ವಿಟ್ಲ: ನಿಲ್ಲಿಸಲಾಗಿದ್ದ ಬೈಕ್ ಗೆ 112 ತುರ್ತು ಸೇವೆಯ ವಾಹನ ಢಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಕಡೂರು – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ನಡೆದಿದೆ.
ಅಪಘಾತದಿಂದ ಗಾಯಗೊಂಡವರನ್ನು ವಿನಯ್ (35), ಶಿವರಾಮ್ (22) ಎಂದು ಗುರುತಿಸಲಾಗಿದೆ. ಉಕ್ಕುಡ ಕಡೆಯಿಂದ ಆಗಮಿಸುತ್ತಿದ್ದ ಬೈಕ್ ಸವಾರರು ಮುಂಭಾಗದಿಂದ ವಾಹನ ಬರುವ ಕಾರಣಕ್ಕೆ ನಿಲ್ಲಿಸಿದ್ದಾರೆ.
ಹಿಂದಿನಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ 112 ತುರ್ತುವಾಹನವನ್ನು ಚಲಾಯಿಸಿಕೊಂಡು ಬಂದ ಡ್ರೈವರ್ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. 112 ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.