LATEST NEWS
ಸಿಂಗಂ ಸ್ಟೈಲ್‌ನಲ್ಲಿ ಕಳ್ಳರನ್ನು ಬೆನ್ನಟ್ಟಿದ ಎಎಸ್‌ಐ ವರುಣ್ ತಂಡಕ್ಕೆ 10 ಸಾವಿರ ನಗದು ಬಹುಮಾನ
Published
3 years agoon
By
Adminಮಂಗಳೂರು: ಸಿನಿಮೀಯಾ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್ ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ 10 ಸಾವಿರ ರೂಪಾಯಿ ನಗದು ಘೋಷಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ವರುಣ್ ಹಾಗೂ ಕಿರಿಯ ಸಿಬ್ಬಂದಿ ಓಡಿ ಹೋಗಿ ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ಮೂವರು ಭಾಗಿಯಾಗಿದ್ದರು. ಸದ್ಯ ಈ ವೀಡಿಯೋ ವೈರಲ್ ಆಗಿದೆ. ಘಟನೆಯು ನಗರ ಹೃದಯಭಾಗದ ಸ್ಟೇಟ್‌ಬ್ಯಾಂಕ್ ಬಳಿ ನಡೆದಿದೆ.
LATEST NEWS
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯುತ್ತೆ ಗೊತ್ತಾ ?
Published
2 hours agoon
22/12/2024By
NEWS DESK3ಮಂಗಳೂರು/ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದ್ದು ಇಂದು ಕೊನೆ ದಿನವಾಗಿದೆ. ಇನ್ನು ಮುಂದಿನ ಅಂದರೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗಣಿನಾಡು ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಇನ್ನೂ ಮಂಡ್ಯದಲ್ಲಿ ನಡೆದ 87ನೇ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದ ಜನರು ಯಶಸ್ವಿಗೊಳಿಸಿದ್ದಾರೆ. ಸಮಾರಂಭದಲ್ಲಿ ಸಾಕಷ್ಟು ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಎಲ್ಲವೂ ಜನರ ಗಮನ ಸೆಳೆದಿವೆ. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ವಿಶೇಷ ಚೇತನರ ಗೋಷ್ಠಿ ಯಶಸ್ವಿಯಾಗಿದೆ. ದಾಖಲೆ ಮಟ್ಟದಲ್ಲಿ ಜನ ಕನ್ನಡ ಹಬ್ಬಕ್ಕೆ ಬಂದು ಯಶಸ್ವಿಗೊಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಇಂದಿನಿಂದ ಕನ್ನಡದ ಹಬ್ಬ
ಸಮಾರೋಪ ಸಮಾರಂಭ
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರೋಪ ಸಮಾರಂಭದ ಕಡೆಯಲ್ಲಿ ಸಮ್ಮೇಳನದ ನಿರ್ಣಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತಿ ಇರಲಿದ್ದಾರೆ.
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ನಿನ್ನೆ (ಡಿಸೆಂಬರ್ 21) ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರದೊಂದಿಗೆ ಬಳ್ಳಾರಿ ಜನ ಖುಷಿಯಾಗಿದ್ದು, ಬಿಸಿಲೂರಿನಿಂದ ಸರ್ವತ್ರ ಕನ್ನಡ ಕಂಪು ಹರಡಲು ಮುಂದಾಗಿದ್ದಾರೆ.
66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ
1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಸುದೀರ್ಘ 66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ ದಕ್ಕಿದೆ.
International news
WWE ಫ್ಯಾನ್ಸ್ ಗೆ ಆಘಾತ: ರೇಯ್ ಮಿಸ್ಟೀರಿಯೋ ನಿಧನ !
Published
3 hours agoon
22/12/2024By
NEWS DESK3ಮಂಗಳೂರು/ಮೆಕ್ಸಿಕೊ: ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ನೋಡೋದೇ ಒಂದು ಆನಂದವಾಗಿತ್ತು. 66 ವರ್ಷದ ರೇ ಮಿಸ್ಟೀರಿಯೋ ಸೀನಿಯರ್ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.
WWE ಸ್ಟಾರ್ ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ರೇಯ್ ಮಿಸ್ಟೀರಿಯೋ, 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್. ರೇಯ್ ಮಿಸ್ಟೀರಿಯೋ ಫೈಟಿಂಗ್ ಹಾಗೂ ಪಲ್ಟಿ ಹೊಡೆಯೋ ಸ್ಟೈಲ್ ಅಷ್ಟು ರೋಮಾಂಚನಕಾರಿ.
ಇದನ್ನೂ ಓದಿ: ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮಿಸ್ಟೀರಿಯೋ ಸೀನಿಯರ್ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ಮಿಸ್ಟೀರಿಯೋ ಸೀನಿಯರ್ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.
ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು.
ಕುಸ್ತಿ ಪ್ರಪಂಚದ ಮೇಲೆ ರೇ ಮಿಸ್ಟೀರಿಯೋ ಸೀನಿಯರ್ ಅವರ ಪ್ರಭಾವವು ಮುಂದಿನ ಪೀಳಿಗೆಯೂ ಕೂಡ ನೆನಪಿಸುವಂತೆ ಮಾಡುತ್ತದೆ. ಅವರ ವಿಶಿಷ್ಟ ಶೈಲಿಯ ಫೈಟಿಂಗ್ ಗಳು, ರಿಂಗ್ ನಲ್ಲಿ ಆಡುವ ರೀತಿ, ಪಲ್ಟಿ ಹೊಡೆಯೋ ಸ್ಟೈಲ್ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿತ್ತು. ಆದರೆ ಇವರ ನಿಧನ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅತೀವ ದುಃಖ ಉಂಟುಮಾಡಿದೆ.
ಉಡುಪಿ: ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್‌ಸ್ಕೀ ಬೋಟ್ ಮ*ಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಕೀ ರೈಡರ್ ನಾ*ಪತ್ತೆಯಾದ ಘಟನೆ ಉಡುಪಿಯ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ (ಡಿ.21) ಸಂಜೆ ಸಂಭವಿಸಿದೆ.
ಜೆಟ್ ಸ್ಕೀ ರೈಡರ್ ರವಿದಾಸ್ (45) ನಾ*ಪತ್ತೆಯಾಗಿದ್ದು, ಮತ್ತೋರ್ವ ಬೆಂಗಳೂರಿನ ಪ್ರವಾಸಿಗನನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ : ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!
ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದ ಸಂದರ್ಭ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮ*ಗುಚಿ ಬಿದ್ದಿತ್ತು. ರೈಡ್‌ಗೆ ಹೋಗುವ ಮುನ್ನ ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್‌ಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ. ನಾ*ಪತ್ತೆಯಾದ ರೈಡರ್ ಮುರುಡೇಶ್ವರ ಮೂಲದ ರವಿದಾಸ್ ನ ಶೋ*ಧ ಕಾರ್ಯ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!
ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- LATEST NEWS4 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- BIG BOSS2 days ago
ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
- DAKSHINA KANNADA5 days ago
ಸಾವಿರ ಕಂಬದ ಬಸದಿಗೆ ಜಪಾನ್ನಿಂದ ಬಂದ ಅತಿಥಿಗಳು