Connect with us

LATEST NEWS

 ಬೆಂಗಳೂರು ಬಾಲಕ ಅಪಹರಣ ಪ್ರಕರಣ ಸುಖಾಂತ್ಯ : ಬಾಲಕನ ರಕ್ಷಣೆ ಆರೋಪಿಗಳು ಅಂದರ್..! 

Published

on

 ಬೆಂಗಳೂರು ಬಾಲಕ ಅಪಹರಣ ಪ್ರಕರಣ ಸುಖಾಂತ್ಯ : ಬಾಲಕನ ರಕ್ಷಣೆ ಆರೋಪಿಗಳು ಅಂದರ್..! 

ಬೆಂಗಳೂರು: ನಗರದಲ್ಲಿ ಬಟ್ಟೆ ವ್ಯಾಪಾರಿಯೊಬ್ಬರ ಮಗನನ್ನು ಅಪಹರಿಸಿ ಆತನ ಬಿಡುಗಡೆ ಮಾಡಲು 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸಿ ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರದ ಮೊಹಮ್ಮದ್ ಝೈನ್ (22), ಭಾರತಿನಗರದ ಫಾಹೀಂ (18), ಮುಜಾಮಿಲ್ (18), ಪೈಜಾನ್ (20) ಮೊಹಮ್ಮದ್ ಷಾಹೀದ್ (19) ಹಾಗೂ ಖಲೀಲ್ (20) ಬಂಧಿತ ಆರೋಪಿಗಳಾಗಿದ್ದಾರೆ.

ಭಾರತಿನಗರದ ಮೊಹಮ್ಮದ್ ಸಾದಿಕ್ ಮತ್ತು ಆಸ್ಮಾ ನಾಜ್ ದಂಪತಿ ಮಗನಾದ 11 ವರ್ಷದ ಮೊಹಮ್ಮದ್ ಉಮರ್ ಅಲಿಯನ್ನು ಶುಕ್ರವಾರ ಸಂಜೆ ಆರೋಪಿಗಳು ಅಪಹರಿಸಿದ್ದರು.

2 ಕೋಟಿ ಕೊಟ್ಟರೆ ಮಾತ್ರ ಬಾಲಕನನ್ನು ಬಿಡುತ್ತೇವೆ. ಇಲ್ಲದಿದ್ದರೆ, ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಪಹರಣ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಹಾಗೂ ತಂಡದವರು ಚುರುಕಿನ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

‘‍ಬಟ್ಟೆ ವ್ಯಾಪಾರಿಯಾಗಿದ್ದ ಮೊಹಮ್ಮದ್ ಸಾದಿಕ್, ತಿಮ್ಮಯ್ಯ ರಸ್ತೆಯಲ್ಲಿ ಸ್ವಂತ ಅಂಗಡಿ ಹೊಂದಿದ್ದರು. ನಿತ್ಯ ವ್ಯಾಪಾರದ ಹಣವನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು. ಅದನ್ನು ತಿಳಿದುಕೊಂಡಿದ್ದ ಮೊಹಮ್ಮದ್ ಝೈನ್, ಸಹಚರರ ಜೊತೆ ಸಂಚು ರೂಪಿಸಿ ಕೃತ್ಯ ಎಸಗಿದ್ದ’ ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ಬಾಲಕ ಉಮರ್ ಅಲಿಗೆ ಗಾಳಿಪಟವೆಂದರೆ ಅಚ್ಚುಮೆಚ್ಚು. ಗಾಳಿಪಟ ಕೊಡಿಸುವ ನೆಪದಲ್ಲಿ ಆರೋಪಿಗಳು ಆತನನ್ನು ಪರಿಚಯ ಮಾಡಿಕೊಂಡಿದ್ದರು. ಶುಕ್ರವಾರ ಸಂಜೆ ದಂಪತಿ, ಶಾಪಿಂಗ್‌ಗಾಗಿ ಹೊರಗಡೆ ಹೋಗಿದ್ದರು.

ಬಾಲಕ ಹಾಗೂ ಆತನ ಸಹೋದರಿ ಮಾತ್ರ ಮನೆಯಲ್ಲಿದ್ದರು. ಮನೆ ಬಳಿ ಬಂದಿದ್ದ ಆರೋಪಿಗಳು, ಗಾಳಿಪಟ ಕೊಡಿಸುವುದಾಗಿ ಹೇಳಿ ಆತನನ್ನು ಹೊರಗೆ ಕರೆಸಿಕೊಂಡು ಅಪಹರಿಸಿದ್ದರು.

