ಕೊರೊನಾ ನಿಯಂತ್ರಿಸಲು ಸೆಣಸಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಕಂಟಕವಾದ ವೈರಸ್..!!
Published
5 years agoon
By
Adminಕೊರೊನಾ ನಿಯಂತ್ರಿಸಲು ಸೆಣಸಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಕಂಟಕವಾದ ವೈರಸ್..!!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನ ಹೋದಂತೆ ಹೆಚ್ಚುತ್ತಿರುವುದಲ್ಲದೇ,
ಈ ನಡುವೆ ಕೊರೊನಾ ನಿಯಂತ್ರಿಸಲು ಸೆಣಸಾಡುತ್ತಿರುವ ವೈದ್ಯರಿಗೆ ಮತ್ತು ಕಾನೂನು ಪರಿಪಾಲನೆಗೆ ಶ್ರಮಿಸುತ್ತಿರುವ ಪೊಲೀಸರಿಗೂ ಸೋಂಕು ತಗುಲುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಜೊತೆಗೆ ವೈರಸ್ ನಿಯಂತ್ರಣ ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಇತ್ತ ಜೂನ್ 30ರ ಮಂಗಳವಾರ ಒಂದೇ ದಿನ ಕೋವಿಡ್ ಆಸ್ಪತ್ರೆಯ ಮುಖ್ಯ ವೈದ್ಯರ ಸಹಿತ ವಿವಿಧ ಆಸ್ಪತ್ರೆಗಳ 10 ಮಂದಿ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದೊಂದು ವಾರದ ಅವಧಿಯಲ್ಲಿ ಹಲವು ಮಂದಿ ವೈದ್ಯರು ಸೋಂಕಿಗೊಳಗಾಗಿದ್ದು,
ರೋಗಿಗಳ ಮತ್ತು ಕೋವಿಡ್ 19 ಸೋಂಕು ದೃಢಪಟ್ಟ ವೈದ್ಯರ ಸಂಪರ್ಕದಲ್ಲಿದ್ದ ಸುಮಾರು 58ಕ್ಕೂ ಹೆಚ್ಚು ಮಂದಿ ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
ಇದೇ ವೇಳೆ ಮಂಗಳೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಪೊಲೀಸರು ಹಾಗೂ ಹೋಂ ಗಾರ್ಡ್‌ಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
You may like
ಧರ್ಮಸ್ಥಳ : 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ.3 ರ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನದಲ್ಲಿ ನಡೆಯಲಿದೆ.
‘ಮದುವೆ’ ಎನ್ನುವುದು ಅದೆಷ್ಟೋ ಜನರ ಸುಂದರ ಕನಸು. ಆದರೆ ಆರ್ಥಿಕ ಪರಿಸ್ಥಿತಿಯು ಆ ಖುಷಿಗೆ ಸಾಥ್ ನೀಡದೆ ಇರಬಹುದು. ಕೆಲವೊಮ್ಮೆ ಜೋಡಿಯ ಪವಿತ್ರ ಪ್ರೇಮಕ್ಕೆ ಕುಟುಂಬವೂ ಅಡ್ಡಿಯಾಗಬಹುದು. ಅಂತಹ ಯುವ ಜೋಡಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಶ್ರೀ ಕ್ಷೇತ್ರ ದರ್ಮಸ್ಥಳದಲ್ಲುಇ ನಡೆಯುವ ಸಾಮೂಹಿಕ ವಿವಾಹದ ಸದುಪಯೊಗವನ್ನು ಪಡೆದುಕೊಳ್ಳಬಹುದು.
ಎರಡನೇ ವಿವಾಹಕ್ಕೆ ನಿರ್ಬಂಧ ಹೇರಿದ್ದು, ಮೊದಲ ಮದುವೆಗೆ ಮಾತ್ರ ಆದ್ಯತೆ ನೀಡಲಾಗುವುದು. ಮಧುಮಗನಿಗೆ ಧೋತಿ, ಶಾಲು ನೀಡಲಾಗುವುದು. ಮಧುಮಗಳಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಹೂವಿನ ಹಾರ ಕೊಡಲಾಗುವುದು.
