ಮಂಗಳೂರು/ಶೆನ್ಜೆನ್: ಕಂಪನಿ ಉದ್ಯೋಗಿಗಳಿಗೆ ದೀಪಾವಳಿ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಕಾರು, ಬೈಕ್, ಬೋನಸ್ ಸೇರಿದಂತೆ ಹಲವು ರೀತಿಯ ಉಡುಗೊರೆ ನೀಡುವುದು ಸಾಮಾನ್ಯ. ಕನಿಷ್ಠ ಒಂದು ಸ್ವೀಟ್ ಬಾಕ್ಸ್ ಆದರೂ ಕೊಡುತ್ತಾರೆ. ಆದರೆ , ಟೆಕ್ ಕಂಪನಿ ಒಂದು ಭರ್ಜರಿ ಆಫರ್ ನೀಡಿದೆ. ಕಂಪನಿಯ ಉದ್ಯೋಗಿಯಾಗಿದ್ದು ಕಚೇರಿ ಹೊರಗಿನವರನ್ನು ಡೇಟಿಂಗ್ ಮಾಡಿ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಡೇಟಿಂಗ್ ಫೋಟೋ ಹಾಕಿದರೆ 760 ರೂಪಾಯಿಯನ್ನು ಕಂಪನಿ ನೀಡಲಿದೆ. ಜೊತೆಗೆ ಅಷ್ಟು ಮಾತ್ರ ಅಲ್ಲದೆ, ಕನಿಷ್ಠ 3 ತಿಂಗಳು ಡೇಟ್ ಸಂಬಂಧ ಉಳಿದರೆ 11,650 ರೂಪಾಯಿ ಜೋಡಿಗೆ ಸಿಗಲಿದೆ. ಇನ್ಯಾಕೆ ತಡ ಮಾಡೋದು ? ಈ ಕಂಪನಿಗೆ ಬೇಗ ಜಾಯಿನ್ ಆಗೋಣ ಅಂತಾ ಯೋಚಿಸುತ್ತಿದ್ದೀರಾ? ಆದರೆ ಈ ಟೆಕ್ ಕಂಪನಿ ಇರೋದು ದಕ್ಷಿಣ ಚೀನಾದ ಶೆನ್ಜೆನ್‌ನಲ್ಲಿ.
‘ಇನ್‌ಸ್ಟಾ 360’ ಎಂಬ ಟೆಕ್ ಕಂಪನಿ ತನ್ನ ಉದ್ಯೋಗಿಗಳಿಗೆ ಈ ಆಫರ್ ನೀಡಿದ್ದು, ಬಹುತೇಕರು ಯುವ ಉದ್ಯೋಗಿಗಳು ಕಂಪನಿಯಲ್ಲಿದ್ದಾರೆ. ಆಡಳಿತ ಮಂಡಳಿ, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಅನುಭವಿಗಳಿದ್ದು, ಯುವ ಉತ್ಸಾಹ ಹೆಚ್ಚಿರುವ ಕಾರಣ ಈ ಕಂಪನಿ ಯುವ ಸಮೂಹವನ್ನೇ ನೇಮಿಸಿಕೊಂಡಿದೆ. ಆದರೆ ಇಲ್ಲಿ ಕಾಡುವ ಒಂದು ಸಮಸ್ಯೆ ಯಾವುದೆಂದರೆ, ಸಿಂಗಲ್ ಆಗಿರುವವರು ಸಂತೋಷವಾಗಿಲ್ಲ. ಇದರಿಂದ ಕಂಪನಿ ಕೆಲಸದ ಮೇಲೆ ಹೊಡೆತ ಬೀಳುತ್ತಿದೆ. ಹೀಗಾಗಿ ಈ ‘ಡೇಟಿಂಗ್ ಆಫರ್’ ಘೋಷಿಸಿದೆ.
ಕಂಪನಿಯು ಸಿಂಗಲ್ ಆಗಿರುವ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. ಯಾವುದೇ ಮ್ಯಾಚ್‌ಮೇಕರ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸಂಗಾತಿಯನ್ನು ಕಂಡುಕೊಂಡು ಡೇಟಿಂಗ್ ಮಾಡಿದರೆ ಸಾಕು, ಕ್ಯಾಶ್ ರಿವಾರ್ಡ್ ಆಗುತ್ತದೆ. ಡೇಟಿಂಗ್ ಸತ್ಯವಾಗಿದ್ದರೆ ಸಾಕು. ಫೋಟೋವನ್ನು ಕಂಪನಿ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಬೇಕು ಆದರೆ ಬ್ಲರ್ ಮಾಡಿ ಪೋಸ್ಟ್ ಮಾಡುವಂತಿಲ್ಲ. ಕಾರಣ ಸಮಾಜಕ್ಕೆ ಧೈರ್ಯವಾಗಿ ಡೇಟಿಂಗ್ ವಿಚಾರವನ್ನು ಹೇಳಬೇಕು. ಹೀಗೆ ಫೋಟೋ ಪೋಸ್ಟ್ ಮಾಡಿದರೆ ‘ಇನ್‌ಸ್ಟಾ 360’ ಕಂಪನಿ ಇಬ್ಬರಿಗೂ 760 ರೂಪಾಯಿ ನೀಡಲಿದೆ.
ಸಂಬಂಧ ಕನಿಷ್ಠ 3 ತಿಂಗಳು ಉಳಿಸಿಕೊಂಡರೆ ಮುಂದಿನ ನಗದು ರಿವಾರ್ಡ್‌ಗೆ ಅರ್ಹರಾಗುತ್ತಾರೆ. 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಸಂಬಂಧ ಉಳಿಸಿಕೊಂಡಿದ್ದರೆ, ತಲಾ 11,650 ರೂಪಾಯಿಯನ್ನು ಟೆಕ್ ಕಂಪನಿ ರಿವಾರ್ಡ್ ರೂಪದಲ್ಲಿ ನೀಡಲಿದೆ. ಇಲ್ಲಿ ಇರುವ ಮತ್ತೊಂದು ವಿಶೇಷತೆ ಎಂದರೆ, ಯಾವುದೇ ಮ್ಯಾಚ್‌ಮೇಕರ್ ಮೂಲಕ ಸಂಬಂಧ ಕುದರಿಸಿಕೊಂಡು ಡೇಟಿಂಗ್ ಮಾಡಿದರೆ ಅಂತವರಿಗೂ 11,650 ರೂಪಾಯಿ ರಿವಾರ್ಡ್ ಸಿಗಲಿದೆ.
ಕಂಪನಿಯು ಈ ಆಫರ್ ಘೋಷಿಸಿದ ಬಳಿಕ ಈಗಾಗಲೇ 500 ಫೋಟೋಗಳು ಕಂಪನಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರಿಗೆ ಒಟ್ಟು 10,000 ಯುವನ್(ಚೀನಾ ಕರೆನ್ಸಿ) ವಿತರಿಸಿದೆ ಎಂದು ಇನ್‌ಸ್ಟಾ 360 ಹೇಳಿದೆ. ‘ಈ ಕಂಪನಿ ನನ್ನ ತಾಯಿಗಿಂತ ಹೆಚ್ಚು ನನ್ನ ಮದುವೆ ವಿಚಾರದಲ್ಲಿ ಆಸಕ್ತಿ ಹೊಂದಿದೆ’ ಎಂದು ಉದ್ಯೋಗಿಗಳೇ ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ‘ಈ ಕಂಪನಿ ನೇಮಕಾತಿ ಏನಾದರು ಮಾಡುವ ಪ್ಲಾನ್ ಇದ್ದರೆ ತಿಳಿಸಿ ನಿಮ್ಮ ಡೋರ್ ಮುಂದೆ ನಾನಿದ್ದೇನೆ’ ಎಂದು ಕಮೆಂಟ್ ಮಾಡಿದ್ದಾರೆ.
ಚೀನಾದಲ್ಲಿ ಮದುವೆ ಹಾಗೂ ಜನನ ಪ್ರಮಾಣ ಭಾರಿ ಕುಸಿತ ಕಂಡಿದ್ದು, 2024ರ ಅಂಕಿ ಅಂಶ ಪ್ರಕಾರ ಚೀನಾದಲ್ಲಿ 4.74 ಮಿಲಿಯನ್ ಜೋಡಿಗಳು ಮದುವೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ. 2023ರ ಇದೇ ಸಮಯಕ್ಕೆ ಹೋಲಿಸಿದರೆ ಶೇಕಡಾ 16.6ರಷ್ಟು ಕುಸಿತ ಕಂಡಿದೆ. ಇನ್ನು ಜನನ ಪ್ರಮಾಣದಲ್ಲೂ ಭಾರಿ ಕುಸಿತ ಕಂಡಿದ್ದು, 2022ರಲ್ಲಿ ಚೀನಾದ ಜನನ ಪ್ರಮಾಣ 1000 ಮಂದಿಗೆ 6.77ರಷ್ಟಿತ್ತು. 2023ರ ವೇಳೆಗೆ ಇದು 6.39ಕ್ಕೆ ಇಳಿಕೆಯಾಗಿದೆ.
ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.
ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.
ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.
ಉತ್ತಕನ್ನಡ : ಶಾಲಾ ಮೈದಾನದಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿದ್ದರು. ಈ ವೇಳೆ ಮಕ್ಕಳ ಮೇಲೆ ಜೇನು ದಾಳಿ ಮಾಡಿದೆ. ಇದರಿಂದ 23ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾನ್ ಬಾಸ್ಕೋ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.
ಶಾಲಾ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ ಮಾಡಿದೆ. ಸುಮಾರು 23ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಒಂದು ಘಟನೆ ನಡೆದಿದೆ. ಶಿರಸಿಯ ಡಾನ್ ಬಾಸ್ಕೋ ಶಾಲಾ ಮೈದಾನದಲ್ಲಿ ಈ ಒಂದು ಘಟನೆ ನಡೆದಿದೆ. ಕೂಡಲೇ ಶಿರಸಿ ತಾಲೂಕು ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಮಂಗಳೂರು/ಬರೇಲಿ:ಜಿಪಿಎಸ್ ಮ್ಯಾಪ್ ಮೂಲಕ ಸಾಗಿದ ಕಾರು ಕಾಲುವೆಗೆ ಬಿ*ದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದರೆ ಟಾಟಾ ಕಾರು ಈ ಪ್ರಯಾಣಿಕರ ಜೀವ ಉಳಿಸಿದ ಘಟನೆ ಬರೇಲಿಯ ಪಿಲಿಭಿತ್ ಹೆದ್ದಾರಿಯಲ್ಲಿ ನಡೆದಿದೆ.
