Connect with us

    LATEST NEWS

    ದೂದ್ ಸಾಗರ್‌ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು – ಎರಡು ರೈಲುಗಳ ಸಂಚಾರ ರದ್ದು

    Published

    on

    ಕಾರವಾರ: ಕಲ್ಲಿದ್ದಲು ತುಂಬಿಕೊಂಡು ತೆರಳುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿ ಬಿದ್ದ ಘಟನೆ ಗೋವಾ-ಬೆಳಗಾವಿ-ಕಾರವಾರ ಗಡಿ ಭಾಗದಲ್ಲಿ ನಡೆದಿದ್ದು ಚಾಲನೆ ಮಾಡುತ್ತಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಲೋಂಧ ವಾಸ್ಕೋ ರೈಲು ಮಾರ್ಗದ ದೂದ್ ಸಾಗರ್‌ನಿಂದ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15 ರ ಸಮೀಪ ಈ ಘಟನೆ ನಡೆದಿದೆ. ವಾಸ್ಕೋದಿಂದ ಹೊಸಪೇಟೆಯಲ್ಲಿ ಜಿಂದಾಲ್ ಕಂಪನಿಗೆ ಗೂಡ್ಸ್‌ ರೈಲಿನಲ್ಲಿ ಕಲ್ಲಿದ್ದಲು ಸಾಗಿಸಲಾಗುತ್ತಿತ್ತು.

    ಶುಕ್ರವಾರ ಬೆಳಗ್ಗೆ 9:30ರ ವೇಳೆಗೆ ಈ ಘಟನೆ ನಡೆದಿದೆ. ಒಂದು ಕಾರ್ಗೋ ಕೋಚ್, 11 ಬೋಗಿಗಳು ರೈಲ್ವೇ ಹಳಿಯಿಂದ ಜಾರಿಬಿದ್ದು, ರೈಲು ಹಳಿ ಮುರಿದು ಬಿದ್ದಿದೆ.

    ಈ ಮಾರ್ಗದ ರೈಲು ಸಂಖ್ಯೆ 17309 ಯಶವಂತಪುರ ದಿಂದ ವಾಸ್ಕೋಡಿ ಹಾಗೂ 17310 ವಾಸ್ಕೋಡಿಯಿಂದ ಯಶವಂತಪುರಕ್ಕೆ ಹೋಗುವ ಎರಡು ರೈಲುಗಳು ರದ್ದು ಮಾಡಲಾಗಿದೆ. ಇಂದು ಸಂಜೆ ತೆರಳುವ ಗೋವಾ ಎಕ್ಸ್‌ಪ್ರೆಸ್ ರೈಲನ್ನು ಇತರೇ ಮಾರ್ಗದಲ್ಲಿ ತಿರುಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸದ್ಯ ಹಳಿಯಿಂದ ಹೊರಹೋದ ಗೂಡ್ಸ್ ರೈಲನ್ನು ಮೇಲೆತ್ತುವ ಕಾರ್ಯ ಪ್ರಾರಂಭವಾಗಿದೆ.

    LATEST NEWS

    ಜ್ಯೂಸ್‌ನಲ್ಲಿ ಮೂತ್ರ ಮಿಕ್ಸ್‌..! ಅಂಗಡಿ ಮಾಲೀಕ ಪೊಲೀಸ್ ವಶಕ್ಕೆ..!

    Published

    on

    ಉತ್ತರ ಪ್ರದೇಶ : ಜ್ಯೂಸ್‌ಗೆ ಮೂತ್ರ ಬೆರೆಸಿ ಗ್ರಾಹಕರಿಗೆ ನೀಡುತ್ತಿದ್ದ ಜ್ಯೂಸ್ ಅಂಗಡಿ ಮಾಲೀಕ ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಜ್ಯೂಸ್ ಕುಡಿದ ಜನರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.


    ಬಿಸಿಲಿನ ತಾಪಕ್ಕೆ ಜ್ಯೂಸ್ ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತಿದ್ದ ಜನರಿಗೆ ಜ್ಯೂಸ್ ಅಂಗಡಿಯವ ಮೂತ್ರ ಕುಡಿಸಿದ ಘಟನೆ ಇದು. ಇದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಸದ್ಯ ಅಂಗಡಿ ಮಾಲೀಕ ಪೊಲೀಸರ ಅತಿಥಿಯಾಗಿದ್ದಾನೆ. ಜ್ಯೂಸ್ ಕುಡಿದ ಜನರಿಗೆ ಅದರ ರುಚಿ ಹಾಗೂ ವಾಸನೆಯಿಂದ ಅನುಮಾನ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜ್ಯೂಸ್ ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಸೀಲ್ ಮಾಡಿದ ಕ್ಯಾನ್‌ನಲ್ಲಿ ಮೂತ್ರ ತುಂಬಿಸಿಟ್ಟಿದ್ದು ಕಂಡು ಬಂದಿದೆ.


    ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ್ದ ಜನರು ಅಂಗಡಿ ಮಾಲೀಕ ಸಮೀರ್ ಎಂಬಾತನ್ನು ಹಿಡಿದು ಸರಿಯಾಗಿ ಗೂಸ ನೀಡಿದ್ದಾರೆ. ಬಳಿಕ ಅಂಗಡಿಯನ್ನು ಸೀಝ್‌ ಮಾಡಿದ ಪೊಲೀಸರು ಕ್ಯಾನ್‌ನಲ್ಲಿದ್ದ ಮೂತ್ರವನ್ನು ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಿದ್ದಾರೆ. ಜ್ಯೂಸ್ ಅಂಗಡಿಯಲ್ಲಿ ಮೂತ್ರ ಸ್ಟಾಕ್ ಇಟ್ಟ ಬಗ್ಗೆ ಅಂಗಡಿ ಮಾಲೀಕ ಪೊಲೀಸರಿಗೆ ಯಾವುದೇ ಸಮಜಾಯಿಶಿ ನೀಡಿಲ್ಲ. ಹೀಗಾಗಿ ಈತ ಜ್ಯೂಸ್ ಜೊತೆಯಲ್ಲಿ ಜನರಿಗೆ ಮೂತ್ರ ಮಿಕ್ಸ್ ಮಾಡಿ ಕೊಡ್ತಾ ಇದ್ದ ಅನ್ನೋದು ಖಾತ್ರಿಯಾಗಿದೆ.

    Continue Reading

    LATEST NEWS

    ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು

    Published

    on

    ಮುಂಬೈ: ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಸಜ್ಜಾಗುತ್ತಿದ್ದು, ಎಲ್ಲರ ಕಣ್ಣು ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಈಗಾಗಲೇ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿರುವ ಅನುಭವಿ ಬ್ಯಾಟರ್ ಇದೀಗ ಟೆಸ್ಟ್ ಮತ್ತು ಏಕದಿನ ಸಾಂಪ್ರದಾಯಿಕ ಮಾದರಿಯಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ.

    ಅವರ ವೃತ್ತಿಜೀವನವು ಮಹತ್ವದ ಮೈಲಿಗಲ್ಲು ಸಮೀಪಿಸುತ್ತಿರುವಾಗ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ ಅವರ ಪೌರಾಣಿಕ ದಾಖಲೆಯನ್ನು ಮೀರಿಸಲು ಕೊಹ್ಲಿ ಕೇವಲ 58 ರನ್‌ಗಳ ಅಂತರದಲ್ಲಿ ನಿಂತಿದ್ದಾರೆ.

    ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27,000 ರನ್ ಗಳಿಸಿದ ಕ್ರಿಕೆಟಿಗನಾಗಲು ಕೊಹ್ಲಿಗೆ ಕೇವಲ 58 ರನ್‌ಗಳ ಅಗತ್ಯವಿದೆ. ಪ್ರಸ್ತುತ, ಸಚಿನ್ ತೆಂಡೂಲ್ಕರ್ ಎಲ್ಲಾ ಸ್ವರೂಪಗಳಲ್ಲಿ 623 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ದಾಖಲೆಯನ್ನು ಹೊಂದಿದ್ದಾರೆ. 226 ಟೆಸ್ಟ್ ಇನ್ನಿಂಗ್ಸ್, 396 ODI ಇನ್ನಿಂಗ್ಸ್, ಮತ್ತು 1 T20I ಇನ್ನಿಂಗ್ಸ್. 591 ಇನ್ನಿಂಗ್ಸ್‌ಗಳಲ್ಲಿ 26,942 ರನ್ ಗಳಿಸಿರುವ ಕೊಹ್ಲಿ, 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಹಿಮ್ಮೆಟ್ಟಿಸಲು ಸಜ್ಜಾದಂತಿದೆ.

    ಕೊಹ್ಲಿ 600ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪುವ ನಿರೀಕ್ಷೆಯು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.

    Continue Reading

    LATEST NEWS

    ತಂದೆಯ ಪ್ರತೀಕಾರ ತೀರಿಸಲು ಸಜ್ಜಾದ ಉಗ್ರ ಹಮ್ಜಾ ಬಿನ್ ಲಾಡೆನ್..!

    Published

    on

    ಮಂಗಳೂರು/ನವದೆಹಲಿ : 9/11 ಅಮೆರಿಕಾ ಟ್ವಿನ್‌ ಟವರ್ ಮೇಲೆ ವೈಮಾನಿಕ ದಾಳಿಯ ಮಾಸ್ಟರ್‌ ಮೈಂಡ್‌ ಒಸಾಮಾ ಬಿನ್‌ ಲಾಡೆನ್ ಪುತ್ರ ಹಮ್ಜಾ ಬಿನ್‌ ಲಾಡೆನ್ ಜೀವಂತವಾಗಿದ್ದಾನೆ. ಆತ ಭ*ಯೋತ್ಪಾದಕ ಗುಂಪನ್ನು ಸಕ್ರಿಯವಾಗಿ ಮುನ್ನಡೆಸ್ತಾ ಇದ್ದಾನೆ ಎಂಬ ಗುಪ್ತಚರ ವರದಿ ಲಭ್ಯವಾಗಿದೆ.

