟನೆ ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೆಳಿಗ್ಗೆ ಅಂಗಡಿಗೆ ನಂದಿನಿ ಹಾಲು ಪೂರೈಸುತ್ತಿದ್ದ ವಾಹನ ದೇವರಹಳ್ಳಿ ಕೆರೆಯಲ್ಲಿ...