Connect with us

LATEST NEWS

ಮರದಿಂದ ಬಿದ್ದು 1ತಿಂಗಳು ಕಳೆದರೂ ಯುವಕನ ಆಪ್‌ರೇಷನ್‌ಗಾಗಿ ಪರದಾಡುತ್ತಿರುವ ಆದಿವಾಸಿ ಕುಟುಂಬ

Published

on

ಶೃಂಗೇರಿ: ಶೃಂಗೇರಿ ಸಮೀಪದ ಹೊರನಾಡುವಿನಲ್ಲಿ ಆದಿವಾಸಿ ಯುವಕನೊಬ್ಬ ಮರದಿಂದ ಬಿದ್ದು ಸೊಂಟ, ಬೆನ್ನು ಮೂಳೆಗೆ ಗಂಭೀರ ಪೆಟ್ಟು ಬಿದ್ದು ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆ ತಿರುಗುತ್ತಾ ಹಣಕಾಸಿನ ಸಮಸ್ಯೆಯನ್ನು ಕೂಡಾ ಎದುರಿಸುತ್ತಿದ್ದಾರೆ. ಪರಿಣಾಮವಾಗಿ ಇದರಿಂದ ಮನೆ ಪರಿಸ್ಥಿತಿ ತೀರಾ ಹದಗೆಟ್ಟಿದೆ.

ಶ್ರೀನಿವಾಸ್ ಗೌಡ್ಲು (34) (ಮಲೆಕುಡಿಯ) ಎಂಬ ಆದಿವಾಸಿ‌ ಯುವಕನೊಬ್ಬ ತೋಟಗಳಲ್ಲಿ‌ ದುಡಿಯುವ ಕೂಲಿಯಾಳು. ಈತನ ಮನೆಯಲ್ಲಿ ಕೂಲಿ ಕೆಲಸ ಮಾಡುವ ವೃದ್ದ ತಂದೆ, ಅಂಗವಿಕಲ‌ ಅಣ್ಣ ಹಾಗೂ ತಾಯಿ ಇದ್ದಾರೆ.


ಇವರು ಆಗಸ್ಟ್ ರಂದು ಮನೆ ಸಮೀಪ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ಕಡಿಯುವಾಗ ಬಿದ್ದಿದ್ದು ದೊಡ್ಡ ಸರ್ಜರಿ ಅಗತ್ಯ ಬಿದ್ದುದರಿಂದ ಹತ್ತಿರದ ಸರಕಾರಿ ಆಸ್ಪತ್ರೆಗಳು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಓಡಾಡಲು ಕುಟುಂಬದಲ್ಲಿ ಯಾರೂ ಇಲ್ಲದ‌ ಇವರನ್ನು ಕಳೆದ ತಿಂಗಳು ಆಗಸ್ಟ್ 12 ರಂದು ನೆರೆಮನೆಯವರು ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೊಂಟ ಮುರಿದು ಎದ್ದು ನಿಲ್ಲಲು ಅಸಾಧ್ಯವಾದ ಪರಿರ್ಸತಿತಿಯಲ್ಲಿ ಇವರಿದ್ದಾರೆ.

ವೆನ್‌ಲಾಕ್ ಆಸ್ಪತ್ರೆಯವರು ದೊಡ್ಡ ಸರ್ಜರಿ ಆಗಿರುವುದರಿಂದ ಉಚಿತ ಚಿಕಿತ್ಸೆಗಾಗಿ ಬಿಪಿಎಲ್ ರೇಷನ್ ಕಾರ್ಡ್ ಹಾಜರು ಪಡಿಸಿ, ಔಷಧಿಗೆ ತಕ್ಷಣಕ್ಕೆ 40 ಸಾವಿರ ರೂಪಾಯಿ ಪಾವತಿಸಿ, ಉಳಿದದ್ದನ್ನು ನಂತರ ಪಾವತಿಸಿ ಎಂದು ವೈದ್ಯರು ಹೇಳಿದ್ದು ಖಾಲಿ ಜೇಬಿನ ಆದಿವಾಸಿ ಕುಟುಂಬ ಇದರಿಂದ ಕಂಗಾಲಾಗಿದೆ.

ಇವರ ದುರದೃಷ್ಟಕ್ಕೆ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ‌ ಯಾವುದೋ ತಾಂತ್ರಿಕ ಕಾರಣಕ್ಕೆ ಶ್ರೀನಿವಾಸ್ ಗೌಡ್ಲು‌ ಹೆಸರು ಅಳಿಸಿ ಹೋಗಿತ್ತು.


