Home ಸ್ಥಳೀಯ ಸುದ್ದಿ ಕಾರುಗಳ ಮುಖಾಮುಖಿ ಡಿಕ್ಕಿ: ಮಂಜುನಾಥನ ದರ್ಶನ ಪಡೆದು ಅವನದೇ ಪಾದ ಸೇರಿದ ದುರ್ಧೈವಿಗಳು

ಕಾರುಗಳ ಮುಖಾಮುಖಿ ಡಿಕ್ಕಿ: ಮಂಜುನಾಥನ ದರ್ಶನ ಪಡೆದು ಅವನದೇ ಪಾದ ಸೇರಿದ ದುರ್ಧೈವಿಗಳು

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ: 12 ಮಂದಿ ಸ್ಥಳದಲ್ಲೇ ಸಾವು

ತುಮಕೂರು: ಕಾರಿಗೆ ಇನ್ನೊಂದು ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ಇಂದು (ಮಾರ್ಚ್ 6) ಮುಂಜಾನೆ ನಡೆದಿದೆ.

ಜಿಲ್ಲೆಯ ಕುಣಿಗಲ್ ತಾಲೂಕು ಬ್ಯಾಲದಕೆರೆ ಬಳಿ ಘಟನೆ ನಡೆದಿದೆ.

ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಧರ್ಮಸ್ಥಳದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ನಾಲ್ಕು ಯುವಕರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬ್ಯಾಲದಕೆರೆ ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ.

ಬಳಿಕ ಈ ಈ ಕಾರು ಎದುರಿನಿಂದ ಬರುತ್ತಿದ್ದ ಟವೇರಾ ವಾಹನಕ್ಕೆ ಢಿಕ್ಕಿ ಆಗಿದೆ.

ಟವೇರಾದಲ್ಲಿದ್ದ 9 ಹಾಗೂ ಕಾರಿನಲ್ಲಿದ್ದ 3 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತರನ್ನು ಮಂಜುನಾಥ್ (35), ತನುಜಾ (25), ಒಂದು ವರ್ಷದ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸೌಂದರರಾಜ್ (48), ರಾಜೇಂದ್ರ (27), ಸರಳಾ (32), ಪ್ರಶನ್ಯಾ (14), ಲಕ್ಷ್ಮೀಕಾಂತ್ (24), ಸಂದೀಪ್ (36) ಹಾಗೂ ಮಧು (28) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಟವೇರಾದಲ್ಲಿದ್ದವರು ತಮಿಳುನಾಡಿನ ಹೊಸೂರಿನವರಾಗಿದ್ದು, ಅವರು ಕೂಡ ಧರ್ಮಸ್ಥಳ ಪ್ರವಾಸ ಮುಗಿಸಿ ಹೊಸೂರಿಗೆ ವಾಪಸ್ ತೆರಳುತ್ತಿದ್ದರೆನ್ನಲಾಗಿದೆ.

ಸದ್ಯ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisment -

RECENT NEWS

ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಜೂ 13 ರಿಂದ ಪ್ರಾರ್ಥನೆಗೆ ಅವಕಾಶ

ಚರ್ಚ್ ಗಳಲ್ಲಿ ನಡೆಯುತ್ತಿದೆ ಭರದ ಸಿದ್ದತೆ ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜೂ 13ರಿಂದ ಸರಕಾರದ ನಿಯಮಗಳನ್ನು ಪಾಲಿಸಿ ಚರ್ಚ್ ಗಳಲ್ಲಿ ಪ್ರಾರ್ಥನೆಗಳನ್ನು ಆರಂಭಿಸಲಾಗುವುದು ಎಂದು ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ತಿಳಿಸಿದ್ದಾರೆ. ಈ ಕುರಿತು...

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...