ಎಲ್ಲೇ ಹೋಗಬೇಕಿದ್ದರೂ ದಾರಿಯಲ್ಲಿ ಸಿಕ್ಕವರನ್ನು ಕೇಳುವ ಪ್ರಶ್ನೆ ಇಲ್ಲ. ಗೂಗಲ್ ಮ್ಯಾಪ್ ಹಾಕಿದರೆ ಸಾಕು. ಹತ್ತಿರದ ಮಾರ್ಗ, ಕ್ರಮಿಸಬೇಕಾದ ದೂರ, ಸಮಯ ಎಲ್ಲವನ್ನು ಹೇಳುತ್ತೆ. ಆದರೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಜೀವನ ಸುಲಭವಾಗಬೇಕಿತ್ತು. ಆದರ ಬದಲಾಗಿ ಅ*ಪಾಯವೇ ಹೆಚ್ಚಾಗುತ್ತಿದೆ. ಕಾರಣ ಇದೇ ಜಿಪಿಎಸ್ ಮಾರ್ಗ ನಂಬಿ ತೆರಳುತ್ತಿರುವ ಪ್ರಯಾಣಿಕರು ಅಪಘಾತಕ್ಕೀಡಾಗುತ್ತಿರುವ ಘಟನೆಯೂ ಹೆಚ್ಚಾಗುತ್ತಿದೆ. 10 ದಿನಗಳ ಹಿಂದೆ ಮದುವೆ ಹೊರಟ ಕಾರು ಸೇತುವೆ ಮೇಲಿಂದ ಬಿದ್ದ ಮೂವರು ಪ್ರಾ*ಣಕ್ಕೆ ಕುತ್ತು ತಂದಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಟಾಟಾ ಟಿಗೋರ್ ಕಾರಿನಲ್ಲಿ ಮೂವರು ಪ್ರಯಾಣ ಆರಂಭಿಸಿದ್ದಾರೆ. ದಾರಿ ಗೊತ್ತಿಲ್ಲದ ಕಾರಣ ಜಿಪಿಎಸ್ ಮ್ಯಾಪ್ ಆನ್ ಮಾಡಿ ವಿಳಾಸ ಹಾಕಿದ್ದಾರೆ. ಬಳಿಕ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಸಾಗಿದ್ದಾರೆ. ಆದರೆ ಬರ್ಕಾಪುರ ಗ್ರಾಮದ ಬಳಿ ಬರುತ್ತಿದ್ದಂತೆ ರಸ್ತೆ ಕಾಮಗಾರಿಗಳು ಎದುರಾಗಿದೆ. ಹೀಗಾಗಿ ರಸ್ತೆ ಸಂಚಾರ ಬದಲಿಸಲಾಗಿತ್ತು. ಆದರೆ ಗೂಗಲ್ ಮ್ಯಾಪ್ ಮಾತ್ರ ನೇರವಾಗಿ ಸಾಗಲು ಸೂಚಿಸಿದ ಕಾರಣ ಅದೇ ದಾರಿಯಲ್ಲಿ ಸಾಗಿದ ಕೆಲವೇ ಕ್ಷಣದಲ್ಲಿ ಕಾಲಾಪುರ ಕಾಲುವೆಗೆ ಕಾರು ಉರುಳಿ ಬಿದ್ದಿದೆ. ವೇಗವಾಗಿ ಸಾಗುತ್ತಿದ್ದ ಕಾರಣ ಅ*ಪಘಾತದ ಪ್ರಮಾಣ ಹೆಚ್ಚಾಗಿದೆ. ಟಾಟಾ ಮೋಟಾರ್ಸನ ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಸೆಡಾನ್ ಕಾರಾಗಿದ್ದ ಕಾರಣ ಪ್ರಯಾಣಿಕರ ಬದುಕುಳಿದಿದ್ದಾರೆ. ಸಣ್ಣ ಪುಟ್ಟ ಗಾ*ಯಗಳಾಗಿದ್ದರೂ ಮೂವರು ಪ್ರಯಾಣಿಕರ ಜೀ*ವಕ್ಕೆ ಯಾವುದೇ ಅಪಾಯವಾಗಿಲ್ಲ.
ಅ*ಪಘಾತ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಮೂವರುು ಪ್ರಯಾಣಿಕರನ್ನು ಕಾರಿನಿಂದ ಹೊರತೆಗೆದಿದ್ದಾರೆ. ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಗಂ*ಭೀರ ಗಾ*ಯಗಳಿಲ್ಲದ ಕಾರಣ ಮೂವರು ಪ್ರಯಾಣಿಕರು ತಪಾಸಣೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ. ಗೂಗಲ್ ಮ್ಯಾಪ್ ನೀಡಿದ ತಪ್ಪು ಸೂಚನೆಯಿಂದ ಕಾರು ಕಾಲುವೆಗೆ ಮ*ಗುಚಿ ಬಿ*ದ್ದಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.