Friday, August 12, 2022

ಮಂಗಳೂರು: ದೋಣಿ ಮೇಲೆತ್ತುವಾಗ ನೇತ್ರಾವತಿ ನದಿಗೆ ಬಿದ್ದ ಓರ್ವ ನಾಪತ್ತೆ ಮತ್ತಿಬ್ಬರ ರಕ್ಷಣೆ

ಬಂಟ್ವಾಳ: ದೋಣಿ ಮೇಲೆತ್ತುವಾಗ ಪ್ರವಾಹದ ರಭಸಕ್ಕೆ ದೋಣಿ ಸಮೇತ ನದಿಗೆ ಬಿದ್ದು ಓರ್ವ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆಯಲ್ಲಿ ನಿನ್ನೆ ಸಂಜೆ ನಡೆದಿದೆ.


ನಾಪತ್ತೆಯಾದ ಯುವಕನನ್ನು ರಾಜು ಸಾಹ್ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಆಸಿಫ್ ಮತ್ತು ಇಸಾಕ್ ಮಾಲಕತ್ವದ ದೋಣಿಯನ್ನು ನಿನ್ನೆ (ಜು.2) ಮಧ್ಯಾಹ್ನ 1 ಗಂಟೆಗೆ ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಉಪಯೋಗಿಸುತ್ತಿದ್ದ

ದೋಣಿಯನ್ನು ನದಿಯಲ್ಲಿ ಭಾರಿ ಪ್ರವಾಹದ ಕಾರಣ ದಡಕ್ಕೆ ಮೇಲೆತ್ತುವಾಗ ಉತ್ತರ ಪ್ರದೇಶ ಮೂಲದವರಾದ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರುಗಳು ದೋಣಿ ಸಮೇತ ನದಿಯ ನೀರಿನ‌ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಕೊಚ್ಚಿ ಹೋದವರಲ್ಲಿ ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಅಡ್ಯಾರ್- ಪಾವೂರು ಬ್ರಿಡ್ಜಿನ ಅಡಿಯಲ್ಲಿ ಸಿಲುಕಿ ಈಜಿ ದಡ ಸೇರಿದ್ದಾರೆ. ರಾಜು ಸಾಹ್ ಎಂಬಾತ ನೀರಿನ‌ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ.

LEAVE A REPLY

Please enter your comment!
Please enter your name here

Hot Topics

ದುಬೈನಿಂದ ಬಂದಿಳಿದ ಓರ್ವನ ನಿಕ್ಕರ್‌ನಲ್ಲಿತ್ತು 43 ಲಕ್ಷದ ಚಿನ್ನ: ಮತ್ತೋರ್ವನಲ್ಲಿ 5 ಲಕ್ಷ ರೂ ಮೌಲ್ಯದ ಫಾರಿನ್‌ ಕರೆನ್ಸಿ..!

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಹಾಗೂ ವಿದೇಶಿ ಕರೆನ್ಸಿ ಸಾಗಾಟ ಪ್ರಕರಣಗಳು ನಡೆದಿವೆದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಕಾಸರಗೋಡಿನ ಪ್ರಯಾಣಿಕರೊಬ್ಬರು ಒಳ...

“ಸ್ವಾತಂತ್ರ್ಯ ಬಂದು 75 ವರ್ಷವಾದರೂ ಲೋಕಾಯುಕ್ತ ಬೆಂಬಲಿಸುವ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ”

ಬೆಂಗಳೂರು: “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸ್ವತಂತ್ರ ಸಂಸ್ಥೆಯು ಪಾರದರ್ಶಕವಾಗಿ ಕೆಲಸ ಮಾಡಲು ಬೆಂಬಲಿಸುವ ಇಚ್ಛೆಯನ್ನು ಯಾವುದೇ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ” ಎಂದು ಕರ್ನಾಟಕ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.ಬೆಂಗಳೂರು ವಕೀಲರ...

ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಷ್ಟ್ರಧ್ವಜ ಸಂಹಿತೆ ಪಾಲಿಸಲು ದ.ಕ ಡಿಸಿ ಸೂಚನೆ

ಮಂಗಳೂರು: ಆಗಸ್ಟ್ 13 ರಿಂದ 15ರ ವರೆಗೆ ದೇಶದ ಪ್ರತೀ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಅಭಿಯಾನವನ್ನು ಹಮ್ಮಿಕೊಂಡಿದೆ.ಈ ಅಭಿಯಾನದ ಹಿನ್ನೆಲೆ ಸರ್ಕಾರಿ ಕಟ್ಟಡಗಳ...