ಇವರ ನೆರವಿಗೆ ಬಂದ ಶೃಂಗೇರಿಯ ಸಾಮಾಜಿಕ ಕಾರ್ಯಕರ್ತರಾದ ಮಣಿಶೇಖರ್ ಮಂಗಳೂರಿನ ಡಿವೈಎಫ್ಐ ಕಚೇರಿಯನ್ನು ಸಂಪರ್ಕಿಸಿದರು. ಅಷ್ಟೊತ್ತಿಗೆ ಶ್ರೀನಿವಾಸ್ ವೆನ್ ಲಾಕ್ ಆಸ್ಪತ್ರೆಯಲ್ಲಿ ಕೈಕಾಲು ಅಲುಗಾಡಿಸದೆ ಅಂಗಾಂತ ಮಲಗಿ ಐದಾರು ದಿನ ಕಳೆದು ಹೋಗಿತ್ತು.‌

ಡಿವೈಎಫ್ಐ ಕಾರ್ಯಕರ್ತರು ವೆನ್‌ಲಾಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಿಪಿಎಲ್ ಇಲ್ಲದವರಿಗೆ ಆಪರೇಷನ್‌ಗೆ ಬೇಕಾದ ಔಷಧಿಗಳನ್ನು ಹೊರಗಡೆಯಿಂದ ತರಿಸಬೇಕಾದ ನಿಯಮಗಳನ್ನು ವಿವರಿಸಿ 40 ಸಾವಿರ ಕಟ್ಟಲೇಬೇಕು ಆ ನಂತರ ಯಾವುದೇ ಪಾವತಿ ಇರುವುದಿಲ್ಲ ಎಂಬುದನ್ನು ವಿವರಿಸಿದರು.

ನಂತರ ಈ ಸಂಘಟನೆ ಕುಟುಂಬದ ನೆರವಿಗೆ ಸಂಪೂರ್ಣವಾಗಿ ತೊಡಗಿಕೊಂಡಿತು.
ಪ್ರಯತ್ನದ ಫಲವಾಗಿ ಬಿಪಿಎಲ್ ರೇಷನ್ ಕಾರ್ಡ್ ಗೆ ಶ್ರೀನಿವಾಸ್ ಹೆಸರು ಸೇರ್ಪಡೆಗೊಂಡು ಹಾಗೂ ಆಯುಷ್ಮಾನ್ ಕಾರ್ಡ್ ಕೂಡಾ ಸಿದ್ಧಗೊಂಡಿತ್ತು.

ಇನ್ನು ಉಚಿತವಾಗಿ ಸರ್ಜರಿ ನಡೆಸಿ ಎಂದು ಬಿಪಿಎಲ್ ಕಾರ್ಡ್ ಹಾಜರು ಪಡಿಸಿದರೆ, ಬಿಪಿಎಲ್ ಕಾರ್ಡ್ ನಲ್ಲಿ ಹೊಸತಾಗಿ ಹೆಸರು ಸೇರ್ಪಡೆಗೊಂಡಿರುವುದರಿಂದ ಅದು ಕಂಪ್ಯೂಟರ್ ನಲ್ಲಿ ಸ್ವೀಕಾರಗೊಳ್ಳುತ್ತಿಲ್ಲ ಎಂದು ಆಸ್ಪತ್ರೆಯವರ ವಾದ.

ಕೊನೆಗೆ ಹಣ ಹೊಂದಿಸಿ 20ದಿನಗಳಿಂದ ಸ್ವಾಧೀನ ಕಳೆದುಕೊಂಡಿರುವ ಶ್ರೀನಿವಾಸ್ ಗೆ ಚಿಕಿತ್ಸೆ ಮುಂದುವರೆಸುವಂತೆ ವಿನಂತಿಸಿದರೂ ಈಗ ಮನೆಗೆ ಕರೆದೊಯ್ಯಿರಿ, ಎರಡು ತಿಂಗಳು ಕಳೆದ ಮೇಲೆ ಕರೆದು ಕೊಂಡು ಬನ್ನಿ ಎಂದು ಹೇಳಲಾಗಿದೆಯಂತೆ.

ನಂತರ ಮತ್ತೆ ಡಿವೈಎಫ್‌ಐ ಸಂಘಟನೆ ಆಸ್ಪತ್ರೆಯ ವೈದ್ಯರಲ್ಲಿ ಮಾತನಾಡಿ ಮನವೊಲಿಸಿ ಚಿಕಿತ್ಸೆ ಮುಂದುವರೆಸುವಂತೆ ಕೇಳಿಕೊಂಡಾಗ ವೈದ್ಯರು ಸಮ್ಮತಿಸಿದ್ದಾರೆ.

ಈ ಯುವಕನ ದಾರುಣ ಜೀವನದ ವಾಸ್ತವತೆಯ ಬಗ್ಗೆ ತಿಳಿಸಿರುವ ಡಿವೈಎಫ್‌ಐ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ‘ಸೊಂಟ ಮುರಿದು ಯಾರದೋ ಸಹಾಯದಿಂದ ಆಸ್ಪತ್ರೆಯಲ್ಲಿ ಅಲುಗಾಡದ ಸ್ಥಿತಿಯಲ್ಲಿ ಮಲಗಿದ ಆದಿವಾಸಿ ಸಮುದಾಯಕ್ಕೆ ಸೇರಿದ ತೀರಾ ಬಡ ಕುಟುಂಬದ ಶ್ರೀನಿವಾಸ‌ ಎಂಬ ಯುವಕನ ದಾರುಣ ಕತೆ ಇದು.