ರಾತ್ರಿ ಪೋಷಕರು ಮನೆಗೆ ಬಂದಾಗಲೇ ವಿಷಯ ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು. ತಡರಾತ್ರಿ ಕರೆ ಮಾಡಿದ್ದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದರು’ ‘ಭಾರತಿನಗರದ ಮನೆಯಿಂದ ಬೈಕ್‌ನಲ್ಲಿ ಬಾಲಕನನ್ನು ಅಪಹರಿಸಿದ್ದ ಆರೋಪಿಗಳು, ಯಶವಂತಪುರಕ್ಕೆ ಕರೆದೊಯ್ದಿದ್ದರು.

ಅಲ್ಲಿಂದ ಕಾರಿನಲ್ಲಿ ತುಮಕೂರಿಗೆ ಕರೆದುಕೊಂಡು ಹೋಗಿದ್ದರು. ನಿದ್ರೆ ಮಾತ್ರೆ ಬೆರಸಿದ್ದ ತಂಪು ಪಾನೀಯ ಕುಡಿಸಿ ಬಾಲಕನ ಪ್ರಜ್ಞೆ ತಪ್ಪಿಸಿದ್ದರು’ ‘ಹಣ ಕೊಡುವ ಸಂಬಂಧಿಕರ ಸೋಗಿನಲ್ಲೇ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳ ಪೈಕಿ ಬಹುತೇಕರು ಮಾದಕ ವ್ಯಸನಿಗಳು. ಆರೋಪಿ ಫಾಹೀಂ, ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿದ್ದ’ ಕಮಲ್ ಪಂತ್ ಮಾಹಿ ನೀಡಿದ್ದಾರೆ.

ಇನ್ನು ಬಾಲಕನನ್ನು ಅಪಹರಿಸಿ 2 ಕೋಟಿ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು 5 ತಂಡಗಳಾಗಿ ಕಾರ್ಯಾಚರಣೆ ನಡೆಸಿ 24 ಗಂಟೆಯ ಒಳಗೆ 6 ಜನ ಆರೋಪಿಗಳನ್ನು ಬಂಧಿಸಿದ ಪೂರ್ವ ವಿಭಾಗದ ಅಧಿಕಾರಿ & ಸಿಬ್ಬಂದಿಯ ಕರ್ತವ್ಯಪ್ರಜ್ಞೆ ಮತ್ತು ಸಾಹಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು. ತಂಡಕ್ಕೆ 50 ಸಾವಿರ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.

DAKSHINA KANNADA

ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

Published

on

ಸಾಮಾನ್ಯವಾಗಿ ಎಲ್ಲರೂ ಚಪ್ಪಲಿ ತೆಗೆದುಕೊಳ್ಳುವಾಗ ಕೊಟ್ಟಂತಹ ಗಮನವನ್ನ ಅದನ್ನು ತೆಗೆದುಕೊಂಡು ಆದ ಮೇಲೆ ಯಾರೂ ಅದನ್ನ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಚಪ್ಪಲಿಯನ್ನ ಇನ್ನು ಮುಂದೆ ನಿರ್ಲಕ್ಷ್ಯ ಮಾಡಬೇಡಿ. ಚಪ್ಪಲಿ ಸಹ ನಮ್ಮ ನಸೀಬನ್ನ ಬದಲಿಸಿ ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲದು.