    2019 ರಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್‌ ಪುತ್ರ ಹಮ್ಜಾ ಬಿನ್ ಲಾಡೆನ್‌ ಸದ್ಯ ತಾಲಿಬಾನ್ ನಾಯಕರ ಸಂಪರ್ಕದಲ್ಲಿ ಇದ್ದಾನೆ ಎಂಬ ಮಾಹಿತಿ ಕೂಡ ಇದೆ. ಅಲ್‌ ಖೈದಾ ಸಂಘಟನೆಯನ್ನು ಮತ್ತೆ ಪುನರ್‌ಸ್ಥಾಪಿಸಲು ಹಮ್ಜಾ ಬಿನ್ ಲಾಡೆನ್‌ ಪ್ರಯತ್ನ ನಡೆಸಿದ್ದಾನೆ ಎಂದು ಗುಪ್ತಚರ ವರದಿ ಹೇಳಿದೆ.

    ತಾಲಿಬಾನ್ ನಾಯಕರ ಜೊತೆ ಸಭೆಗಳನ್ನು ನಡೆಸುತ್ತಿರುವ ಹಮ್ಜಾ ಬಿನ್ ಲಾಡೆನ್‌ನನ್ನು ತಾಲಿಬಾನ್ ರಕ್ಷಣೆ ಮಾಡುತ್ತಿದ್ದು, ಇದು ಅಲ್‌ ಖೈದಾ ಮತ್ತು ತಾಲಿಬಾನ್ ನಡುವಿನ ಈ ಸಂಬಂಧ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಇರಾಕ್ ಯುದ್ಧದ ನಂತರ ಅಲ್‌ ಖೈದಾ ಸಂಘಟನೆಯನ್ನು ಅತ್ಯಂತ ಪ್ರಬಲವಾಗಿ ಕಟ್ಟಲಾಗುತ್ತಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

    34 ವರ್ಷದ ಹಮ್ಜಾ ಕಾಬೂಲ್‌ನಿಂದ ಪೂರ್ವಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜಲಾಲಾಬಾದ್‌ನಲ್ಲಿ ನೆಲೆಸಿದ್ದಾನೆ. ಅವನ ಗುರಿ ಪಾಶ್ಚಿಮಾತ್ಯ ದೇಶಗಳಾಗಿದ್ದು, ಭವಿಷ್ಯದಲ್ಲಿ ಈ ದೇಶಗಳ ಮೇಲೆ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಆತನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಕೂಡ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾನೆ.

    ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹಮ್ಜಾ ಮತ್ತು ಅವನ ನಾಲ್ವರು ಪತ್ನಿಯರು ಇರಾನ್‌ನಲ್ಲಿ ಆಶ್ರಯ ಪಡೆದಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಹಮ್ಜಾ ಬಿನ್ ಲಾಡೆನ್ ಯಾರು?

    ಹಮ್ಜಾ ಬಿನ್‌ ಲಾಡೆನ್‌ ಜಿಹಾದ್‌ನ ರಾಜಕುಮಾರ ಎಂದು ಕು*ಖ್ಯಾತಿಯನ್ನು ಪಡೆದುಕೊಂಡ ಉ*ಗ್ರನಾಗಿದ್ದಾನೆ. ಒಸಾಮಾ ಬಿನ್‌ ಲಾಡೆನ್‌ ನ 20 ಮಕ್ಕಳಲ್ಲಿ ಈತ 15ನೇಯವನು . ಒಸಾಮಾ ಬಿನ್ ಲಾಡೆನ್‌ನ ಮೂರನೇ ಹೆಂಡತಿಯಲ್ಲಿ ಈತ ಜನಿಸಿದ್ದಾನೆ. 9/11 ರ ದಾಳಿಯ ಮೊದಲು ಅಫ್ಘಾನಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್‌ ಜೊತೆ ಹಾಜರಿದ್ದ ಈತ ವಿಡಿಯೋ ಸಂದೇಶದಲ್ಲೂ ತಂದೆಯ ಜೊತೆ ಕಾಣಿಸಿಕೊಂಡಿದ್ದ.

    ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಯುವಕ

    ದಾ*ಳಿಯಲ್ಲಿ ಹ*ತನಾಗಿದ್ದಾನೆ ಎಂದು ಟ್ರಂಪ್ ಘೋಷಣೆ :

    2019 ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮ್ಜಾ ಬಿನ್ ಲಾಡೆನ್ ಹತನಾಗಿದ್ದಾನೆ ಎಂದು ಘೋಷಣೆ ಮಾಡಿದ್ದರು. ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ನಡೆದ ಭ*ಯೋತ್ಪಾನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹಮ್ಜಾನನ್ನು ಕೊ*ಲ್ಲಲಾಗಿದೆ ಎನ್ನಲಾಗಿತ್ತು. ಆದ್ರೆ, ಆತನ ಮ*ರಣವನ್ನು ದೃಢೀಕರಿಸಲು ಡಿಎನ್‌ಎ ಸಾಕ್ಷ್ಯಗಳು ಲಭಿಸಿರಲಿಲ್ಲ.

    Continue Reading

    LATEST NEWS

    Trending