ದುಡ್ಡಿದ್ದವರು ಐಷಾರಾಮಿ ಆಸ್ಪತ್ರೆಗಳ ಡೀಲಕ್ಸ್ ಕೊಠಡಿಗಳಲ್ಲಿ ದಾಖಲಾಗುತ್ತಾರೆ. ಘಟಾನುಘಟಿ ವೈದ್ಯರು ಮದ್ಯರಾತ್ರಿಯಲ್ಲೂ ಧಾವಿಸಿ ಬಂದು ಚಿಕಿತ್ಸೆ ನೀಡುತ್ತಾರೆ.

ಅವರ ಕುಟುಂಬಸ್ಥರು ಬಯಸಿದಾಗಲೆಲ್ಲ ರೋಗಿಯ ಆರೋಗ್ಯದ ಅಪ್ಡೇಟ್ ಅವರ ಮುಂದೆ ಹಾಜರಿರುತ್ತದೆ. ಐಷಾರಾಮಿ ಹೊಟೇಲ್ ನ ರೀತಿಯ ವಾತಾವರಣದಲ್ಲಿ ಎಲ್ಲವೂ ನಡೆಯುತ್ತದೆ.
ಇದು ಆರೋಗ್ಯದ ವ್ಯಾಪಾರೀಕರಣದ ಸಂದರ್ಭದ ಸ್ಥಿತಿ.‌

ಧರ್ಮ, ಜಾತಿ ಅಸ್ಮಿತೆಗಳ ಚರ್ಚೆಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ಮೂಲಭೂತ ಪ್ರಶ್ನೆಗಳು ಯಾರಿಗೂ ಬೇಡ. ಮಂಗಳೂರಿನಲ್ಲಿ‌ ಎಂಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ತಲೆ ಎತ್ತಿ ನೋಡಿದಲ್ಲೆಲ್ಲ ಖಾಸಗಿ ಹೈಟೆಕ್ ಆಸ್ಪತ್ರೆಗಳೆಂಬ ವ್ಯಾಪಾರಿ ಕೇಂದ್ರಗಳೇ ಕಾಣುತ್ತವೆ.

ಖಾಸಗಿ ಆಸ್ಪತ್ರೆಗಳನ್ನು ಬಲಪಡಿಸಿ, ಜಿಲ್ಲೆಗೊಂದು ಸರಕಾರಿ ಆಸ್ಪತ್ರೆ ಕೊಂಡಿ ಎಂದು ಡಿವೈಎಫ್ಐ ಎಷ್ಟು ಸಲ ಧ್ವನಿ‌ ಎತ್ತಿದರೂ ಧರ್ಮಯುದ್ದದಲ್ಲಿ ಕಳೆದು ಹೋಗಿರುವ ಇಲ್ಲಿನ ಜನರಿಗೆ ಇದು ತಟ್ಟುವುದೇ ಇಲ್ಲ. ವೆನ್ ಲಾಕ್ ಸೇರಿದಂತೆ ಸರಕಾರಿ ಆಸ್ಪತ್ರೆಗಳು ಖಾಸಗಿ ಮೆಡಿಕಲ್ ಕಾಲೇಜು ತಿಮಿಂಗಲಗಳ ಉದರ ಸೇರುತ್ತಿದೆ.

ಈಗ ಇನ್ನೊಂದು ಖಾಸಗಿ ಮೆಡಿಕಲ್ ಕಾಲೇಜು ಕರಾವಳಿ‌ ಶಿಕ್ಷಣ ಸಂಸ್ಥೆಗೆ ದೊರಕಿದೆ. ಯಾರಿಗೇಳಣ ನಮ್ಮ ಪ್ರಾಬ್ಲಂ ಇದೆಲ್ಲಾ ಅರ್ಥವಾಗದ ಯಾರಿಗಾಗಿ ನಾವು ಮಾತಾಡೋಣ ಹೇಳಿ ?

ಈಗ ಶ್ರೀನಿವಾಸ ಗೌಡ್ಲು‌ ಎಂಬ ಅದಿವಾಸಿ ಯುವಕನಿಗೆ ಉಚಿತ, ಉತ್ತಮ ಚಿಕಿತ್ಸೆಗಾಗಿ ನಾವೆಲ್ಲ ಧ್ವನಿ‌ ಎತ್ತಬೇಕಿದೆ. ಜೊತೆಗೆ ಆರೋಗ್ಯ ಆಸ್ಪತ್ರೆ ಕ್ಷೇತ್ರದ ಸುಧಾರಣೆಗಾಗಿ, ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಗಾಗಿ ಧ್ಬನಿ ಎತ್ತಬೇಕಿದೆ ಅದಕ್ಕೆ ಇದು ಸಕಾಲ.

ಜಿಲ್ಲಗೊಂದು ಸರಕಾರಿ ಮೆಡಿಕಲ್ ಕಾಲೇಜು ದೊರಕಬೇಕು, ವೆನ್ ಲಾಕ್ ಮಲ್ಟಿ ಸ್ಪೆಷಾಲಿಟಿ ಉಚಿತ ಚಿಕಿತ್ಸೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಬೇಕು’‌ ಎಂದು ಒತ್ತಾಯಿಸಿದ್ದಾರೆ.

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

bengaluru

ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!

Published

on

ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.

ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending