ಕಾಬೂಲ್: ತಾಲಿಬಾನಿ ಆಡಳಿತದಲ್ಲಿ ಮಹಿಳೆಯರಿಗಾಗಿ ಕಠಿಣ ನಿಯಮಗಳು ಮತ್ತು ಕಾನೂನುಗಳನ್ನ ಮಾಡಲಾಗಿದ್ದು, ಇದು ಮಾನವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ. ಶರಿಯಾ ಕಾನೂನಿನ ಪ್ರಕಾರ, ಮಹಿಳೆಯರ ಎಲ್ಲಾ ಹಕ್ಕುಗಳನ್ನ ಕಸಿದುಕೊಳ್ಳಲಾಗಿದೆ. 2001ರಲ್ಲಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ಆಳ್ವಿಕೆ ಮಾಡಿದಾಗ, ಮಹಿಳೆಯರು ಸಾಕಷ್ಟು ಕಷ್ಟಗಳನ್ನ ಅನುಭವಿಸಿದ್ದರು. ದೈನಂದಿನ ಜೀವನದಲ್ಲಿ ಮತ್ತೊಮ್ಮೆ ಮಹಿಳೆಯರು ಮತ್ತು ಹುಡುಗಿಯರು ಒಂದೇ ನಿಯಮಗಳ ಪ್ರಕಾರ ಬದುಕಬೇಕಾಗುತ್ತದೆ.
ಮಹಿಳೆಯರ ಜೀವನವನ್ನ ನರಕ ಮಾಡುವ ತಾಲಿಬಾನ್‌ನ 10 ನಿಯಮಗಳು ಇಂತಿವೆ.
1. ಯಾವುದೇ ಹತ್ತಿರದ ಸಂಬಂಧಿಗಳಿಲ್ಲದೆ ಮಹಿಳೆಯರು ಬೀದಿಗೆ ಹೋಗಲು ಸಾಧ್ಯವಿಲ್ಲ.
2. ಮಹಿಳೆಯರು ಮನೆಯಿಂದ ಹೊರಗೆ ಬರುವಾಗ ಬುರ್ಖಾ ಧರಿಸಬೇಕು.
2. ಹೈ ಹೀಲ್ಸ್ ಧರಿಸುವಂತಿಲ್ಲ. ಯಾಕಂದ್ರೆ, ಪುರುಷರು ಮಹಿಳೆಯರು ಬರುವ ಶಬ್ದವನ್ನ ಕೇಳುವಂತಿಲ್ಲ.
3. ಸಾರ್ವಜನಿಕ ಸ್ಥಳದಲ್ಲಿ ಅಪರಿಚಿತರ ಮುಂದೆ ಮಹಿಳೆಯ ಧ್ವನಿ ಕೇಳಬಾರದು.
4. ನೆಲಮಹಡಿಯ ಮನೆಗಳಲ್ಲಿರುವ ಕಿಟಕಿಗಳಿಗೆ ಬಣ್ಣ ಬಳಿಯಬೇಕು, ಇದರಿಂದ ಮನೆಯೊಳಗಿನ ಮಹಿಳೆಯರು ಕಾಣುವುದಿಲ್ಲ.
5. ಮಹಿಳೆಯರನ್ನು ಫೋಟೋ ತೆಗೆದುಕೊಳ್ಳುವಂತಿಲ್ಲ. ಅವ್ರ ಛಾಯಾಚಿತ್ರಗಳನ್ನ ಪತ್ರಿಕೆಗಳು, ಪುಸ್ತಕಗಳು ಮತ್ತು ಮನೆಯಲ್ಲಿ ನೋಡಬಾರದು.
6. ಯಾವುದೇ ಪದದ ಹೆಸರಿನಿಂದ ಸ್ತ್ರೀ ಪದವನ್ನ ತೆಗೆದುಹಾಕಬೇಕು.
7. ಬಾಲ್ಕನಿಯಲ್ಲಿ ಅಥವಾ ಮನೆಯ ಕಿಟಕಿಯಲ್ಲಿ ಮಹಿಳೆಯರು ಕಾಣಿಸುವಂತಿಲ್ಲ.
8. ಮಹಿಳೆಯರು ಯಾವುದೇ ಸಾರ್ವಜನಿಕ ಕೂಟದ ಭಾಗವಹಿಸುವಂತಿಲ್ಲ.
9. ಮಹಿಳೆಯರು ಉಗುರು ಬಣ್ಣವನ್ನು ಹಚ್ಚುವಂತಿಲ್ಲ.
10. ಮಹಿಳೆಯರು ಇಷ್ಟಪಟ್ಟು ಮದುವೆಯಾಗುವ ಬಗ್ಗೆ ಯೋಚಿಸುವಂತಿಲ್ಲ.
ಈ ನಿಯಮಗಳನ್ನು ಅನುಸರಿಸದಿದ್ದರೆ, ಭಯಾನಕ ಶಿಕ್ಷೆ (ತಾಲಿಬಾನಿ ಶಿಕ್ಷೆ)
ತಾಲಿಬಾನ್ ತನ್ನ ಭಯಾನಕ ಶಿಕ್ಷೆಗಳಿಗೆ ಕುಖ್ಯಾತವಾಗಿದೆ. ಮಹಿಳೆಯರಿಗಾಗಿ ಮಾಡಿದ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅವ್ರು ಕ್ರೂರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ತಾಲಿಬಾನ್ ಆಳ್ವಿಕೆಯಲ್ಲಿ ಸಾರ್ವಜನಿಕ ಅವಮಾನ ಮತ್ತು ಮಹಿಳೆಯರನ್ನ ಹತ್ಯೆ ಮಾಡುವುದು ಸಾಮಾನ್ಯ ಶಿಕ್ಷೆಯಾಗಿದೆ. ವ್ಯಭಿಚಾರ ಅಥವಾ ಅಕ್ರಮ ಸಂಬಂಧಗಳಿಗಾಗಿ ಮಹಿಳೆಯರನ್ನ ಸಾರ್ವಜನಿಕವಾಗಿ ಕೊಲ್ಲಲಾಗುತ್ತದೆ. ಬಟ್ಟೆ ಧರಿಸಲು ಅದೇ ಶಿಕ್ಷೆಯನ್ನ ನೀಡಲಾಗುತ್ತದೆ. ಅರೇಂಜ್ಡ್ ಮದುವೆಯಿಂದ ಹುಡುಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಆಕೆಯ ಮೂಗು ಮತ್ತು ಕಿವಿಗಳನ್ನು ಕತ್ತರಿಸಿ ಸಾಯಿಸಲಾಗುತ್ತೆ. ಮಹಿಳೆಯರು ತಮ್ಮ ಉಗುರುಗಳಿಗೆ ಬಣ್ಣ ಹಚ್ಚಿದರೆ, ಅವರ ಬೆರಳುಗಳನ್ನ ಕತ್ತರಿಸುವ ಕ್ರೂರ ಶಿಕ್ಷೆ ನೀಡಲಾಗುತ್ತದೆ.