ನಾವು ಫ್ಯಾಶನೇಬಲ್ ಆದ್ರೆ ಮಾತ್ರ ಬೇರೆಯವರ ಗಮನವನ್ನು ನಮ್ಮ ಕಡೆಗೆ ಸೆಳೆಯಬಹುದು ಅಂತ ತುಂಬಾ ಜನ ಅಂದುಕೊಂಡು ಇರುತ್ತಾರೆ. ಫ್ಯಾಶನೇಬಲ್ ಬಟ್ಟೆ, ಟ್ರೆಂಡೀ ಶೂ ಅಥವಾ ಚಪ್ಪಲಿಗಳಿರಬಹುದು ಅಥವಾ ಫ್ಯಾಶನೇಬಲ್ ಜ್ಯುವೆಲ್ಲರಿ ಆಗಿರಬಹುದು ಈ ರೀತಿ ಟ್ರೆಂಡಿಯಾಗಿ ಡ್ರೆಸ್ ಮಾಡಿದ್ರೆ ಎಲ್ಲರ ಗಮನ ನಮ್ಮ ಹತ್ತಿರ ತಿರುಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಮನೆಯೊಳಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದು ಸೂಕ್ತವಲ್ಲ. ನಾವು ಚಪ್ಪಲಿಯನ್ನು ಹೊರಗಡೆ ಎಲ್ಲಿಗೂ ಹೋಗುವಾಗಲು ಹಾಕುತ್ತೇವೆ.

ಹೀಗೆ ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿಯನ್ನು ಹಾಕಿಕೊಂಡು ಹೋಗುತ್ತೇವೆ. ಕೆಲವೊಂದು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ತುಂಬಾ ಭಕ್ತಾಧಿಗಳು ಹೋಗುತ್ತಾ ಬರುತ್ತಾ ಇರುತ್ತಾರೆ. ಅಲ್ಲಿ ಚಪ್ಪಲಿಗೆಂದೇ ಸ್ಟ್ಯಾಂಡ್ ಇಟ್ಟಿರುತ್ತಾರೆ. ನಾವು ಹಣ ಕೊಟ್ಟು ನಮ್ಮ ಚಪ್ಪಲಿಯನ್ನ ಅಲ್ಲಿ ಕಾಪಾಡಬಹುದು. ಆದ್ರೆ ಕೆಲವರು ಚಪ್ಪಲಿಯನ್ನು ಹೊರಗಡೇ ಇಟ್ಟು ಹೋಗುತ್ತಾರೆ. ದೇವರ ದರ್ಶನ ಮಾಡಿ ಹೊರಗೆ ಬರುವಾಗ ಆ ಚಪ್ಪಲಿ ಕಾಣುವುದಿಲ್ಲ. ಕೆಲವೊಮ್ಮೆ ರಶ್ ಇರಬೇಕಾದ್ರೆ ತಿಳಿಯದೇ ಜನರು ಹಾಕಿಕೊಂಡು ಹೋಗುತ್ತಾರೆ. ಕೆಲವೊಮ್ಮೆ ಬೇಕುಬೇಕಂತಲೆ ಅದನ್ನು ಕದ್ದುಕೊಂಡು ಹೋಗುತ್ತಾರೆ. ದೇವಸ್ಥಾನಗಳಲ್ಲಿ ಚಪ್ಪಲಿ ಕಳುವಾದ್ರೆ ಅದು ಒಳ್ಳೆಯದೇ ಎನ್ನುವ ನಂಬಿಕೆ ಕೂಡ ಇದೆ.

ಚಪ್ಪಲಿ ಹಾಳತ್ತಾಗಿದ್ದರೆ ಕಳೆದು ಹೋದರೂ ಬೇಜಾರಿಲ್ಲ. ಆದರೆ ಹೊಸತ್ತಾದರೆ ತುಂಬಾ ಬೇಜಾರ್ ಆಗುತ್ತದೆ. ಇಂತ ಸಮಯದಲ್ಲಿ ಕೆಲವರು ಹೇಳುತ್ತಾರೆ ಚಪ್ಪಲಿ ಕಳೆದು ಹೋದರೆ ನಿನ್ನ ದಾರಿದ್ರ್ಯ ಹೋಯಿತು. ಇನ್ನು ಮುಂದಕ್ಕೆ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ:

ಚಪ್ಪಲಿ ಕಳೆದುಹೋದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ ಎಂದು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಶನಿವಾರ ಚಪ್ಪಲಿ ಕಳೆದುಹೋದರೆ ಪಾದರಕ್ಷೆಯೊಂದಿಗೆ ನಿಮ್ಮ ಶನಿಯು ದೂರವಾಯಿತು ಎಂದು ಅರ್ಥ. ನಮ್ಮ ದೇಹದ ಭಾಗಗಳು ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ. ಶನಿ ಚರ್ಮ ಮತ್ತು ಪಾದಗಳಲ್ಲಿ ವಾಸಿಸುತ್ತಾನೆ. ಹೀಗೆ ಪಾದರಕ್ಷೆ ಕಳುವಾದ್ರೆ ನಿಮ್ಮ ಸಮಸ್ಯೆ ದೂರವಾಯ್ತು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

Continue Reading

LATEST NEWS

ಇಲ್ಲಿ ಕಂಠಪೂರ್ತಿ ವೈನ್‌‌ ಕುಡಿದ್ರೂ ಫ್ರೀ! ಆದ್ರೆ ಒಂದು ಕಂಡೀಷನ್‌!

Published

on

ಫ್ರೀ ಎಂದರೆ ಯಾರು ತಾನೇ ಬಿಡ್ತಾರೆ ಹೇಳಿ. ಫ್ರೀ ಅನ್ನುವ ಪದ ಕೇಳಿದ ಕೂಡಲೇ ಜನ ನಾ ಮುಂದು ತಾ ಮುಂದು ಅಂತ ನುಗ್ಗುತ್ತಾ ಇರುತ್ತಾರೆ. ಇನ್ನು ವೈನ್ ಫ್ರೀ ಅಂದರೆ ಬಾಯಿ ಬಿಡೋದು ಗ್ಯಾರಂಟಿನೇ. ಆದರೆ ವೈನ್ ಫ್ರೀ ಆಫರ್ ನಮ್ಮ ಭಾರತದಲ್ಲಿ ಅಲ್ವೇ ಅಲ್ಲ. ಈ ರೀತಿಯ ಆಫರ್ ಇರೋದು ಇಟಲಿ ದೇಶದಲ್ಲಿ. ಇಟಲಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಎಷ್ಟೇ ವೈನ್ ಕುಡಿದರೂ ಹಣ ಕೇಳಲ್ಲ. ಆದರೆ ರೆಸ್ಟೋರೆಂಟ್ ಮಾಲೀಕರ ಒಂದು ಕಂಡೀಷನ್ ಮಾತ್ರ ಫಾಲೋ ಮಾಡಲೇಬೇಕು. ವೈನ್ ಫ್ರೀ ಆಫರ್, ಮಾಲೀಕರ ಕಂಡೀಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಸುದ್ದಿ ನೋಡಿದವರೆಲ್ಲಾ ವ್ಹಾವ್ ಎನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ರೆಸ್ಟೋರೆಂಟ್‌ನಲ್ಲಿ ಎಷ್ಟಾದರೂ ವೈನ್ ಕುಡಿಯಬಹುದು!

ಇಟಲಿಯಲ್ಲಿನ ವೆರೋನಾದಲ್ಲಿರುವ ಅಲ್ ಕಾಂಡೋಮಿನಿಯೊ ಹೆಸರಿನ ಇಟಾಲಿಯನ್ ರೆಸ್ಟೋರೆಂಟ್ ಗೆ ಭೇಟಿ ಕೊಡುವ ಗ್ರಾಹಕರಿಗೆ ಉಚಿತವಾಗಿ ವೈನ್ ದೊರೆಯುತ್ತದೆ. ಆದರೆ ಊಟಕ್ಕೆ ಕುಳಿತುಕೊಳ್ಳುವಾಗ ಗ್ರಾಹಕರ ಬಳಿ ಮೊಬೈಲ್ ಫೋನ್ ಗಳು ಇರಬಾರದು. ರೆಸ್ಟೋರೆಂಟ್ ಗೆ ಪ್ರವೇಶಿಸಿದ ಕೂಡಲೇ ಮೊಬೈಲ್ ಫೋನ್ ಅನ್ನು ಸಿಬ್ಬಂದಿ ಬಳಿ ಒಪ್ಪಿಸಿಬಿಡಬೇಕು.

ಮೊಬೈಲ್‌ ಸೈಡಿಗಿಟ್ಟು ವೈನ್‌ ಕುಡಿಯಿರಿ!