ಇದನ್ನೂ ಓದಿ : ಕಣ್ಣೀರು ಹಾಕುತ್ತಾ ಮಹಾಕುಂಭಮೇಳದಿಂದ ಹೊರ ನಡೆದ ಸುಂದರಿ ಸಾಧ್ವಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯ ಮೂಲಕವೇ ಮದುವೆಯ ಎಲ್ಲಾ ವೆಚ್ಚವನ್ನು ಮಾಡಲಾಗುವುದು. ಆಸಕ್ತರು 2025 ಫೆ.25 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08256-266644 ಸಂಖ್ಯೆಯನ್ನು ಸಂಪರ್ಕಿಸಬಹುದು.
LATEST NEWS
ಕಣ್ಣೀರು ಹಾಕುತ್ತಾ ಮಹಾಕುಂಭಮೇಳದಿಂದ ಹೊರ ನಡೆದ ಸುಂದರಿ ಸಾಧ್ವಿ
Published
42 minutes agoon
18/01/2025ಮಂಗಳೂರು/ಪ್ರಯಾಗ್‌ರಾಜ್ : ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾದ್ ನಲ್ಲಿ ನಡೆಯುತ್ತಿದ್ದು, ಬಹಳ ಅಟ್ರ್ಯಾಕ್ಟಿವ್ ಆಗಿದ್ದ ಸುಂದರ ಸಾಧ್ವಿ ಹರ್ಷ ರಿಚಾರಿಯಾ ಕಣ್ಣೀರು ಹಾಕುತ್ತಾ ಮಹಾ ಕುಂಭದಿಂದ ಹೊರ ಬಂದಿದ್ದಾರೆ.
ಮಹಾಕುಂಭ ಮೇಳದಲ್ಲಿ ಲಕ್ಷಗಟ್ಟಲೆ ಭಕ್ತಾದಿಗಳು, ಸಾಧು-ಸಂತರು ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. ಅಲ್ಲದೆ ಇದು ಅನೇಕ ವಿಶೇಷತೆಗಳಿಗೆ ಕಾರಣವಾಗಿದೆ. ಹಲವು ವಿಶೇಷತೆಗಳನ್ನು ಮೆರೆಯುವಂತಹ ಸಾಧು ಸಂತರು, ನಾಗಸಾಧುಗಳು ಕಂಡು ಬರುತ್ತಿದ್ದಾರೆ. ಇದರೆಡೆಯಲ್ಲಿ ಬಹಳ ಪ್ರಮುಖ ಆಕರ್ಷಣೆಯಾಗಿ ಕಂಡುಬಂದದ್ದು ಸುರಸುಂದರಿಯಾದ ಸಾಧ್ವಿ ಹರ್ಷ ರಿಚಾರಿಯಾ. ಆದರೆ ಈ ಸಾಧ್ವಿ ಇದೀಗ ಅಳುತ್ತಾ ಕುಂಭಮೇಳದಿಂದ ಹೊರ ಬಂದಿದ್ದಾರೆ. ರಿಚಾರಿಯಾ ಅಚಾನಕ್ ಕುಂಭಮೇಳವನ್ನು ಅರ್ಧದಲ್ಲಿಯೇ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಕಣ್ಣೀರು ಹಾಕುತ್ತಾ ಗಂಭೀರ ಆರೋಪ ಮಾಡಿದ್ದಾರೆ. ‘ನಾಚಿಕೆ ಆಗಬೇಕು ಆ ಜನಕ್ಕೆ, ನಾನು ಇಲ್ಲಿ ಮಹಾಕುಂಭದಲ್ಲಿ ಇರೋಕೆ ಬಿಡಲಿಲ್ಲ. ಈ ಕುಂಭಮೇಳ ನಮ್ಮ ಜೀವನದಲ್ಲಿ ಒಮ್ಮೆ ಬರುತ್ತೆ, ನೀವು ಅದನ್ನ ನನ್ನಿಂದ ಕಸಿದುಕೊಂಡಿದ್ದೀರಿ. ಈಗ ನಾನು ಏನೋ ದೊಡ್ಡ ತಪ್ಪು ಮಾಡಿದಂಗೆ ಅನಿಸುತ್ತಿದೆ. ನನ್ನದು ಯಾವ ತಪ್ಪೂ ಇಲ್ಲದಿದ್ದರೂ ನನ್ನ ಮೇಲೆ ಟೀಕೆ ಮಾಡ್ತಿದ್ದಾರೆ. ಇನ್ನು ಇಲ್ಲಿ ನಿಲ್ಲೋಕೆ ಆಗಲ್ಲ’ ಎಂದು ಹರ್ಷ ರಿಚಾಯಿಯಾ ಸಾರ್ವಜನಿಕರ ವಿದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿವಾದ:
ಮಹಾಕುಂಭಮೇಳ ಆರಂಭದಿಂದಲೂ ಹರ್ಷ ರಿಚಾರಿಯಾ ಭಾರೀ ಚರ್ಚೆಯಲ್ಲಿದ್ದಾರೆ. ಮಹಿಳಾ ವರದಿಗಾರ್ತಿಯೊಬ್ಬರು “ಇಷ್ಟು ನೀವು ಸುಂದರಿಯಾಗಿದ್ದರೂ ಏಕೆ ಸಾಧ್ವಿ ಆಗಿದ್ದೀರಿ?” ಎಂದು ಪ್ರಶ್ನಿಸಿದ್ದರು. ಆಗ ಹರ್ಷಾ ರಿಚಾರಿಯಾ, “ಧರ್ಮದ ಜೊತೆ ಇದ್ದಾಗ ನೆಮ್ಮದಿ ಸಿಗುತ್ತದೆ. ನಾನೀಗ 30 ವರ್ಷದವಳು, ಕಳೆದ 2 ವರ್ಷದ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದೇನೆ” ಎಂದಿದ್ದ ವಿಡಿಯೋ ವೈರಲ್ ಆದ ನಂತರ ಟ್ರೋಲ್‌ರ್‌ಗಳು ಸಾಧ್ವಿ ಹರ್ಷಾ ರನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಶುರು ಮಾಡಿದ್ದ ಹರ್ಷ ಆರು ವರ್ಷಗಳ ನಂತ್ರ ಆಧ್ಯಾತ್ಮಿಕದತ್ತ ಒಲವು ತೋರಿಸಿದ್ದರು. ನಿರೂಪಕಿಯಾಗಿ ಕೆಲಸ ಮಾಡ್ತಿದ್ದ ಹರ್ಷ, ಕಳೆದ ಎರಡು ವರ್ಷಗಳಿಂದ ಮಾಡೆಲಿಂಗ್ ಮತ್ತು ನಿರೂಪಣೆಯಿಂದ ದೂರವಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಂ ನಲ್ಲಿ ಸುಮಾರು ಹನ್ನೆರಡು ಲಕ್ಷ ಫಾಲೋವರ್ಸ್‌ಗಳನ್ನೂ ಹೊಂದಿದ್ದಾರೆ. ತಾನು ‘ಆಚಾರ್ಯ ಮಹಾಮಂಡಲೇಶ್ವರನ ಶಿಷ್ಯೆ’ ಎಂದು ಹೇಳಿಕೊಂಡಿದ್ದಾರೆ. ಸಧ್ಯ ಕಂಡು ಕೇಳರಿಯದ ಜನಸಾಗರದ ಮಧ್ಯೆ, ರಿಚಾರಿಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.
