ಬಿಜಾಪುರ : ಕರ್ನಾಟಕ – ಮಹಾರಾಷ್ಟ್ರ ಗಡಿ ಪ್ರದೇಶವಾದ ಸೊಲ್ಲಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ 12 ಕೃಷ್ಣಮೃಗಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ,
ಸೊಲ್ಲಾಪುರ-ಮಂಡ್ರೂಪ್ ಬೈಪಾಸ್ ರಸ್ತೆಯಲ್ಲಿ ಶನಿವಾರ ಸಂಜೆ ಸೇತುವೆಯಿಂದ ಜಿಗಿದ 12 ಕೃಷ್ಣಮೃಗಗಳು ಹೆದ್ದಾರಿಯಲ್ಲಿ ದಾರುಣ ಅಂತ್ಯ ಕಂಡಿವೆ.
ಸೋಲಾಪುರ ಜಿಲ್ಲೆಯ ಸೊಲ್ಲಾಪುರ-ಮಂಡ್ರೂಪ್ ಬೈಪಾಸ್ ಹೊಸದಾಗಿ ನಿರ್ಮಾಣಗೊಂಡ ರಸ್ತೆಯಲ್ಲಿ ಸೇತುವೆಯಿಂದ ಹಾರಿ ಗಾಯಗೊಂಡ 12 ಕೃಷ್ಣಮೃಗಗಳು ಸಾವನ್ನಪ್ಪಿವೆ.
ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಹೆದ್ದಾರಿಯಿಂದ ತೆರವು ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಇನ್ಸ್‌ಪೆಕ್ಟರ್ ಉದಯ್ ಸಿಂಗ್ ಪಾಟೀಲ್ ತಿಳಿಸಿದ್ದಾರೆ.
ಕೃಷ್ಣಮೃಗಗಳ ಹಿಂಡು ದಾರಿ ತಪ್ಪಿ ರಸ್ತೆಗಿಳಿದಿದ್ದು, ಈ ಸಂದರ್ಭ ಹೆದ್ದಾರಿಲ್ಲಿನ ಟ್ರಾಫಿಕ್ ಕಂಡು ಗಾಬರಿಗೊಂಡು ತಪ್ಪಿಸಿಕೊಳ್ಳಲು ಸುಮಾರು 30 ಅಡಿ ಎತ್ತರದಿಂದ ಕೆಳಕ್ಕೆ ಜಿಗಿದಿವೆ ,
ಆದ್ರೆ ಮೇಲಿಂದ ಜಿಗಿದ ಎಲ್ಲಾ 12 ಕೃಷ್ಣಮೃಗಗಳು ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣಬಿಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.