ಇದೇ ಉದ್ದೇಶಕ್ಕಾಗಿ ಒಂದು ಬಾಟಲ್ ವೈನ್ ಅನ್ನು ಫ್ರೀ ಆಗಿ ಕೊಟ್ಟಿರಬಹುದು ಎಂದು ಅನ್ನಿಸುತ್ತದೆ. ಆದರೆ ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೇ ಸಮಸ್ಯೆ ಆಗೋಗಿದೆ. ಪ್ರತಿ 5 ಸೆಕೆಂಡ್‌ಗೆ ಜನರು ತಮ್ಮ ಫೋನ್ ನೋಡುತ್ತಾ ಇರುತ್ತಾರೆ. ಆದರೆ ಆಗಾಗ ಫೋನ್ ನೋಡುವ ಅವಶ್ಯಕತೆ ಜನರಿಗೆ ಇಲ್ಲ ಕಾಣಿಸುತ್ತದೆ. ಈ ರೆಸ್ಟೊರೆಂಟ್‌ನಲ್ಲಿ ಜನರು ಸ್ವಲ್ಪ ಕಾಲ ಮೊಬೈಲ್ ಪಕ್ಕಕ್ಕೆ ಇಟ್ಟು ವೈನ್ ಕುಡಿಯಬೇಕು. ವೈನ್ ಕುಡಿದು ಮುಗಿಸುವವರೆಗೆ ಜನರು ಮೋನ್ ಮುಟ್ಟುವಂತಿಲ್ಲ.

ಇನ್ ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ನ ಆಫರ್, ಕಂಡೀಷನ್ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ. ಪೋಸ್ಟ್ ಗೆ ಸುಮಾರು 68000 ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ತಮಾಷೆ ಸಹ ಮಾಡಿದ್ದಾರೆ.

ರೆಸ್ಟೋರೆಂಟ್ ಮಾಲೀಕರ ಈ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ ನೆಟ್ಟಿಗರೊಬ್ಬರು, ಗ್ರಾಹಕರು ತಮ್ಮ ಸಮಯವನ್ನು ಆನಂದಿಸಲು ಈ ಮಾಲೀಕರು ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ನಿಜಕ್ಕೂ ಮಾಲೀಕರು ಒಳ್ಳೆಯ ಮನುಷ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading

LATEST NEWS

ರಜೆಯಿದೆ ಎಂದು ಪ್ರವಾಸಕ್ಕೆ ಹೊರಟಿದ್ದೀರಾ? ಗಮನಿಸಿ, ಈ ಪ್ರವಾಸಿ ತಾಣಗಳಿಗಿದೆ ನಿರ್ಬಂಧ

Published

on

ಮೈಸೂರು : ಶುಕ್ರವಾರ ಮತದಾನ ನಡೆಯಲಿದೆ. ಶನಿವಾರ ಹಾಗೂ ಭಾನುವಾರ ರಜೆ ಇರುತ್ತೆ. ಹಾಗಾಗಿ ಮೈಸೂರಿಗೆ ಪ್ರವಾಸ ಬೆಳೆಸೋಣ ಅಂತ ನೀವಂದುಕೊಂಡಿದ್ರೆ ಅದು ಸಾಧ್ಯವಿಲ್ಲ. ಯಾಕೆಂದ್ರೆ, ಮೈಸೂರಿನ ಪ್ರವಾಸಿ ತಾಣಗಳು ಏಪ್ರಿಲ್ 26 ರಂದು ಬಂದ್ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಹೀಗಾಗಿ ಈ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಏಪ್ರಿಲ್ 26 ರಂದು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರು ರೆಸಾರ್ಟ್ ಬುಕ್ಕಿಂಗ್ ನಿರ್ಬಂಧ

ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಹಾಗಾಗಿ ಏಪ್ರಿಲ್ 25 ಹಾಗೂ 26 ರಂದು ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರ ಬುಕ್ಕಿಂಗ್ ಸ್ವೀಕರಿಸಬಾರದು ಎಂದು ಡಿಸಿ ಮೀನಾ ನಾಗರಾಜ್ ರೆಸಾರ್ಟ್ ಮಾಲಕರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

ನಂದಿ ಗಿರಿಧಾಮಕ್ಕೂ ನಿರ್ಬಂಧ :

ನಂದಿ ಗಿರಿಧಾಮಕ್ಕೂ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇತ್ತೀಚೆಗೆ ಆದೇಶ ಹೊರಡಿಸಿದೆ. ಏಪ್ರಿಲ್ 25 ಹಾಗೂ 26 ರಂದು ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Continue Reading

LATEST NEWS

Trending