LATEST NEWS
ಬೈಕ್ ಅಪಘಾತಕ್ಕೆ ಬಲಿಯಾದ ಹೈಸ್ಕೂಲ್ ವಿದ್ಯಾರ್ಥಿ; ಪ್ರಕರಣದ ಬಳಿಕ ವಾರ್ನಿಂಗ್ ನೀಡಿದ ತಹಶೀಲ್ದಾರ್
Published
51 minutes agoon
18/01/2025By
NEWS DESK3ಕಡಬ : ಶಾಲೆಗೆ ಬೈಕ್ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕ ಮೃತ ಪಟ್ಟ ಘಟನೆ ನಿನ್ನೆ ಕಡಬದಲ್ಲಿ ನಡೆದಿತ್ತು. ಕಡಬದ ಕಲ್ಲುಗುಡ್ಡೆ ನಿವಾಸಿ ಅಶೀಶ್ ಎಂಬ 16 ವರ್ಷದ ವಿದ್ಯಾರ್ಥಿ ಅಪಘಾತದಲ್ಲಿ ಮೃತ ಪಟ್ಟಿದ್ದ.
ಈ ಘಟನೆಯ ಬಳಿಕ ಕಡಬ ವ್ಯಾಪ್ತಿಯಲ್ಲಿ ಅನೇಕ ಅಪ್ರಾಪ್ತ ಯುವಕರು ಬೈಕ್ ಚಲಾಯಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಕಾರ್ಯಪ್ರವೃತ್ತರಾದ ಕಡಬ ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಅಪ್ರಾಪ್ತರ ಕೈಲಿ ಬೈಕ್ ನೀಡಿದ ಪೋಷಕರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಬೈಕ್: ಸವಾರ ಸಾವು
ಅಷ್ಟೇ ಅಲ್ಲದೆ ಶಾಲಾ ಕಾಲೇಜುಗಳಿಗೆ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿದ್ಯಾರ್ಥಿಗಳು ತಾರದಂತೆ ಶಾಲಾ ಮುಖ್ಯೋಪಾಧ್ಯಯರು ಮತ್ತು ಪ್ರಾಂಶುಪಾಲರು ಸೂಚನೆ ನೀಡಬೇಕು ಹಾಗೂ ಪೋಷಕರಿಗೆ ಈ ಬಗ್ಗೆ ಸೂಚನೆ ನೀಡಬೇಕು.
ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಶಾಲೆಯ ಆಡಳಿತ ಹಾಗೂ ಮುಖ್ಯಸ್ಥರನ್ನೇ ಹೊಣೆಯಾಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಡಬ , ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
LATEST NEWS
ಚಿನ್ನ ಕಡಿಮೆ ಬೆಲೆಗೆ ನೀಡುವವರ ಬಗ್ಗೆ ಎಚ್ಚರ; ಮಂಗಳೂರಿನಲ್ಲಿ ಅಂಗಡಿಯವರೊಬ್ಬರನ್ನು ವಂಚಿಸಲು ಯತ್ನ
23 ವರ್ಷದ ಹಿಂದಿ ಕಿರುತೆರೆ ನಟ ಸಾವು
ಖ್ಯಾತ ಡಾಲಿ ಚಾಯ್ವಾಲ ಮಂಗಳೂರಿಗೆ ಆಗಮನ
ಸುಳ್ಯ: ಹೆಂಡತಿಯನ್ನು ಕೊಂ*ದು ಆ*ತ್ಮಹ*ತ್ಯೆಗೆ ಶರಣಾದ ಗಂಡ
ತಡೆಬೇಲಿಗೆ ಡಿಕ್ಕಿ ಹೊಡೆದು ಅಂಡರ್ಪಾಸ್ ಗೆ ಉರುಳಿದ ವಾಹನ; ಹಲವರಿಗೆ ಗಾಯ
ಮಂಗಳೂರು : ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಶಿಲಾನ್ಯಾಸ
Trending
- BIG BOSS7 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- BIG BOSS5 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS4 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS4 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?